IPL 2022 ಟಾಸ್ ಗೆದ್ದ ಆರ್ ಸಿಬಿ ತಂಡ ಬೌಲಿಂಗ್ ಆಯ್ಕೆ

By Santosh Naik  |  First Published May 13, 2022, 7:05 PM IST

ಲೀಗ್ ಹಂತದಲ್ಲಿ ಸದ್ಯ ಕೇವಲ ಎರಡು ಪಂದ್ಯಗಳನ್ನು ಹೊಂದಿರುವ ಆರ್ ಸಿಬಿ ತಂಡ, ಸಿಕ್ಕ ಅವಕಾಶದಲ್ಲಿ ಪ್ಲೇ ಆಫ್ ಸ್ಥಾನವನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಟ ಮಾಡಲಿದೆ. ಅದರಂತೆ ಶುಕ್ರವಾರದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಆರ್ ಸಿಬಿ ಎದುರಿಸಲಿದೆ.


ಮುಂಬೈ (ಮೇ. 13): ಐಪಿಎಲ್ ನ (IPL) ಲೀಗ್ ಹಂತ ಒಂದು ರೀತಿ 10 ಸಾವಿರ ಮೀಟರ್ ರೇಸ್ ಇದ್ದಂತೆ. ಆರಂಭದಲ್ಲಿ ನಿಧಾನವಾಗಿ ಓಡಿದರೂ, ಕೊನೇ ಹಂತದಲ್ಲಿ ಸುಸ್ತಾಗಿದ್ದರೂ ಸಹ ವೇಗವಾಗಿ ಓಡಬೇಕಾಗುತ್ತದೆ. ಆರ್ ಸಿಬಿ (RCB) ಕೂಡ ಅಂಥದ್ದೊಂದು ಹಂತದಲ್ಲಿ ನಿಂತಿದೆ. ಲೀಗ್ ಹಂತದಲ್ಲಿ ಕೇವಲ 2 ಪಂದ್ಯ ಬಾಕಿ ಉಳಿಸಿಕೊಂಡಿರುವ ಆರ್ ಸಿಬಿ (Royal Challengers Bangalore), ಪ್ಲೇ ಆಫ್ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ  ಪಂಜಾಬ್ ಕಿಂಗ್ಸ್ (Punjab Kings) ತಂಡವನ್ನು ಎದುರಿಸಲಿದೆ.

ಬ್ರಬೋರ್ನ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದ್ದು, ಟಾಸ್ ಗೆದ್ದಿರುವ ಆರ್ ಸಿಬಿ ತಂಡ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಆರ್ ಸಿಬಿ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇನ್ನೊಂದೆಡೆ ಪಂಜಾಬ್ ಕಿಂಗ್ಸ್ (PBKS) ತಂಡ ಸಂದೀಪ್ ಶರ್ಮ ಬದಲು ಹರ್ ಪ್ರೀತ್ ಬ್ರಾರ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಂಡಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ ಇಲೆವೆನ್: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ (ವಿ.ಕೀ), ಮಹಿಪಾಲ್ ಲೊಮ್ರೋರ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್

ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್: ಜಾನಿ ಬೈರ್‌ಸ್ಟೋವ್, ಶಿಖರ್ ಧವನ್, ಭಾನುಕಾ ರಾಜಪಕ್ಸೆ, ಮಯಾಂಕ್ ಅಗರ್ವಾಲ್(ನಾಯಕ), ಜಿತೇಶ್ ಶರ್ಮಾ(ವಿ.ಕೀ), ಲಿಯಾಮ್ ಲಿವಿಂಗ್‌ಸ್ಟೋನ್, ರಿಷಿ ಧವನ್, ಕಗಿಸೊ ರಬಾಡ, ರಾಹುಲ್ ಚಾಹರ್, ಹರ್‌ಪ್ರೀತ್ ಬ್ರಾರ್, ಅರ್ಶ್‌ದೀಪ್ ಸಿಂಗ್

Tap to resize

Latest Videos

ನಿಮಗಿದು ಗೊತ್ತೇ?
ಈ ಬಾರಿಯ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗಿದ್ದಾಗ 27 ಸಿಕ್ಸರ್ ಗಳು ಸಿಡಿದಿದ್ದವು. ಇದು 2022ರ ಐಪಿಎಲ್ ಪಂದ್ಯವೊಂದರಲ್ಲಿ ದಾಖಲಾದ ಗರಿಷ್ಠ ಸಿಕ್ಸರ್ ಗಳ ಸಂಖ್ಯೆ ಎನಿಸಿದೆ.

