IPL 2022 ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ಬೌಲಿಂಗ್ ಆಯ್ಕೆ, ಪಂಜಾಬ್ ತಂಡದಲ್ಲಿ ಪ್ರಮುಖ ಬದಲಾವಣೆ

Published : Apr 08, 2022, 07:07 PM IST
IPL 2022 ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ಬೌಲಿಂಗ್ ಆಯ್ಕೆ, ಪಂಜಾಬ್ ತಂಡದಲ್ಲಿ ಪ್ರಮುಖ ಬದಲಾವಣೆ

ಸಾರಾಂಶ

ಪಂಜಾಬ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡದಿಂದ ಬೌಲಿಂಗ್ ಆಯ್ಕೆ ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮುಖಾಮುಖಿ  

ಮುಂಬೈ(ಏ.08): ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 16ನೇ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ನೇತೃತ್ವದ ಪಂಜಾಬ್ ಕಿಂಗ್ಸ್ ಹಾಗೂ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡ ಮುಖಾಮುಖಿಯಾಗಿದೆ. ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಗುಜರಾತ್ ತಂಡ ಪಂದ್ಯಕ್ಕಾಗಿ ಎರಡು ಬದಲಾವಣೆ ಮಾಡಿದ್ದರೆ, ಪಂಜಾಬ್ ಕಿಂಗ್ಸ್ ತಂಡ ಇಂಗ್ಲೆಂಡ್ ಸೂಪರ್ ಸ್ಟಾರ್ ವಿಕೆಟ್ ಕೀಪರ್ ಜಾನಿ ಬೇರ್ ಸ್ಟೋಗೆ ಅವಕಾಶ ನೀಡಿದೆ.

ಸನ್ ರೈಸರ್ಸ್ ಪರವಾಗಿ ಕಳೆದ ಐಪಿಎಲ್ ಗಳಲ್ಲಿ ಆಡಿದ್ದ ಜಾನಿ ಬೈರ್ ಸ್ಟೋ ಈ ಪಂದ್ಯದ ಮೂಲಕ ಪಂಜಾಬ್ ಕಿಂಗ್ಸ್ ಪರವಾಗಿ ಪಾದಾರ್ಪಣೆ ಮಾಡಿದರು. ಇವರಿಗಾಗಿ ಭಾನುಕಾ ರಾಜಪಕ್ಷೆ ಸ್ಥಾನ ತ್ಯಾಗ ಮಾಡಿದರು. ಇನ್ನೊಂದೆಡೆ ಗುಜರಾತ್ ಟೈಟಾನ್ಸ್ ಪರವಾಗಿ ದರ್ಶನ್ ನಲ್ಕಂಡೆ ಹಾಗೂ ಸಾಯಿ ಸುದರ್ಶನ್ ಪಾದಾರ್ಪಣೆ ಮಾಡಿದರು. ದರ್ಶನ್ ನಲ್ಕಂಡೆ ಅವರು ವರುಣ್ ಆರನ್ ಬದಲು ಸ್ಥಾನ ಪಡೆದರೆ, ವಿಜಯ್ ಶಂಕರ್ ಬದಲು ಸಾಯಿ ಸುದರ್ಶನ್ ಅವಕಾಶ ಪಡೆದುಕೊಂಡರು.

ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ 11: ಮಯಾಂಕ್ ಅಗರ್ವಾಲ್ (ನಾಯಕ), ಶಿಖರ್ ಧವನ್, ಜಾನಿ ಬೈರ್‌ಸ್ಟೋ, ಲಿಯಾಮ್ ಲಿವಿಂಗ್‌ಸ್ಟೋನ್, ಶಾರುಖ್ ಖಾನ್, ಜಿತೇಶ್ ಶರ್ಮಾ (ವಿಕೆ), ಓಡಿಯನ್ ಸ್ಮಿತ್,  ಅರ್ಶ್‌ದೀಪ್ ಸಿಂಗ್,  ಕಗಿಸೋ ರಬಾಡ, ರಾಹುಲ್ ಚಾಹರ್,  ವೈಭವ್ ಅರೋರಾ

ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ 11: ಮ್ಯಾಥ್ಯೂ ವೇಡ್(ಕೀಪರ್), ಶುಭಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ(ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ಅಭಿನವ್ ಮನೋಹರ್, ರಶೀದ್ ಖಾನ್, ಲಾಕಿ ಫರ್ಗುಸನ್, ಮೊಹಮ್ಮದ್ ಶಮಿ, ದರ್ಶನ್ ನಲ್ಕಂಡೆ

IPL 2022: ಸೆಹ್ವಾಗ್ ವಡ ಪಾವ್ ಬಿಸಿ,​ ಸವಿಯಲು ಬಂದ ಟ್ರೋಲಿಗರಿಗೆ ತಕ್ಕ ಉತ್ತರ ಕೊಟ್ಟ ಡೆಲ್ಲಿ ಡ್ಯಾಶರ್

ಅಂಕಪಟ್ಟಿಯಲ್ಲಿ ಗುಜರಾತ್ ಟೈಟಾನ್ಸ್  ತಂಡ 4ನೇ ಸ್ಥಾನದಲ್ಲಿದ್ದರೆ, ಪಂಜಾಬ್ ಕಿಂಗ್ಸ್ ತಂಡ 5ನೇ ಸ್ಥಾನದಲ್ಲಿದೆ. ಗುಜರಾತ್ ಟೈಟಾನ್ಸ್ ತಂಡ ಆಡಿದ ಮೊದಲ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿದೆ. ಲಖನೌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತಂಡ ಗೆಲುವು ಕಂಡಿದೆ. ಇನ್ನೊಂದೆಡೆ, ಪಂಜಾಬ್ ಕಿಂಗ್ಸ್ ತಂಡ 3 ಪಂದ್ಯದಲ್ಲಿ 2 ಗೆಲುವು 1 ಸೋಲು ಕಂಡಿದೆ. ಆರ್ ಸಿಬಿ ಹಾಗೂ ಚೆನ್ನೈ ವಿರುದ್ಧ ಜಯ ಕಂಡಿದ್ದರೆ, ಕೆಕೆಆರ್ ವಿರುದ್ಧ ಸೋಲು ಕಂಡಿತ್ತು.

