IPL 2022 ಕೊನೆಗೂ ಗೆಲುವಿನ ದಡ ಸೇರಿದ ಮುಂಬೈ, ಚೆನ್ನೈ ಅಧಿಕೃತವಾಗಿ ಟೂರ್ನಿಯಿಂದ ಔಟ್!

Published : May 12, 2022, 10:54 PM IST
IPL 2022 ಕೊನೆಗೂ ಗೆಲುವಿನ ದಡ ಸೇರಿದ ಮುಂಬೈ, ಚೆನ್ನೈ ಅಧಿಕೃತವಾಗಿ ಟೂರ್ನಿಯಿಂದ ಔಟ್!

ಸಾರಾಂಶ

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆದ್ದ ಮುಂಬೈ ತಿಲಕ್ ವರ್ಮಾ ಹೋರಾಟದಿಂದ ಮುಂಬೈಗೆ ಗೆಲುವು ಅಧಿಕೃತವಾಗಿ ಪ್ಲೇ ಆಫ್ ರೇಸ್‌ನಿಂದ ಚೆನ್ನೇ ಹೊರಕ್ಕೆ

ಮುಂಬೈ(ಮೇ.12): ಗೆಲುವಿಗೆ ಸುಲಭ ಟಾರ್ಗೆಟ್ ಪಡೆದರೂ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಆತಂಕ ಎದುರಿಸಿದ  ಮುಂಬೈ ಇಂಡಿಯನ್ಸ್ ಕೊನೆಗೂ ಗೆಲುವಿನ ದಡ ಸೇರಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 5 ವಿಕೆಟ್ ಗೆಲುವು ದಾಖಲಿಸಿದೆ. ಆದರೆ ಮುಗ್ಗರಿಸಿದ ಚೆನ್ನೈ ಸೂಪರ್ ಕಿಂಗ್ಸ್ ಅಧಿಕೃತವಾಗಿ ಐಪಿಎಲ್ 2022 ಟೂರ್ನಿಯಿಂದ ಹೊರಬಿದ್ದಿದೆ.

ಗೆಲುವಿಗೆ 98 ರನ್ ಟಾರ್ಗೆಟ್ ಪಡೆದ ಮುಂಬೈ  ಇಂಡಿಯನ್ಸ್ ಸುಲಭವಾಗಿ ರನ್ ಚೇಸ್ ಮಾಡಲಿದೆ ಅನ್ನೋದು ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ಕಣಕ್ಕಿಳಿದ ಮುಂಬೈ ಇಂಡಿಯನ್ಸ್ ಲೆಕ್ಕಾಚಾರಾ ಉಲ್ಟಾ ಆಯಿತು. ಆರಂಭದಲ್ಲೇ ಇಶಾನ್ ಕಿಶನ್ ವಿಕೆಟ್ ಕಳೆದುಕೊಂಡಿತು. ಕಿಶನ್ 6 ರನ್ ಸಿಡಿಸಿ ಔಟಾದರು. ನಾಯಕ ರೋಹಿತ್ ಶರ್ಮಾ ಕೆಲ ಹೊತ್ತು ಬ್ಯಾಟ್ ಬೀಸಿ 18 ರನ್ ಸಿಡಿಸಿ ಔಟಾದರು. 30 ರನ್‌ಗಳಿಗೆ ಮುಂಬೈ ಇಂಡಿಯನ್ಸ್ 2 ವಿಕೆಟ್ ಕಳೆದುಕೊಂಡಿತು. 

ಆರಂಭಿಕರ ಪತನದ ಬೆನ್ನಲ್ಲೇ ಡೆನಿಯಲ್ ಸ್ಯಾಮ್ಸ್ ಕೇವಲ 1 ರನ್ ಸಿಡಿಸಿ ಔಟಾದರು. ಇತ್ತ ತ್ರಿಸ್ಟಾನ್ ಸ್ಬಬ್ಸ್ ಡಕೌಟ್ ಆದರು. ಸುಲಭ ಟಾರ್ಗೆಟ್ ಮುಂಬೈಗೆ ಕಠಿಣವಾಗ ತೊಡಗಿತು.  ಆದರೆ ತಿಲಕ್ ವರ್ಮಾ ಹಾಗೂ ಹೃತಿಕ್ ಶೋಕಿನ್ ಜೊತೆಯಾಟದಿಂದ ಮುಂಬೈ ಚೇತರಿಸಿಕೊಂಡಿತು. ಇನ್ನೇನು ಗೆಲುವಿನ ಆತ್ಮವಿಶ್ವಾಸ ಹೆಚ್ಚಾಗುತ್ತಿದ್ದಂತೆ ಹೃತಿಕ್ ಶೋಕೀನ್ 18 ರನ್ ಸಿಡಿಸಿ ಔಟಾದರು. ಮುಂಬೈ ಪಾಳಯದಲ್ಲಿ ಮತ್ತೆ ಆತಂಕ ಆವರಿಸಿಕೊಂಡಿತು.

ತಿಲಕ್ ವರ್ಮಾ ಹಾಗೂ ಟಿಮ್ ಡೇವಿಡ್ ಹೋರಾಟದಿಂದ ಮುಂಬೈ ಇಂಡಿಯನ್ಸ್ ನಿಟ್ಟುಸಿರುಬಿಟ್ಟಿತು. ತಿಲಕ್ ವರ್ಮಾ ಅಜೇಯ 34 ರನ್ ಸಿಡಿಸಿದರೆ, ಟಿಮ್ ಡೇವಿಡ್ ಅಜೇಯ 16 ರನ್ ಸಿಡಿಸಿದರು. ಈ ಮೂಲಕ ಮುಂಬೈ ಇಂಡಿಯನ್ಸ್ 14.5  ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.

ಮುಂಬೈ ಇಂಡಿಯನ್ಸ್ 12 ಪಂದ್ಯದಲ್ಲಿ 3 ಗೆಲುವು ದಾಖಲಿಸಿಕೊಂಡಿತು. ಈ ಮೂಲಕ ಸೋಲಿನ ಅಂತ ಕಡಿಮೆ ಮಾಡಿಕೊಂಡಿತು. ಇತ್ತ ಚೆನ್ನೈ ಅಧಿಕೃತವಾಗಿ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿತು. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮುಂಬೈ ಇಂಡಿಯನ್ಸ್‌ಗಿಂದು ಪಂಜಾಬ್ ಕಿಂಗ್ಸ್ ಚಾಲೆಂಜ್..! ಇಂದು ಪಾಂಡ್ಯ ಪಡೆ ಸೋತರೇ, ಮುಂದೇನು?
ಆರ್‌ಸಿಬಿ ಈಗಿನ ಸಕ್ಸಸ್‌ಗೆ ಮುಂಬೈ ಇಂಡಿಯನ್ಸ್ ನೇರ ಕಾರಣ! 4 ಮಹಾ ಎಡವಟ್ಟು ಮಾಡಿದ 5 ಬಾರಿಯ ಚಾಂಪಿಯನ್