ಪಂಜಾಬ್ ಕಿಂಗ್ಸ್ ತಂಡದ ವೇಗಿ ಆರ್ಶ್ ದೀಪ್ ಸಿಂಗ್ (Arshdeep Singh ),  ಹಾಲಿ ಐಪಿಎಲ್ ನಲ್ಲಿ ಈವರೆಗೂ ಮಾಡಿದ 38 ಓವರ್ ಗಳಿಂದ ಕೇವಲ 5 ಸಿಕ್ಸರ್ ಳನ್ನು ನೀಡಿದ್ದಾರೆ. ಐಪಿಎಲ್ ಋತುವೊಂದರಲ್ಲಿ 35 ಹಾಗೂ ಅದಕ್ಕಿಂತ ಹೆಚ್ಚಿನ ಓವರ್ ಗಳನ್ನು ಎಸೆದ ಬೌಲರ್ ಗಳ ಪೈಕಿ ಅತೀ ಕಡಿಮೆ ಸಿಕ್ಸರ್ ಬಿಟ್ಟುಕೊಟ್ಟ ಬೌಲರ್ ಎನಿಸಿದ್ದಾರೆ.

MS Dhoni ತಮಿಳು ಚಿತ್ರರಂಗಕ್ಕೆ ; Nayanthara ನಾಯಕಿ?

ಐಪಿಎಲ್ 2022ರಲ್ಲಿ ಆರ್ ಸಿಬಿ ತಂಡದ ಆಟಗಾರ ವಿರಾಟ್ ಕೊಹ್ಲಿ (Virat Kohli), 8 ಬಾರಿಗೆ ಇನ್ನಿಂಗ್ಸ್ ನ ಮೊದಲ 15 ಎಸೆತಗಳ ಒಳಗಾಗಿಯೇ ವಿಕೆಟ್ ಒಪ್ಪಿಸಿದ್ದಾರೆ. ಅಗ್ರ 6 ಕ್ರಮಾಂಕದ ಬ್ಯಾಟ್ಸ್ ಮನ್ ಗಳ ಪೈಕಿ ಇದು ಗರಿಷ್ಠ.

IPL 2022: ಆರ್‌ಸಿಬಿ ತಂಡಕ್ಕೆ ಟಾಪ್‌ 2ಗೇರಲು ಇನ್ನೂ ಇದೆ ಅವಕಾಶ..! ಹೇಗೆ ಗೊತ್ತಾ..?

15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯು ನಿರ್ಣಾಯಕಘಟ್ಟದತ್ತ ಸಾಗುತ್ತಿದೆ. ಈಗಾಗಲೇ ಹಾರ್ದಿಕ್ ಪಾಂಡ್ಯ (Hardik Pandya) ನೇತೃತ್ವದ ಗುಜರಾತ್ ಟೈಟಾನ್ಸ್‌ (Gujarat Titans) ತಂಡವು ಪ್ಲೇ ಆಫ್‌ಗೆ ಅರ್ಹತೆಗಿಟ್ಟಿಸಿಕೊಂಡಿದ್ದು, ಇನ್ನು ಮೂರು ಸ್ಥಾನಗಳಿಗಾಗಿ ಎಂಟು ತಂಡಗಳು ಪೈಪೋಟಿ ನಡೆಸಲಿವೆ. ಇನ್ನು ಚೊಚ್ಚಲ ಐಪಿಎಲ್‌ ಟ್ರೋಫಿಯ ಕನವರಿಕೆಯಲ್ಲಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (Royal Challengers Bangalore) ತಂಡವು ಬಹುತೇಕ ಪ್ಲೇ ಆಫ್‌ ಹೊಸ್ತಿಲಲ್ಲಿದ್ದು, ಲೀಗ್ ಹಂತ ಮುಕ್ತಾಯದ ಬಳಿಕ ಅಂಕಪಟ್ಟಿಯಲ್ಲಿ ಟಾಪ್ 2ನೊಳಗೆ ಸ್ಥಾನ ಪಡೆಯಲು ಸುವರ್ಣಾವಕಾಶವಿದೆ. 

click me!