IPL 2022: ವಿರಾಟ್ ಕೊಹ್ಲಿ ಜೊತೆ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ ಮ್ಯಾಕ್ಸ್​ವೆಲ್ ಹೇಳಿದ್ದೇಕೆ..?

Published : May 07, 2022, 01:50 PM IST
IPL 2022: ವಿರಾಟ್ ಕೊಹ್ಲಿ ಜೊತೆ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ ಮ್ಯಾಕ್ಸ್​ವೆಲ್ ಹೇಳಿದ್ದೇಕೆ..?

ಸಾರಾಂಶ

* ಆರ್‌ಸಿಬಿ ಮಾಜಿ ನಾಯಕನ ಮೇಲೆ ಸಿಟ್ಟಾದ್ರಾ ಗ್ಲೆನ್ ಮ್ಯಾಕ್ಸ್‌ವೆಲ್ * ಕೊಹ್ಲಿ ಜತೆ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ ಎಂದಿದ್ದೇಕೆ ಮ್ಯಾಕ್ಸ್‌ವೆಲ್ * ಸಿಎಸ್‌ಕೆ ಎದುರಿನ ಗೆಲುವಿನ ಬಳಿಕ ಗ್ಲೆನ್ ಮ್ಯಾಕ್ಸ್‌ವೆಲ್ ಹೇಳಿದ್ದೇನು?

ಮುಂಬೈ(ಮೇ.07): ಬದ್ಧವೈರಿ ಸಿಎಸ್​ಕೆ ಮಣಿಸಿದ ಖುಷಿಗೆ ಆರ್​ಸಿಬಿ ಫ್ಯಾನ್ಸ್ (RCB Fans)​ ಖುಷಿ ಪಡಬೇಕೋ ? ಇಲ್ಲ ಬೇಸರಗೊಳ್ಳಬೇಕೋ ಒಂದು ಗೊತ್ತಿಲ್ಲ. ಹ್ಯಾಟ್ರಿಕ್ ಸೋಲಿನ ಸರಪಳಿ ಕಳಚಿತು. ಇನ್ಮೇಲೆ ಆರ್​ಸಿಬಿಗೆ ಲಕ್​​​​​​ ಶುರು. ಉಳಿದ ಮೂರು ಪಂದ್ಯಗಳನ್ನ ಜಯಿಸಿ, ಖಂಡಿತ ಕೆಂಪಂಗಿ ಬಾಯ್ಸ್​ ಪ್ಲೇ ಆಫ್​​ ರೇಸ್​​​ಗೆ ಎಂಟ್ರಿಕೊಡ್ತಾರೆ ಅಂತ ಆರ್​ಸಿಬಿ ಡೈ ಹಾರ್ಡ್​ ಫ್ಯಾನ್ಸ್​ ಇಲ್ಲದ ಕನಸು ಕಾಣ್ತಿದ್ದಾರೆ. ಇಂತಹ ಟೈಮಲ್ಲೇ ತಂಡದಲ್ಲಿ ಮನಸ್ತಾಪದ ಬಿರುಗಾಳಿ ಬೀಸಿದೆಯಾ ಅನ್ನೋ ಪ್ರಶ್ನೆ ಎದ್ದಿದೆ. ಯಾಕಂದ್ರೆ ಸ್ಟಾರ್​ ಆಲ್​ರೌಂಡರ್​​​ ಗ್ಲೆನ್​ ಮ್ಯಾಕ್ಸ್​ವೆಲ್ (Glenn Maxwell)​​ ವಿರಾಟ್ ಕೊಹ್ಲಿ ವಿರುದ್ಧ ಗುಡುಗಿದ್ದಾರೆ.

