IPL 2022 ರಬಾಡ ದಾಳಿಗೆ ದಿಕ್ಕು ತಪ್ಪಿದ ಲಕ್ನೋ ಬ್ಯಾಟಿಂಗ್!

Published : Apr 29, 2022, 09:20 PM IST
IPL 2022 ರಬಾಡ ದಾಳಿಗೆ ದಿಕ್ಕು ತಪ್ಪಿದ ಲಕ್ನೋ ಬ್ಯಾಟಿಂಗ್!

ಸಾರಾಂಶ

ಒಂದು ಹಂತದಲ್ಲಿ ಒಂದೇ ವಿಕೆಟ್ ಕಷ್ಟಕ್ಕೆ 98 ರನ್ ಬಾರಿಸಿ ದೊಡ್ಡ ಮೊತ್ತದ ಹಾದಿಯಲ್ಲಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಪ್ರಮುಖ ಸಂದರ್ಭದಲ್ಲಿ ಕಟ್ಟಿಹಾಕಿದ ಪಂಜಾಬ್ ತಂಡ 13 ರನ್ ಅಂತರದಲ್ಲಿ 5 ವಿಕೆಟ್ ಉರುಳಿಸಿ ಕಟ್ಟಿಹಾಕಿತು.

ಪುಣೆ (ಏ.29): ಸ್ಟಾರ್ ಬೌಲ್ ಕಗೀಸೋ ರಬಾಡ (Kagiso Rabada) ಹಾಗೂ ಸ್ಪಿನ್ ಬೌಲರ್ ರಾಹುಲ್ ಚಹರ್ (Rahul Chahar) ಭರ್ಜರಿ ಬೌಲಿಂಗ್ ದಾಳಿಯ ನೆರವಿನಿಂದ ಪಂಜಾಬ್ ಕಿಂಗ್ಸ್ (Punjab Kings ) ತಂಡ 15ನೇ ಆವೃತ್ತಿಯ ಐಪಿಎಲ್  (IPL 2022)ನಲ್ಲಿ ಬಲಿಷ್ಠ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants ) ತಂಡದ ಬ್ಯಾಟಿಂಗ್ ವಿಭಾಗವನ್ನು ಕಟ್ಟಿಹಾಕಲು ಯಶಸ್ವಿಯಾಗಿದೆ. ರಬಾಡ ಐಪಿಎಲ್ ನಲ್ಲಿ ನಾಲ್ಕನೇ ಬಾರಿ ಪಂದ್ಯವೊಂದರಲ್ಲಿ ನಾಲ್ಕು ವಿಕೆಟ್ ಉರುಳಿಸಿ ಮಿಂಚಿದರೆ, ರಾಹುಲ್ ಚಹರ್ 2 ವಿಕೆಟ್ ಉರುಳಿದರು.

ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡ, ಉತ್ತಮ ಆರಂಭದ ಹೊರತಾಗಿಯೂ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯ ಕಂಡು, 8 ವಿಕೆಟ್ ಗೆ 153 ರನ್ ಪೇರಿಸಿತು.

ಬ್ಯಾಟಿಂಗ್ ಆರಂಭಿಸಿದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಕಗೀಸೋ ರಬಾಡ ತಾವು ಎಸೆದ ಮೊದಲ ಓವರ್ ನಲ್ಲಿಯೇ ಆಘಾತ ನೀಡಿದರು. 11 ಎಸೆತಗಳನ್ನು ಎದುರಿಸಿದ ಕೆಎಲ್ ರಾಹುಲ್ ಒಂದು ಬೌಂಡರಿಯೊಂದಿಗೆ 6 ರನ್ ಬಾರಿ ರಬಾಡ ಎಸೆತದಲ್ಲಿ ಔಟ್ ಅಗಿ ಹೊರನಡೆದರು. ಈ ವೇಳೆ ಲಕ್ನೋ ತಂಡ 13 ರನ್ ಬಾರಿಸಿತ್ತು. ಬಡ್ತಿ ಪಡೆದು ಬಂದು ಆಡಿದ ದೀಪಕ್ ಹೂಡಾ (34ರನ್, 28 ಎಸೆತ, 1 ಬೌಂಡರಿ, 2 ಸಿಕ್ಸರ್)  2ನೇ ವಿಕೆಟ್ ಗೆ ಕ್ವಿಂಟನ್ ಡಿ ಕಾಕ್ (47 ರನ್, 37 ಎಸೆತ, 4 ಬೌಂಡರಿ, 2 ಸಿಕ್ಸರ್) 85 ರನ್ ಗಳ ಅಮೂಲ್ಯ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು.

ಉತ್ತಮವಾಗಿ ಆಡುತ್ತಿದ್ದ ಕ್ವಿಂಟನ್ ಡಿ ಕಾಕ್ ಅರ್ಧಶತಕಕ್ಕೆ 4 ರನ್ ಗಳಿಮದ ದೂರವಿದ್ದಾಗ ಸಂದೀಪ್ ಶರ್ಮ ಎಸೆತದಲ್ಲಿ ವಿಕೆಟ್ ಕೀಪರ್ ಗೆ ಕ್ಯಾಚ್ ನೀಡಿ ಔಟಾದರು. ಅಂಪೈರ್ ಔಟ್ ತೀರ್ಪು ನೀಡುವ ಮುನ್ನವೇ ಡಿ ಕಾಕ್ ಮೈದಾನವನ್ನು ತೊರೆಯುವ ಮೂಲಕ ಕ್ರೀಡಾಸ್ಪೂರ್ತಿ ಮೆರೆದರು. 98 ರನ್ ಗಳಿಸಿದ್ದ ವೇಳೆ 2ನೇ ವಿಕೆಟ್ ಕಳೆದುಕೊಂಡ ಲಕ್ನೋ ತಂಡ, ಎಡಗೈ-ಬಲಗೈ ಕಾಂಬಿನೇಷನ್ ಉಳಿಸಿಕೊಲ್ಳುವ ಸಲುವಾಗಿ ಕೃನಾಲ್ ಪಾಂಡ್ಯರನ್ನು ನಾಲ್ಕನೇ ಕ್ರಮಾಂಕದಲ್ಲಿ ಆಡಿಸಿತು. ಆದರೆ, ಇದು ಪ್ರಯೋಜನವಾಗಲಿಲ್ಲ.

