IPL 2022 ಆರ್ ಸಿಬಿ-ಚೆನ್ನೈ ಮ್ಯಾಚ್ ನಡುವೆ ಹುಡುಗಿಯಿಂದಲೇ ಹುಡುಗನಿಗೆ ಪ್ರಪೋಸ್!

By Santosh Naik  |  First Published May 4, 2022, 11:35 PM IST

ಈ ಪ್ರಪೋಸಲ್ ಕುರಿತಾಗಿ ಟ್ವೀಟ್ ಮಾಡಿರುವ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್, "ಆರ್ ಸಿಬಿ ಫ್ಯಾನ್ ಗೆ ಪ್ರಪೋಸ್ ಮಾಡುವ ಆಕೆಯ ನಿರ್ಧಾರ ತುಂಬಾ ಸ್ಮಾರ್ಟ್!. ಆರ್ ಸಿಬಿ ತಂಡಕ್ಕೆ ಇಷ್ಟು ನಿಷ್ಠನಾಗಿರುವ ವ್ಯಕ್ತಿ, ತನ್ನ ಪಾರ್ಟ್ನರ್ ವಿಚಾರದಲ್ಲೂ ನಿಷ್ಠನಾಗಿರುತ್ತಾನೆ ಎಂದು ಆಕೆ ಅಂದುಕೊಂಡಿದ್ದಾಳೆ. ನಿಮಗೆ ಒಳ್ಳೆಯದಾಗಲಿ, ಪ್ರಪೋಸ್ ಮಾಡೋಕೆ ಒಳ್ಳೆಯ ದಿನವನ್ನೇ ಆಯ್ಕೆ ಮಾಡಿದ್ದೀರಿ' ಎಂದು ಬರೆದುಕೊಂಡಿದ್ದಾರೆ.
 


ಪುಣೆ (ಮೇ.4): ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡಗಳು ಗೆಲುವಿಗಾಗಿ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಹೋರಾಟ ನಡೆಸುತ್ತಿದ್ದರೆ, ಇನ್ನೊಂದೆಡೆ ಸ್ಟೇಡಿಯಂನ ಸ್ಟ್ಯಾಂಡ್ ನಲ್ಲಿ ವಿಶೇಷ ಘಟನೆ ಸಾಕ್ಷಿಯಾಯಿತು.

ಸಾಮಾನ್ಯವಾಗಿ ಸ್ಟೇಡಿಯಂಗಳಲ್ಲಿ ಹುಡುಗರು ಹುಡುಗಿಯರಿಗೆ ಪ್ರಪೋಸ್ ಮಾಡುವ ಸಾಕಷ್ಟು ಸುದ್ದಿಗಳನ್ನು ನೋಡಿದ್ದೇವೆ. ಆದರೆ, ಇಲ್ಲಿನ ವಿಶೇಷವೆಂದರೆ, ಹುಡುಗಿಯೇ, ಹುಡುಗನಿಗೆ ಪ್ರಪೋಸ್ ಮಾಡಿದ್ದಾಳೆ. ಹುಡುಗ ಒಪ್ಪಿಕೊಂಡ ಬೆನ್ನಲ್ಲೇ ಉಂಗುರವನ್ನೂ ತೊಡಿಸಿದ್ದಾಳೆ. ಆರ್ ಸಿಬಿ ಫ್ಯಾನ್ಸ್ ಗಳ ಈ ವಿಡಿಯೋ ಇಂಟರ್ ನೆಟ್ ನಲ್ಲಿ ವೈರಲ್ ಆಗಿದೆ. 

