Ben Stokes ಇಂಗ್ಲೆಂಡ್ ಟೆಸ್ಟ್ ನಾಯಕ ಸ್ಟೋಕ್ಸ್‌ಗೆ ಭಾವನಾತ್ಮಕ ಸಂದೇಶ ರವಾನಿಸಿದ ರೂಟ್‌..!

* ಇಂಗ್ಲೆಂಡ್ ಟೆಸ್ಟ್ ತಂಡದ ನೂತನ ನಾಯಕರಾಗಿ ಬೆನ್ ಸ್ಟೋಕ್ಸ್ ನೇಮಕ

* ಜೋ ರೂಟ್ ರಾಜೀನಾಮೆಯಿಂದ ತೆರವಾಗಿದ್ದ ಟೆಸ್ಟ್ ನಾಯಕ ಹುದ್ದೆ

* ಯಾವಾಗಲೂ ನಿಮ್ಮ ಜತೆ ಇರುತ್ತೇನೆಂದು ಶುಭ ಹಾರೈಸಿದ ಜೋ ರೂಟ್

 

Joe Root Congratulates Englend Test Captain Ben Stokes With a Heartwarming Message kvn

ಲಂಡನ್(ಏ.29)‌: ಜೋ ರೂಟ್‌ (Joe Root) ರಾಜೀನಾಮೆ ಬಳಿಕ ತೆರವಾಗಿದ್ದ ಇಂಗ್ಲೆಂಡ್‌ ಟೆಸ್ಟ್‌ ಕ್ರಿಕೆಟ್‌ ತಂಡದ ನಾಯಕನ ಸ್ಥಾನಕ್ಕೆ ಆಲ್ರೌಂಡರ್‌ ಬೆನ್‌ ಸ್ಟೋಕ್ಸ್‌ (Ben Stokes being appointed as the new Test captain of England) ನೇಮಕಗೊಂಡಿದ್ದಾರೆ. ಗುರುವಾರ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ(ಇಸಿಬಿ) ಸ್ಟೋಕ್ಸ್‌ ನೇಮಕವನ್ನು ಅಧಿಕೃತಗೊಳಿಸಿದೆ. 2020ರಲ್ಲಿ ರೂಟ್‌ ರಜೆ ಪಡೆದಿದ್ದಾಗ ವೆಸ್ಟ್‌ಇಂಡೀಸ್‌ ವಿರುದ್ಧ 1 ಟೆಸ್ಟ್‌ಗೆ ಬೆನ್ ಸ್ಟೋಕ್ಸ್‌ ನಾಯಕರಾಗಿದ್ದರು. ಆ ಪಂದ್ಯದಲ್ಲಿ ಇಂಗ್ಲೆಂಡ್‌ ಸೋಲುಂಡಿತ್ತು.

ಬೆನ್ ಸ್ಟೋಕ್ಸ್‌ ಇಂಗ್ಲೆಂಡ್‌ನ 81ನೇ ಟೆಸ್ಟ್‌ ನಾಯಕ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಜೂನ್ 2ರಿಂದ ತವರಿನಲ್ಲಿ ನಡೆಯಲಿರುವ ನ್ಯೂಜಿಲೆಂಡ್‌ ವಿರುದ್ಧದ ಸರಣಿಯಲ್ಲಿ ಸ್ಟೋಕ್ಸ್‌ ಪೂರ್ಣಾವಧಿ ನಾಯಕನಾಗಿ ಕಾರ್ಯಾರಂಭಿಸಲಿದ್ದಾರೆ. ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕರಾಗಿ ನನ್ನನ್ನು ಆಯ್ಕೆ ಮಾಡಿದ್ದು, ನನ್ನ ಪಾಲಿಗೆ ಅತ್ಯಂತ ಗೌರವದ ವಿಷಯವಾಗಿದೆ. ಇದು ನಿಜಕ್ಕೂ ನನ್ನ ಪಾಲಿನ ಸೌಭಾಗ್ಯವೆಂದೇ ಭಾವಿಸುತ್ತೇನೆ. ಮುಂಬರುವ ದಿನಗಳಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಲು ಉತ್ಸುಕನಾಗಿದ್ದೇನೆ ಎಂದು ಬೆನ್ ಸ್ಟೋಕ್ಸ್ ಹೇಳಿದ್ದಾರೆ. 

ಇಂಗ್ಲೆಂಡ್ ಕ್ರಿಕೆಟ್‌ ತಂಡದ ಬೆಳವಣಿಗೆಗೆ ಎಲ್ಲವನ್ನು ನೀಡಿದ ಜೋ ರೂಟ್‌ಗೆ ಮೊದಲಿಗೆ ನಾನು ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ಜೋ ರೂಟ್ ಅವರೊಬ್ಬ ದಿಗ್ಗಜ ಕ್ರಿಕೆಟ್ ರಾಯಭಾರಿ. ನಾನು ನಾಯಕನಾಗಿ ಬೆಳೆಯಲು, ಜೋ ರೂಟ್ ಅವರ ಪಾತ್ರ ಮಹತ್ವದ್ದಾಗಿದೆ. ನಾನು ಅವರ ಮಾರ್ಗದರ್ಶನದಲ್ಲೇ ಮುಂದುವರೆಯುತ್ತೇನೆ ಎಂದು ಬೆನ್ ಸ್ಟೋಕ್ಸ್ ಹೇಳಿದ್ದಾರೆ. 

ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕನಾಗಿ ಬೆನ್ ಸ್ಟೋಕ್ಸ್ ನಾಯಕನಾಗಿ ನೇಮಕವಾಗುತ್ತಿದ್ದಂತೆಯೇ, ಮಾಜಿ ನಾಯಕ ರೂಟ್ ಟ್ವೀಟ್ ಮಾಡುವ ಮೂಲಕ ಶುಭ ಹಾರೈಸಿದ್ದಾರೆ. ಯಾವಾಗಲೂ ಒಬ್ಬರನ್ನೊಬ್ಬರು ಬೆಂಬಲಿಸಿದ್ದೇವೆ. ಇಂಗ್ಲೆಂಡ್ ತಂಡದ ನಾಯಕರಾಗಿದ್ದಕ್ಕೆ ಅಭಿನಂದನೆಗಳು ಗೆಳೆಯ. ನೀನಿಡುವ ಪ್ರತಿ ಹೆಜ್ಜೆಯ ಜತೆ ನಾನಿರುತ್ತೇನೆ ಎಂದು ಜೋ ರೂಟ್, ನೂತನ ನಾಯಕನಿಗೆ ಶುಭ ಹಾರೈಸಿದ್ದಾರೆ. 

ಬೆನ್ ಸ್ಟೋಕ್ಸ್‌ 2013ರ ಡಿಸೆಂಬರ್‌ನಲ್ಲಿ ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇದುವರೆಗೂ ಇಂಗ್ಲೆಂಡ್ ತಂಡದ ಪರ ಬೆನ್ ಸ್ಟೋಕ್ಸ್‌ 79 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. 2017ರ ಫೆಬ್ರವರಿಯಿಂದ ಬೆನ್ ಸ್ಟೋಕ್ಸ್‌, ಇಂಗ್ಲೆಂಡ್ ಟೆಸ್ಟ್ ತಂಡದ ಉಪನಾಯಕರಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದರು. ಆಧುನಿಕ ಕ್ರಿಕೆಟ್‌ನ ಸ್ಟಾರ್ ಆಲ್ರೌಂಡರ್‌ಗಳಲ್ಲಿ ಒಬ್ಬರು ಎನಿಸಿಕೊಂಡಿರುವ ಬೆನ್ ಸ್ಟೋಕ್ಸ್ ಇಂಗ್ಲೆಂಡ್‌ ತಂಡದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ 35.89ರ ಬ್ಯಾಟಿಂಗ್ ಸರಾಸರಿಯಲ್ಲಿ 5,061 ರನ್ ಬಾರಿಸಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ 174 ವಿಕೆಟ್ ಕಬಳಿಸಿದ್ದಾರೆ.

ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್‌ ನಾಯಕತ್ವಕ್ಕೆ ಗುಡ್‌ ಬೈ ಹೇಳಿದ ಜೋ ರೂಟ್..!

ಇಂಗ್ಲೆಂಡ್‌ ಕ್ರಿಕೆಟ್ ತಂಡವು ಕಳೆದೊಂದು ವರ್ಷದಲ್ಲಿ ಹಿಂದೆಂದೂ ಕಂಡು-ಕೇಳರಿಯದಷ್ಟು ದಯನೀಯ ವೈಫಲ್ಯವನ್ನು ಅನುಭವಿಸಿದೆ. ಇಂಗ್ಲೆಂಡ್ ಕ್ರಿಕೆಟ್‌ ತಂಡವು ಆಡಿದ ಕಳೆದ 17 ಟೆಸ್ಟ್ ಪಂದ್ಯಗಳ ಪೈಕಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆಲುವಿನ ನಗೆ ಬೀರಿದೆ. ಕಳೆದ 5 ಟೆಸ್ಟ್ ಸರಣಿಗಳ ಪೈಕಿ ಒಂದು ಸರಣಿಯನ್ನು ಗೆಲ್ಲಲು ಜೋ ರೂಟ್ ನೇತೃತ್ವದ ಇಂಗ್ಲೆಂಡ್ ತಂಡವು ಯಶಸ್ವಿಯಾಗಿರಲಿಲ್ಲ. ಪ್ರತಿಷ್ಠಿತ ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ದ ಇಂಗ್ಲೆಂಡ್ ತಂಡವು 4-0 ಅಂತರದಲ್ಲಿ ಹೀನಾಯ ಸೋಲು ಕಂಡಿತ್ತು. ಸದ್ಯ 2021-23ನೇ ಸಾಲಿಸಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡವು ಕೊನೆಯ ಸ್ಥಾನದಲ್ಲಿದೆ.

 

Latest Videos
Follow Us:
Download App:
  • android
  • ios