ಕೊಹ್ಲಿ ವಿರುದ್ಧ ಮ್ಯಾಕ್ಸ್​ವೆಲ್ ಕೋಪ:

ಯೆಸ್​​, ಆರ್​ಸಿಬಿ ಜೋಡೆತ್ತುಗಳು ಅಂತ ಕರೆಸಿಕೊಳ್ತಿದ್ದ ಕೊಹ್ಲಿ ಹಾಗೂ ಮ್ಯಾಕ್ಸಿ ನಡುವೆ ಈಗ ಎಲ್ಲವೂ ಸರಿಯಿಲ್ವ ಅನ್ನೋ ಅನುಮಾನ ಮೂಡ್ತಿದೆ. ವಿರಾಟ್ ಜೊತೆ ಆತ್ಮೀಯವಾಗಿದ್ದ ಸ್ಪೋಟಕ ಬ್ಯಾಟರ್​​ ಮ್ಯಾಕ್ಸ್​ವೆಲ್​​ ಸಿಟ್ಟಾಗಿದ್ದಾರೆ. ಕೊಹ್ಲಿಯ ಆ ಒಂದು ವಿಚಾರ ಆಸೀಸ್​​ ಕ್ರಿಕೆಟನಿಗೆ ಹಿಡಿಸಿಲ್ಲ. ಹೀಗಾಗಿ ಇನ್ನುಂದೆ ಮ್ಯಾಕ್ಸಿ, ವಿರಾಟ್ ಜೊತೆ ಬ್ಯಾಟಿಂಗ್​ ಮಾಡದಿರಲು ನಿರ್ಧರಿಸಿದ್ದಾರೆ. ಈ ಶಾಕಿಂಗ್​ ಮಾತನ್ನ ಸ್ವತಃ ಮ್ಯಾಕ್ಸಿನೇ ಚೆನ್ನೈ ವಿರುದ್ಧದ ಪಂದ್ಯದ ಬಳಿಕ ಹೇಳಿದ್ದಾರೆ. 

ನಾನು ನಿನ್ನ ಜೊತೆ ಬ್ಯಾಟಿಂಗ್​ ಮಾಡಲು ಸಾಧ್ಯವಿಲ್ಲ:

ಕೇಳಿದ್ರಾ ವೀಕ್ಷಕರೇ, ಕೊಹ್ಲಿ (Virat Kohli) ಮೇಲಿನ ಮ್ಯಾಕ್ಸಿಯ ಆಕ್ರೋಶ ಮಾತುಗಳನ್ನ. ಡ್ರೆಸ್ಸಿಂಗ್ ರೂಮ್​​ನಲ್ಲಿ ಎಲ್ಲರೂ ಗೆಲುವನ್ನ ಸಂಭ್ರಮಿಸ್ತಿದ್ರೆ ಇತ್ತ ಮ್ಯಾಕ್ಸ್​ವೆಲ್​​​​​​ ಕೊಹ್ಲಿ ಬಳಿ ತೆರಳಿ ನಾನು ಇನ್ನುಂದೆ ಯಾವುದೇ ಕಾರಣಕ್ಕೂ ನಿನ್ನ ಜೊತೆ ಬ್ಯಾಟಿಂಗ್ ಮಾಡಲ್ಲ. ನೀನು ವೇಗವಾಗಿ ರನ್​ ಗಳಿಸ್ತಿಯ. 1 ರನ್​​ ಓಡುವ ಜಾಗದಲ್ಲಿ  2 ರನ್​​ ಕದಿಯಲು ಪ್ರಯತ್ನಿಸ್ತಿಯ ಎಂದೂ ಮ್ಯಾಕ್ಸಿ, ಕೊಹ್ಲಿ  ವಿರುದ್ಧ ಸಿಟ್ಟಾಗಿದ್ದಾರೆ. ಅಂದಹಾಗೇ ಮ್ಯಾಕ್ಸಿ, ಕೊಹ್ಲಿ ಜೊತೆ ಬ್ಯಾಟಿಂಗ್​​ ಮಾಡಲ್ಲ ಎಂದಿದ್ದು ನಿಜ. ಹಾಗಂತ ನೀವು ಆತಂಕಕ್ಕೊಳಗಾಗಬೇಕಿಲ್ಲ. ಅಥವಾ ಅಯ್ಯೋ ಇದೇನಪ್ಪಾ ನಿರ್ಣಾಯಕ ಪಂದ್ಯಗಳು ಸಮೀಸ್ತಿರುವಾಗ ತಂಡದ ಜೋಡೆತ್ತುಗಳೇ ಹೀಗೆ ಕಿತ್ತಾಡಿಕೊಂಡ್ರೆ ತಂಡದ ಪಾಡೇನು ಅಂತ ತುಂಬಾ ಚಿಂತಿಸಲೂ ಬೇಕಿಲ್ಲ. ಯಾಕಂದ್ರೆ ಮ್ಯಾಕ್ಸ್​ವೆಲ್​ ಕೊಹ್ಲಿ ವಿರುದ್ಧ ಹೀಗೆ ಮಾತನಾಡಿದ್ದು ನಿಜವಾದ್ರು, ಅದು ಕೋಪದಿಂದಲ್ಲ. ಬದಲಿಗೆ ತಮಾಷೆಗಾಗಿ. 