ಈ ಪ್ರಪೋಸಲ್ ಕುರಿತಾಗಿ ಟ್ವೀಟ್ ಮಾಡಿರುವ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್, "ಆರ್ ಸಿಬಿ ಫ್ಯಾನ್ ಗೆ ಪ್ರಪೋಸ್ ಮಾಡುವ ಆಕೆಯ ನಿರ್ಧಾರ ತುಂಬಾ ಸ್ಮಾರ್ಟ್!. ಆರ್ ಸಿಬಿ ತಂಡಕ್ಕೆ ಇಷ್ಟು ನಿಷ್ಠನಾಗಿರುವ ವ್ಯಕ್ತಿ, ತನ್ನ ಪಾರ್ಟ್ನರ್ ವಿಚಾರದಲ್ಲೂ ನಿಷ್ಠನಾಗಿರುತ್ತಾನೆ ಎಂದು ಆಕೆ ಅಂದುಕೊಂಡಿದ್ದಾಳೆ. ನಿಮಗೆ ಒಳ್ಳೆಯದಾಗಲಿ, ಪ್ರಪೋಸ್ ಮಾಡೋಕೆ ಒಳ್ಳೆಯ ದಿನವನ್ನೇ ಆಯ್ಕೆ ಮಾಡಿದ್ದೀರಿ' ಎಂದು ಬರೆದುಕೊಂಡಿದ್ದಾರೆ.

pic.twitter.com/VHtsGvXhVv

— Addicric (@addicric)


ಆರ್ ಸಿಬಿ ತಂಡ 10 ಪಂದ್ಯಗಳಲ್ಲಿ 5 ಸೋಲು ಮತ್ತು 5 ಗೆಲುವಿನೊಂದಿಗೆ ಈ ಪಂದ್ಯದಲ್ಲಿ ಆಡಲು ಇಳಿದಿದ್ದರೆ, ಇನ್ನೊಂದೆಡೆ CSK 9 ಪಂದ್ಯಗಳಲ್ಲಿ 3 ಗೆಲುವುಗಳನ್ನು ಕಂಡಿತ್ತು. ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 13 ರನ್ ಗಳಿಂದ ಮಣಿಸಿದ ಆರ್ ಸಿಬಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ 7ನೇ ಸೋಲಿನೊಂದಿಗೆ ಪ್ಲೇ ಆಫ್ ರೇಸ್ ನಿಂದ ಹೊರಬಿದ್ದಂತಾಗಿದೆ. ಟಾಸ್ ಗೆಲುವು ಸಾಧಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಮಹಿಪಾಲ್ ಲೋಮ್ರರ್, ಫಾಫ್ ಡು ಪ್ಲೆಸಿಸ್ ಹಾಗೂ ದಿನೇಶ್ ಕಾರ್ತಿಕ ಕಾಣಿಕೆಯಿಂದ ತಂಡ 8 ವಿಕೆಟ್ ಗೆ 173 ರನ್ ಬಾರಿಸಿದರೆ, ಚೆನ್ನೈ ಸೂಪರ್ ಕಿಂಗ್ಸ್ 8 ವಿಕೆಟ್ ಗೆ 160 ರನ್ ಬಾರಿಸಿ ಸೋಲು ಕಂಡಿತು. 

ಚೆನ್ನೈ ತಂಡ ಚೇಸಿಂಗ್ ಮಾಡುವ ವೇಳೆ 11 ನೇ ಓವರ್ ನಲ್ಲಿ ಸ್ಟೇಡಿಯಂನ ಗ್ಯಾಲರಿಯಲ್ಲಿ ನಡೆದ ಸಹಿಯಾದ ಪ್ರಸಂಗವನ್ನು ಕ್ಯಾಮೆರಾಮೆನ್ ಸೆರೆ ಹಿಡಿದಿದ್ದಾರೆ. ಆರ್ ಸಿಬಿ ತಂಡದ ಇಬ್ಬರು ಅಭಿಮಾನಿಗಳು ಪಂದ್ಯ ವೀಕ್ಷಣೆ ಮಾಡುತ್ತಿದ್ದರು. ಈ ವೇಳೆ  ಹುಡುಗಿ ತನ್ನ ಮೊಣಕಾಲೂರಿ ಆರ್ ಸಿಬಿ ಅಭಿಮಾನಿಯೇ ಆಗಿದ್ದ ಹುಡುಗನಿಗೆ ಪ್ರಪೋಸ್ ಮಾಡಿದಳು. ಹುಡುಗ ಒಪ್ಪಿದ ಬೆನ್ನಲ್ಲೇ ಆತನ ಬೆರಳಿಗೆ ಉಂಗುರವನ್ನೂ ತೊಡಿಸಿದಳು. ಬಳಿಕ ಇಬ್ಬರೂ ಸಂತಸದಿಂದ ತಬ್ಬಿಕೊಂಡ ಕ್ಷಣಗಳು ವಿಡಿಯೋದಲ್ಲಿ ದಾಖಲಾಗಿದೆ. ಇಬ್ಬರೂ ಕೂಡ ಆರ್ ಸಿಬಿಯ ಹೊಸ ಜೆರ್ಸಿಯನ್ನು ಧರಿಸಿದ್ದರೆ, ಅಕ್ಕಪಕ್ಕದವರು ಇವರಿಗೆ ಹುರಿದುಂಬಿಸಿದರು. 