IPL 2022 ಪಂಜಾಬ್ vs ಲಖನೌ: ಸ್ನೇಹಿತರ ಸವಾಲ್ ಗೆಲ್ಲೋರ್ಯಾರು..?

13 ರನ್ ಗೆ 5 ವಿಕೆಟ್ ಕಳೆದುಕೊಂಡ ಲಕ್ನೋ: ಒಂದು ಹಂತದಲ್ಲಿ 1 ವಿಕೆಟ್ ನಷ್ಟಕ್ಕೆ 98 ರನ್ ಬಾರಿಸಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡ ಈ ಮೊತ್ತಕ್ಕೆ 13 ರನ್ ಸೇರಿಸುವ ವೇಳೆಗೆ 5 ವಿಕೆಟ್ ಗಳನ್ನು ಕಳೆದುಕೊಂಡಿದ್ದರಿಂದ ದೊಡ್ಡ ಮೊತ್ತ ಪೇರಿಸುವ ಆಸೆ ಭಗ್ನಗೊಂಡಿತು. ಕ್ವಿಂಟನ್ ಡಿ ಕಾಕ್ ಔಟಾದ ಬಳಿಕ, ದೀಪಕ್ ಹೂಡಾ ಹಾಗೂ ಕನಾಲ್ ಪಾಂಡ್ಯ ಒಂದೇ ರನ್ ಗಳ ಅಂತರದಲ್ಲಿ ಡಗ್ ಔಟ್ ಸೇರಿಕೊಂಡರು. ಹೂಡಾ ರನೌಟ್ ಆದರೆ, ಕೃನಾಲ್ ಪಾಂಡ್ಯ, ರಬಾಡ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. 4 ಎಸೆತಗಳಲ್ಲಿ 4 ರನ್ ಬಾರಿಸಿದ ಆಯುಶ್ ಬಡೋನಿ ಕೂಡ ಔಟಾದಾಗ ಲಕ್ನೋ ಹಿನ್ನಡೆ ಕಂಡಿತು. ಈ ವೇಳೆ ಭಾರೀ ನಿರೀಕ್ಷೆ ಇಟ್ಟಿದ್ದ ಮಾರ್ಕಸ್ ಸ್ಟೋಯಿನಸ್, ಚಾಹರ್ ಎಸೆತದಲ್ಲಿ ಅವರಿಗೆ ಕ್ಯಾಚ್ ನೀಡಿದಾಗ ಲಕ್ನೋ ತಂಡ 111 ರನ್ ಬಾರಿಸಿತ್ತು. ಜೇಸನ್ ಹೋಲ್ಡರ್ 11 ರನ್ ಬಾರಿಸಿ ರಾಹುಲ್ ಚಹರ್ ಗೆ ವಿಕೆಟ್ ನೀಡಿದರು.

Ben Stokes ಇಂಗ್ಲೆಂಡ್ ಟೆಸ್ಟ್ ನಾಯಕ ಸ್ಟೋಕ್ಸ್‌ಗೆ ಭಾವನಾತ್ಮಕ ಸಂದೇಶ ರವಾನಿಸಿದ ರೂಟ್‌..!

ಕೆಎಲ್ ರಾಹುಲ್ ಮುಂಬೈ ವಿರುದ್ಧ ಮಾತ್ರ ಸೂಪರ್: ಹಾಲಿ ಅವೃತ್ತಿಯ ಐಪಿಎಲ್ ನಲ್ಲಿ ಕೆಎಲ್ ರಾಹುಲ್ (KL Rahul) ತಮ್ಮ ಬ್ಯಾಟಿಂಗ್ ಪರಾಕ್ರಮವನ್ನು ಮುಂಬೈ ವಿರುದ್ಧ ಮಾತ್ರ ತೋರಿಸಿದ ಹಾಗಿದೆ ಮುಂಬೈ ವಿರುದ್ಧ ಆಡಿದ 2 ಪಂದ್ಯಗಳಿಂದ 169ರ ಸ್ಟ್ರೈಕ್ ರೇಟ್ ಲ್ಲಿ 206 ರನ್ ಬಾರಿಸಿದ್ದರೆ, ಉಳಿದ ತಂಡಗಳ ವಿರುದ್ಧ ಆಡಿದ ಪಂದ್ಯಗಳಿಂದ 122ರ ಸ್ಟ್ರೈಕ್ ರೇಟ್ ನಲ್ಲಿ ಕೇವಲ 168 ರನ್ ಬಾರಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿರಾಟ್ ಕೊಹ್ಲಿಯಲ್ಲ, ಈ ಆಟಗಾರ ಹೆಚ್ಚು ಹಾರ್ಡ್‌ ವರ್ಕ್ ಮಾಡುವ ಆಟಗಾರ ಎಂದ ಯಶಸ್ವಿ ಜೈಸ್ವಾಲ್!
14 ವರ್ಷದ ವೈಭವ್ ಸೂರ್ಯವಂಶಿ 95 ಎಸೆತಕ್ಕೆ 171; ಯುವ ಭಾರತಕ್ಕೆ 234 ರನ್ ಜಯ!