* ಐಪಿಎಲ್ನಲ್ಲಿ ಧೋನಿ ಮತ್ತೊಂದು ಕಿರಿಕ್..!
* ಧೋನಿಯ IPL ಜಾಹೀರಾತು ಬ್ಯಾನ್..?
* ಈ ಜಾಹೀರಾತಿನಲ್ಲಿ ಅಂತಹದ್ದೇನಿದೆ..?
ಮುಂಬೈ, (ಏ.08) : ಪ್ರಸಕ್ತ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸೋಲಿನಿಂದ ಕಂಗೆಟ್ಟಿದೆ. ಆಡಿದ ಮೂರು ಪಂದ್ಯದಲ್ಲಿ ಮುಗ್ಗರಿಸಿ, ಗೆಲುವಿಗಾಗಿ ತವಕಿಸ್ತಿದೆ. ನಾಳೆ ನಡೆಯುವ ಹೈದ್ರಬಾದ್ ವಿರುದ್ಧದ ಪಂದ್ಯದಲ್ಲಿ ಗೆಲುವಿನ ಖಾತೆ ತೆರೆಯುವ ಲೆಕ್ಕಚಾರದಲ್ಲಿದೆ. ಇಂತಹ ಹ್ಯಾಟ್ರಿಕ್ ಸೋಲಿನ ನೋವಿನ ಮಧ್ಯೆ ಹಾಲಿ ಚಾಂಪಿಯನ್ನರಿಗೆ ಮತ್ತೊಂದು ಆಘಾತ ಎದುರಾಗಿದೆ.
ಧೋನಿಯ IPL ಜಾಹೀರಾತು ಬ್ಯಾನ್..?:
ಚೆನ್ನೈ ತಂಡದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಕಾಣಿಸಿಕೊಂಡ ಐಪಿಎಲ್ ಜಾಹೀರಾತು ಬ್ಯಾನ್ ಆಗುವ ಸ್ಥಿತಿಯಲ್ಲಿದೆ. ಹೌದು, 15ನೇ ಐಪಿಎಲ್ ಸೀಸನ್ ಆರಂಭಕ್ಕೂ ಮುನ್ನ ಧೋನಿ ಸ್ಟಾರ್ ವಾಹಿನಿಯ ಪ್ರೊಮೊ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ರು. ಆ ಪೈಕಿ ಬಸ್ ಚಾಲಕನಾಗಿದ್ದ ಐಪಿಎಲ್ ಅಡ್ವರ್ಟೈಸ್ಮೆಂಟನ್ನ ಹಿಂತೆಗೆದುಕೊಳ್ಳುವಂತೆ ಅಡ್ವರ್ಟೈಸಿಂಗ್ ಸ್ಟ್ಯಾಂಡರ್ಡ್ಸ್ ಕೌನ್ಸಿಲ್ ಆಫ್ ಇಂಡಿಯಾ ಸೂಚಿಸಿದೆ.
IPL 2022: ವಡ ಪಾವ್ ಬಿಸಿ ಸವಿಯಲು ಬಂದ ಟ್ರೋಲಿಗರಿಗೆ ತಕ್ಕ ಉತ್ತರ ಕೊಟ್ಟ ಸೆಹ್ವಾಗ್
ಈ ಜಾಹೀರಾತಿನಲ್ಲಿ ಅಂತಹದ್ದೇನಿದೆ..?:
ಮಾಸ್ ಅವತಾರದಲ್ಲಿ ಕಾಣಿಸಿಕೊಂಡ ಧೋನಿ ಈ ಐಪಿಎಲ್ ಜಾಹೀರಾತಿನಲ್ಲಿ ಬಸ್ ಚಾಲಕನಾಗಿ ಕಾಣಿಸಿಕೊಂಡಿದ್ರು. ಜನನಿಬಿಡ ರಸ್ತೆಯ ಮಧ್ಯೆ ಬಸ್ ನಿಲ್ಲಿಸುವುದನ್ನು ಚಿತ್ರಿಸಲಾಗಿತ್ತು. ಈ ವೇಳೆ ಒಬ್ಬ ಟ್ರಾಫಿಕ್ ಪೊಲೀಸ್ ಬಂದು ಅವನನ್ನು ಪ್ರಶ್ನಿಸುತ್ತಾನೆ. ಇದಾದ ನಂತರ ಧೋನಿ ಪ್ರತಿಕ್ರಿಯಿಸಿ, ನಾನು ಐಪಿಎಲ್‌ನ ಸೂಪರ್ ಓವರ್ ಅನ್ನು ವೀಕ್ಷಿಸುತ್ತಿದ್ದೇನೆ ಎಂದು ತಿಳಿಸುತ್ತಾರೆ. ಇದನ್ನು ಟ್ರಾಫಿಕ್ ಪೋಲೀಸ್ ಸಾಮಾನ್ಯವೆಂದು ಪರಿಗಣಿಸಿ ಹೊರಡುತ್ತಾನೆ.
ಇದನ್ನೇ ಪ್ರಸ್ತಾಪಿಸಿ ರಸ್ತೆ ಸುರಕ್ಷತಾ ಸಂಸ್ಥೆ ದೂರು ನೀಡಿದೆ. ಧೋನಿ ಕಾಣಿಸಿಕೊಂಡ ಜಾಹೀರಾತಿನಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಹೀಗಾಗಿ ಕೂಡಲೇ ಜಾಹೀರಾತನ್ನು ಹಿಂತೆಗೆದುಕೊಳ್ಳುವಂತೆ ASCI, ಸ್ಟಾರ್ ಸ್ಪೋರ್ಟ್ಸ್ ವಾಹಿನಿಗೆ ಕೇಳಿಕೊಂಡಿದೆ. ಏಪ್ರಿಲ್ 20 ರೊಳಗೆ ಈ ಜಾಹೀರಾತನ್ನು ತೆಗೆದು ಹಾಕಬೇಕು ಅಥವಾ ಬದಲಾಯಿಸಲು ತಿಳಿಸಲಾಗಿದೆ.
ಒಟ್ಟಿನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದ ಎಂಎಸ್ ಧೋನಿಯ ಬಸ್ ಚಾಲಕನ ಜಾಹೀರಾತು ಶೀಘ್ರದಲ್ಲೇ ಎಡಿಟ್ ಹೊಸ ರೂಪದಲ್ಲಿ ಬರುತ್ತಾ? ಇಲ್ಲ ಬ್ಯಾನ್ ಆಗುತ್ತಾ ಅನ್ನೋದನ್ನ ಕಾದುನೋಡಬೇಕು.