IPL 2022 ಚೆನ್ನೈ ವಿರುದ್ಧ ಆರ್ ಸಿಬಿ ತಂಡಕ್ಕೆ ಭರ್ಜರಿ ಗೆಲುವು

ವಾಸಿಂ ಜಾಫರ್ ಅಲ್ಲದೆ, ಇನ್ನೂ ಕೆಲವರು ಈ ಕುರಿತಾಗಿ ಟ್ವೀಟ್ ಮಾಡಿದ್ದಾರೆ. ಆರ್ಯಾ ಬಯೇಕರ್ ಎನ್ನುವ ವ್ಯಕ್ತಿ, "ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಪಂದ್ಯದ ವೇಳೆ ಒಂದಾದರೂ ಪ್ರಪೋಸಲ್ ಘಟನೆಗಳು ನಡೆದಿಲ್ಲ ಎಂದಾದರೆ ಇನ್ ಕಂಪ್ಲೀಟ್ ಎನಿಸಿಬಿಡುತ್ತದೆ' ಎಂದು ಟೀಕೆ ಮಾಡಿದ್ದಾರೆ. ಪ್ರಪೋಸಲ್ ಕ್ಯಾಮೆರಾದಲ್ಲಿ ದಾಖಲಾಗಿ ಬಿತ್ತರವಾದ ಬೆನ್ನಲ್ಲಿಯೇ ಇವರಿಬ್ಬರ ಚಿತ್ರ ಇಂಟರ್ ನೆಟ್ ನಲ್ಲಿ ವೈರಲ್ ಆಗಿದೆ.

ಬಾಂದ್ರಾದಲ್ಲಿ 10.5 ಕೋಟಿಯ ಮನೆ ಖರೀದಿಸಿದ 22 ವರ್ಷದ ಪೃಥ್ವಿ ಶಾ!

ಧಿರಲ್ ಕನ್ಹಯ್ಯ (@dhiralskaniya) ಎನ್ನುವ ವ್ಯಕ್ತಿ, ನಾನು ಐಪಿಎಲ್ ನೋಡ್ತಿದ್ದೇನೋ, ಮ್ಯಾಟ್ರಿಮೋನಿಯಲ್ ಸೈಟ್ ನೋಡ್ತಿದ್ದೇನೋ ಎನ್ನುವ ಅನುಮಾನ ಕಾಡುತ್ತಿದೆ ಎಂದಿದ್ದಾರೆ. ಐಪಿಎಲ್‌ನಲ್ಲಿ ಇಂತಹ ಘಟನೆ ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಋತುವಿನ ಹಿಂದಿನ ಐಪಿಎಲ್ ಪಂದ್ಯದ ವೇಳೆ ದಂಪತಿಗಳು ಚುಂಬಿಸುತ್ತಿರುವುದು ಕಂಡು ಬಂದಿತ್ತು. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ವೇಗಿ ದೀಪಕ್ ಚಾಹರ್ ತಮ್ಮ ಹುಡುಗಿಗೆ ಐಪಿಎಲ್ ಪಂದ್ಯದ ಮುಕ್ತಾಯದ ಬಳಿಕ ಪ್ರಪೋಸ್ ಮಾಡಿದ್ದು ವೈರಲ್ ಆಗಿತ್ತು.

Tap to resize

Latest Videos

click me!