IPL 2022: ಐಪಿಎಲ್​​​​ನಲ್ಲಿ ಧೋನಿ ಮತ್ತೊಂದು ಕಿರಿಕ್..!

ಪಂದ್ಯದಲ್ಲಿ ಏನನ್ನು ನಿರೀಕ್ಷೆ ಮಾಡಬಹುದು: ವಿಶೇಷವೆಂದರೆ, ಆಂಟಿ-ಡ್ಯೂ ಏಜೆಂಟ್ ಆಸ್ಪಾ 80 ಬ್ರಬೋರ್ನ್‌ ಸ್ಟೇಡಿಯಂನಲ್ಲಿ ನಡೆದ ಕಳೆದ ಪಂದ್ಯದಲ್ಲಿ ಮೋಡಿ ಮಾಡುವಂತೆ ಕೆಲಸ ಮಾಡಿತು. ಈ ಕಾರಣದಿಂದಾಗಿ ಪಂಜಾಬ್ ಕಿಂಗ್ಸ್ 180 ರನ್ ಗಳನ್ನು ಸುಲಭವಾಗಿ ರಕ್ಷಣೆ ಮಾಡಿಕೊಂಡಿತ್ತು. ಆಂಟಿ-ಡ್ಯೂ ಏಜೆಂಟ್ ರಾಸಾಯನಿಕ ಇಲ್ಲದೇ ಆಡಿದ್ದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 210 ರನ್ ಗಳ ದೊಡ್ಡ ಮೊತ್ತವನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.  ಇದು ಟಾಸ್ ಡೈನಾಮಿಕ್ಸ್‌ನಲ್ಲಿ ಬದಲಾವಣೆಗೆ ಕಾರಣವಾಗಬಹುದು ಮತ್ತು ಟಾಸ್ ಗೆದ್ದ ನಾಯಕ ಬ್ಯಾಟಿಂಗ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು.

ನಿಮಗಿದು ಗೊತ್ತೇ?
* ಪಂಜಾಬ್ ಕಿಂಗ್ಸ್ ವಿರುದ್ಧ ಈವರೆಗೂ ಆಡಿದ 10 ಐಪಿಎಲ್ ಪಂದ್ಯಗಳಿಮದ ರಶೀದ್ ಖಾನ್ 18 ವಿಕೆಟ್ ಉರುಳಿಸಿದ್ದಾರೆ.

* ಪಂಜಾಬ್ ಕಿಂಗ್ಸ್ ತಂಡದ ಲೆಗ್ ಸ್ಪಿನ್ನರ್ ರಾಹುಲ್ ಚಹರ್, ಈವರೆಗೂ ಆಡಿದ ಮೂರು ಪಂದ್ಯಗಳಿಂದ 1 ಬೌಂಡರಿ ಹಾಗೂ 1 ಸಿಕ್ಸರ್ ಮಾತ್ರವೇ ಕೊಟ್ಟಿದ್ದಾರೆ. ಅದರೊಂದಿಗೆ 6 ವಿಕೆಟ್ ಸಾಧನೆ ಮಾಡಿದ್ದಾರೆ.

* ಪಂಜಾಬ್ ಕಿಂಗ್ಸ್ ತಂಡದ ಹಾಲಿ ಋತುವಿನಲ್ಲಿ ಈವರೆಗೂ 33 ಸಿಕ್ಸರ್ ಗಳನ್ನು ಬಾರಿಸಿದೆ. 36 ಸಿಕ್ಸರ್ ಗಳನ್ನು ಬಾರಿಸಿರುವ ರಾಜಸ್ಥಾನ ರಾಯಲ್ಸ್ ತಂಡ ಅಗ್ರಸ್ಥಾನದಲ್ಲಿದೆ. ಇನ್ನೊಂದೆಡೆ, ಗುಜರಾತ್ ಟೈಟಾನ್ಸ್ ತಂಡದ ನಾಯಕ ಇನ್ನೊಂದು ಸಿಕ್ಸರ್ ಬಾರಿಸಿದರೆ ಐಪಿಎಲ್ ನಲ್ಲಿ 100 ಸಿಕ್ಸರ್ ಸಿಡಿಸಿದ ದಾಖಲೆ ಮಾಡಲಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗೋವಾ ವಿಡಿಯೋದಿಂದ ಸಾರಾ ತೆಂಡೂಲ್ಕರ್ ಟ್ರೋಲ್, ತಂದೆ ಮದ್ಯ ವಿರೋಧಿ ನಿಲುವು ನೆನಪಿಸಿದ ನೆಟ್ಟಿಗರು
ಗಂಭೀರ ಸ್ಥಿತಿಯಲ್ಲಿ ಕೋಮಾಕ್ಕೆ ಜಾರಿದ ಆಸೀಸ್‌ ದಿಗ್ಗಜ ಕ್ರಿಕೆಟರ್‌ ಡೇಮಿಯನ್‌ ಮಾರ್ಟಿನ್‌, ಅಪ್‌ಡೇಟ್‌ ನೀಡಿದ ಗಿಲ್‌ಕ್ರಿಸ್ಟ್‌!