2022ರ ಐಪಿಎಲ್ ನ 24ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಎರಡೂ ತಂಡಗಳು 4 ಪಂದ್ಯಗಳಲ್ಲಿ 3 ಗೆಲುವು, 1 ಸೋಲು ಕಂಡಿದ್ದು, ಗೆದ್ದ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ.
ಮುಂಬೈ (ಏ.14): ಅಂಕಪಟ್ಟಿಯ ಅಗ್ರಸ್ಥಾನಕ್ಕಾಗಿ ನಡೆಯುತ್ತಿರುವ ಮುಖಾಮುಖಿಯಲ್ಲಿ ರಾಜಸ್ಥಾನ ರಾಯಲ್ಸ್ (Rajasthan Royals) ಹಾಗೂ ಗುಜರಾತ್ ಟೈಟಾನ್ಸ್ (Gujarat Titans) ತಂಡಗಳು ಗುರುವಾರ ಮುಖಾಮುಖಿಯಾಗಲಿದೆ. ಟಾಸ್ ಗೆದ್ದ ತಂಡ ರಾಜಸ್ಥಾನ ರಾಯಲ್ಸ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.. ಮುಂಬೈನ ಡಿವೈ ಪಾಟೀಲ್ (DY Patil) ಮೈದಾನದಲ್ಲಿ ಪಂದ್ಯ ನಡೆಯಲಿದೆ.
ರಾಜಸ್ಥಾನ (RR) ವಿರುದ್ಧದ ಪಂದ್ಯಕ್ಕೆ ಗುಜರಾತ್ ಟೈಟಾನ್ಸ್ (GT) ಒಂದೇ ಒಂದು ಬದಲಾವಣೆಯನ್ನು ಮಾಡಿದೆ. ಯಶ್ ದಯಾಳ್ (Yash Dayal) ಗುಜರಾತ್ ಟೈಟಾನ್ಸ್ ಪರವಾಗಿ ಪಾದಾರ್ಪಣೆ ಮಾಡಲಿದ್ದಾರೆ. ಇವರಿಗೆ ಕೋಚ್ ಆಶಿಶ್ ನೆಹ್ರಾ ಕ್ಯಾಪ್ ನೀಡಿದರು. ದರ್ಶನ್ ನಲ್ಕಂಡೆ ಬದಲು ಯಶ್ ಸ್ಥಾನ ಪಡೆದಿದ್ದರೆ, ಸಾಯಿ ಸುದರ್ಶನ್ ಬದಲು ವಿಜಯ್ ಶಂಕರ್ ಆಡುವ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಗಾಯಾಳು ಟ್ರೆಂಟ್ ಬೌಲ್ಟ್ ಬದಲು, ಜಿಮ್ಮಿ ನೀಶಾಮ್ ಕಣಕ್ಕಿಳಿಯಲಿದ್ದಾರೆ.
ರಾಜಸ್ಥಾನ ರಾಯಲ್ಸ್ ಪ್ಲೇಯಿಂಗ್ ಇಲೆವೆನ್: ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್( ನಾಯಕ, ವಿ.ಕೀ), ರಾಸ್ಸಿ ವ್ಯಾನ್ ಡೆರ್ ಡುಸೆನ್, ಶಿಮ್ರಾನ್ ಹೆಟ್ಮೆಯರ್, ಜೇಮ್ಸ್ ನೀಶಮ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಕುಲದೀಪ್ ಸೇನ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಾಹಲ್
ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ ಇಲೆವೆನ್: ಮ್ಯಾಥ್ಯೂ ವೇಡ್(ವಿ.ಕೀ), ಶುಭಮನ್ ಗಿಲ್, ವಿಜಯ್ ಶಂಕರ್, ಹಾರ್ದಿಕ್ ಪಾಂಡ್ಯ(ನಾಯಕ), ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಲಾಕಿ ಫರ್ಗುಸನ್, ಮೊಹಮ್ಮದ್ ಶಮಿ, ಯಶ್ ದಯಾಳ್
ರಾಜಸ್ಥಾನ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಈವರೆಗೂ ಬಹುತೇಕ ಒಂದೇ ರೀತಿಯಲ್ಲಿ ಕಂಡಿವೆ. ಎರಡೂ ತಂಡಗಳು ನಾಲ್ಕು ಪಂದ್ಯಗಳನ್ನು ಆಡಿದ್ದು, 6 ಅಂಕಗಳನ್ನು ಪಡೆದುಕೊಂಡಿವೆ. ಮೂರು ಗೆಲುವು ಹಾಗೂ 1 ಸೋಲನ್ನು ತಂಡಗಳು ಹೊಂದಿವೆ. ಸಂಜು ಸ್ಯಾಮನ್ಸ್ ಹಾಗೂ ಹಾರ್ದಿಕ್ ಪಾಂಡ್ಯ ಈವರೆಗೂ ಕೇವಲ ಒಮ್ಮೆ ಮಾತ್ರವೇ ಟಾಸ್ ಜಯಿಸಿದ್ದಾರೆ. ಇನ್ನೊಂದೆಡೆ ರಾಜಸ್ಥಾನ ರಾಯಲ್ಸ್ ತಂಡ ಟೂರ್ನಿಯಲ್ಲಿ ಈವರೆಗೂ ಚೇಸ್ ಮಾಡಿಲ್ಲ.
IPL 2022: ಸನ್‌ರೈಸರ್ಸ್ vs ಕೆಕೆಆರ್ ನಡುವಿನ ಪಂದ್ಯ ಗೆಲ್ಲೋರು ಯಾರು..?
ಏನನ್ನು ನಿರೀಕ್ಷಿಸಬಹುದು: ಚೆನ್ನೈ ಹಾಗೂ ಆರ್ ಸಿಬಿ ನಡುವಿನ ಪಂದ್ಯಕ್ಕೆ ಬಳಸಿದ ಪಿಚ್ ಅನ್ನು ನೀಡಲಾಗಿತ್ತು. ಇದರಿಂದಾಗಿ 2ನೇ ಇನ್ನಿಂಗ್ಸ್ ನಲ್ಲಿ ಸ್ಪಿನ್ನರ್ ಗಳು 7 ವಿಕೆಟ್ ಉರುಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅದೇ ರೀತಿಯ ಪಿಚ್ ಅನ್ನು ನೀಡಿದರೆ, ರಾಜಸ್ಥಾನ ಹಾಗೂ ಗುಜರಾತ್ ತಂಡಗಳಲ್ಲಿ ಅಗತ್ಯವಾದ ಸ್ಪಿನ್ ಶಕ್ತಿಯನ್ನು ಹೊಂದಿದ್ದಾರೆ. ಐಪಿಎಲ್ ನ ಮೊದಲ ವಾರದ ಪಂದ್ಯಗಳಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 177 ಆಗಿದ್ದರೆ, 2ನೇ ವಾರದಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 163ಕ್ಕೆ ಇಳಿದಿದೆ.
ರೋಹಿತ್ ಶರ್ಮಾ ನಾಯಕತ್ವದಲ್ಲೇನೂ ತಪ್ಪಿಲ್ಲ, ತಪ್ಪೆಲ್ಲಾ ಬೌಲರ್‌ಗಳದ್ದೇ ಎಂದ ಇಂಗ್ಲೆಂಡ್ ಕ್ರಿಕೆಟಿಗ..!
ಗರಿಷ್ಠ ಸಿಕ್ಸರ್ ಹಾಗೂ ಕನಿಷ್ಠ ಸಿಕ್ಸರ್ಸ್ ಸಿಡಿಸಿದ ತಂಡಗಳ ಹೋರಾಟ: ಈ ಪಂದ್ಯ ಗರಿಷ್ಠ ಸಿಕ್ಸರ್ಸ್ ಹಾಗೂ ಕನಿಷ್ಠ ಸಿಕ್ಸರ್ಸ್ ಸಿಡಿಸಿದ ತಂಡಗಳ ಹೋರಾಟ. ರಾಜಸ್ಥಾನ ರಾಯಲ್ಸ್ ತಂಡ ಪ್ರತಿ ಪಂದ್ಯಕ್ಕೆ 11.5ರ ಸರಾಸರಿಯಲ್ಲಿ ಸಿಕ್ಸರ್ ಸಿಡಿಸಿದ್ದರೆ, ಗುಜರಾತ್ ಟೈಟಾನ್ಸ್ ತಂಡ ಪ್ರತಿ ಪಂದ್ಯಕ್ಕೆ 4 ರಂತೆ ಸಿಕ್ಸರ್ ಸಿಡಿಸಿದರೆ, ಜೋಸ್ ಬಟ್ಲರ್ (15) ಹಾಗೂ ಶಿಮ್ರೋನ್ ಹೆಟ್ಮೆಯರ್ (14) ಐಪಿಎಲ್ 2022ರ ಗರಿಷ್ಠ ಸಿಕ್ಸರ್ಸ್ ಸಿಡಿಸಿದ ಬ್ಯಾಟ್ಸ್ ಮನ್ ಗಳಾಗಿದ್ದಾರೆ.
ನಿಮಗಿದು ಗೊತ್ತೇ?
* ರಾಜಸ್ಥಾನ ರಾಯಲ್ಸ್ ತಂಡವು ಆರೆಂಜ್ ಕ್ಯಾಪ್ (ಜೋಸ್ ಬಟ್ಲರ್) ಹಾಗೂ ಪರ್ಪಲ್ ಕ್ಯಾಪ್ (ಯಜುವೆಂದದ್ರ ಚಾಹಲ್) ಹೊಂದಿರುವ ತಂಡವಾಗಿದೆ.
* ರಶೀದ್ ಖಾನ್ ಇನ್ನೊಂದು ವಿಕೆಟ್ ಉರುಳಿಸಿದರೆ, ಐಪಿಎಲ್ ನಲ್ಲಿ 100 ವಿಕೆಟ್ ಸಾಧನೆ ಮಾಡಿದ ನಾಲ್ಕನೇ ವಿದೇಶಿ ಬೌಲರ್ ಎನಿಸಲಿದ್ದಾರೆ. ಸುನೀಲ್ ನಾರಾಯಣ್ (147*), ಲಸಿತ್ ಮಾಲಿಂಗ (170) ಹಾಗೂ ಡ್ವೇನ್ ಬ್ರಾವೋ (174*) ಮೊದಲ ಮೂರು ಸ್ಥಾನಗಳಲ್ಲಿದ್ದಾರೆ.