IPL 2022: ಕೆಕೆಆರ್‌ಗೆ ಮಾಡು ಇಲ್ಲವೇ ಮಡಿ ಪಂದ್ಯ..!

ಹೌದು, ಚೆನ್ನೈ ಸಂಹಾರದ ಬಳಿಕ ಕೊಹ್ಲಿ ಹಾಗೂ ಮ್ಯಾಕ್ಸ್​ವೆಲ್​  ಡ್ರೆಸ್ಸಿಂಗ್ ರೂಮ್​​ನಲ್ಲಿ ಫನ್ನಿಯಾಗಿ ಹೀಗೆ ಮಾತನಾಡಿದ್ದಾರೆ ಅಷ್ಟೇ. ಅದನ್ನ ಬಿಟ್ಟು ಸಿರೀಸ್ ಆಗಿ ಮ್ಯಾಕ್ಸ್​​ವೆಲ್​​​, ಇನ್ಮುಂದೆ ನಾನು ನಿನ್ನ ಜತೆ ಬ್ಯಾಟಿಂಗ್​ ಮಾಡಲ್ಲ ಎಂದು ಹೇಳಿಲ್ಲ. ಅಂಗಳದಲ್ಲಿ ರನ್ ಕದಿಯುವಾಗ, ಕೊಹ್ಲಿಯಷ್ಟು ಫಾಸ್ಟಾಗಿ ಡೇಂಜರಸ್​ ಬ್ಯಾಟರ್​​ಗೆ ಓಡಲು ಆಗಲ್ಲ. ಅದು ಎಲ್ಲರಿಗೂ ಗೊತ್ತಿದೆ. 33ರಲ್ಲೂ ವಿರಾಟ್ ಮೋಸ್ಟ್​ ಫಿಟ್ ಆ್ಯಂಡ್ ಫೈನ್​ ಕ್ರಿಕೆಟರ್​​. ಯುವ ಕ್ರಿಕೆಟಿಗರೇ ನಾಚುವಂತ ಫಿಟ್ನೆಸ್​ ಕಾಯ್ದುಕೊಂಡಿದ್ದಾರೆ. ಈ ಕಾರಣಕ್ಕಾಗಿ ಮ್ಯಾಕ್ಸವೆಲ್​ ಹೀಗೆಲ್ಲ ಹೇಳಿದ್ದಾರಷ್ಟೇ. ಅದನ್ನ ಬಿಟ್ರೆ ಇಬ್ಬರ ಮಧ್ಯೆ ಕೋಪಗೀಪ ಏನಿಲ್ಲ. ಈಗಲೂ ಇಬ್ಬರು ಆರ್​ಸಿಬಿಯ ಜೋಡೆತ್ತುಗಳೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಮೋಸ ಮಾಡಿಲ್ಲ, ಗಾಸಿಪ್‌ ನಂಬಬೇಡಿ ಎಂದ Palash Muchhal; ಮದುವೆ ಕ್ಯಾನ್ಸಲ್‌ ಎಂದ Smriti Mandhana
ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana