IPL 20222 ಸಿಎಸ್‌ಕೆ ಮಾನ ಕಾಪಾಡಿದ ಧೋನಿ, ಮುಂಬೈಗೆ ಸುಲಭ ಟಾರ್ಗೆಟ್!

By Suvarna NewsFirst Published May 12, 2022, 9:09 PM IST
Highlights
  • ಚೆನ್ನೈ ತಂಡಕ್ಕೆ ಮತ್ತೆ ಆಧಾರವಾದ ನಾಯಕ ಧೋನಿ
  • ಕುಸಿದ ಸಿಎಸ್‌ಕೆ ತಂಡಕ್ಕೆ ಧೋನಿ ಏಕಾಂಗಿ ಹೋರಾಟದ ನೆರವು
  • ಮುಂಬೈ ವಿರುದ್ಧ 97 ರನ್ ಸಿಡಿಸಿದ ಚೆನ್ನೈ ಸೂಪರ್ ಕಿಂಗ್ಸ್

ಮುಂಬೈ(ಮೇ.12): ಆರಂಭಿಕರು, ಮಧ್ಯಮ ಕ್ರಮಾಂಕ ಸೇರಿದಂತೆ ಘಟಾನುಘಟಿ ಬ್ಯಾಟ್ಸ್‌ಮನ್‌ಗಳು ಬಹುಬೇಗನೆ ಪೆವಿಲಿಯನ್ ಸೇರಿಕೊಂಡರು. ಕೊನೆಗೆ ತಂಡಕ್ಕೆ ಆಸರೆಯಾಗಿದ್ದು ಒನ್ ಅಂಡ್ ಒನ್ಲಿ ಎಂ.ಎಸ್.ಧೋನಿ. ನಾಯಕ ಧೋನಿ ಏಕಾಂಗಿ ಹೋರಾಟದಿಂದ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ 97 ರನ್ ಸಿಡಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಚೆನ್ನೈ ಸೂಪರ್ ಕಿಂಗ್ಸ್ ದಿಢೀರ್ ಕುಸಿತ ಕಂಡಿತು. ರುತುರಾಜ್ ಗಾಯಕ್ವಾಡ್ ಹಾಗೂ ಡೇವೋನ್ ಕೊನ್ವೇ ಅಬ್ಬರಿಸಲಿಲ್ಲ. ರುತುರಾಜ್ 7 ರನ್ ಸಿಡಿಸಿ ಔಟಾದರೆ, ಕೊನ್ವೇ ಡಕೌಟ್ ಆದರು. ಮೊಯಿನ್ ಆಲಿ ಕೂಡ ಶೂನ್ಯ ಸುತ್ತಿದರು. ರಾಬಿನ್ ಉತ್ತಪ್ಪ ಕೇವಲ 1 ರನ್ ಸಿಡಿಸಿ ಔಟಾದರು.

IPL 2022: ಆರ್‌ಸಿಬಿ ತಂಡಕ್ಕೆ ಟಾಪ್‌ 2ಗೇರಲು ಇನ್ನೂ ಇದೆ ಅವಕಾಶ..! ಹೇಗೆ ಗೊತ್ತಾ..?

5 ರನ್‌ಗಳಿಸುವಷ್ಟರಲ್ಲೇ 3 ವಿಕೆಟ್ ಕಳೆದುಕೊಂಡ ಚೆನ್ನೈ, 17 ರನ್‌ಗೆ ನಾಲ್ಕನೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಅಂಬಾಟಿ ರಾಯುಡು 10 ರನ್ ಸಿಡಿಸಿ ನಿರ್ಗಮಿಸಿದರು. ಪೆವಿಲಿಯನ್ ಪರೇಡ್, ಅಲ್ಪಮೊತ್ತಕ್ಕೆ ಪ್ರಮುಖ ವಿಕೆಟ್ ಕಳೆದುಕೊಂಡು ತೀವ್ರ ಹಿನ್ನಡೆ ಅನುಭವಿಸಿದ ತಂಡಕ್ಕೆ ಎಂ.ಎಸ್.ಧೋನಿ ಬ್ಯಾಟಿಂಗ್ ನೆರವಾಯಿತು.

ಧೋನಿ ವಿಕೆಟ್ ಉಳಿಸಿಕೊಂಡು ರನ್ ಕಲೆಹಾಕಲು ಯತ್ನಿಸಿದರು. ಧೋನಿ ಏಕಾಂಗಿ ಹೋರಾಟ ನಡೆಸಿದರೆ ಇತರರಿಂದ ಉತ್ತಮ ಸಾಥ್ ಸಿಗಲಿಲ್ಲ. ಶಿವಂ ದುಬೆ 10 ರನ್ ಸಿಡಿಸಿ ನಿರ್ಗಮಿಸಿದರು. ಡ್ವೇನ್ ಬ್ರಾವೋ 12 ರನ್ ಸಿಡಿಸಿ ಔಟಾದರು. ಸಿಮ್ರಜಿತ್ ಸೀಂಗ್, ಮಹೇಶಾ ತೀಕ್ಷನಾ ಅಬ್ಬರಿಸಿಲಿಲ್ಲ. 

14ನೇ ಓವರ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 9 ವಿಕೆಟ್ ಕಳೆದುಕೊಂಡಿತು. ಮುಕೇಶ್ ಚೌಧರಿ 4 ರನ್ ಸಿಡಿಸಿ ರನೌಟ್ ಆದರು. ಈ ಮೂಲಕ ಚೆನ್ನೈ 97 ರನ್‌ಗೆ ಆಲೌಟ್ ಆಯಿತು. ಧೋನಿ ಅಜೇಯ 36 ರನ್ ಸಿಡಿಸಿದರು. ಧೋನಿ ಹೋರಾಟದಿಂದ ಚೆನ್ನೈ 97 ರನ್‌ಗಳಿಸಲು ಸಾಧ್ಯವಾಯಿತು. 

ಕೆ ಎಲ್ ರಾಹುಲ್-ಆತಿಯಾ ವಿವಾಹಕ್ಕೆ ಗ್ರೀನ್‌ ಸಿಗ್ನಲ್ ಕೊಟ್ಟ ಸುನಿಲ್ ಶೆಟ್ಟಿ..!

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯ ಸೇರಿ ಇನ್ನುಳಿದ 3 ಪಂದ್ಯಗಳನ್ನು ಗೆಲ್ಲಲೇಬೇಕು. ಇನ್ನು ಆರ್‌ಸಿಬಿ ಹಾಗೂ ರಾಜಸ್ಥಾನ ರಾಯಲ್ಸ್ ಇನ್ನುಳಿದ ಪಂದ್ಯಗಳನ್ನು ಸೋಲಬೇಕು. ಚೆನ್ನೈ ಉತ್ತಮ ರನ್‌ರೇಟ್ ಆಧಾರದಲ್ಲಿ ಗೆಲುವು ಸಾಧಿಸಿಬೇಕು. ಇವೆಲ್ಲವೂ ಕಷ್ಟಸಾಧ್ಯ. ಹೀಗಾಗಿ ಚೆನ್ನೈ ಪ್ಲೇ ಆಫ್ ರೇಸ್‌ನಿಂದ ಬಹುತೇಕ ಹೊರಬಿದ್ದಿದೆ. ಆದರೆ ಅತ್ಯಲ್ಪ ಮೊತ್ತ ದಾಖಲಿಸಿರುವ ಧೋನಿ ಪಡೆ ಮುಂಬೈ ವಿರುದ್ಧ ಮುಗ್ಗರಿಸಿದರೆ, ಅಧಿಕೃತವಾಗಿ ಪ್ಲೇ ಆಫ್ ರೇಸ್‌ನಿಂದ ಚೆನ್ನೈ ಹೊರಬೀಳಲಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ಬಳಿಕ ಪ್ಲೇ ಆಫ್ ರೇಸ್‌ನಿಂದ ಹೊರಿದ್ದ ಎರಡನೇ ತಂಡ ಚೆನ್ನೈ ಅನ್ನೋ ಅಪಖ್ಯಾತಿಗೆ ಗುರಿಯಾಗಲಿದೆ. 

ಗುಜರಾತ್ ಟೈಟಾನ್ಸ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇಷ್ಟೇ ಅಲ್ಲ ಪ್ಲೇ ಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಎರಡನೇ ಸ್ಥಾನದಲ್ಲಿರುವ ಲಖನೌ ಸೂಪರ್ ಜೈಂಟ್ಸ್ 16 ಅಂಕ ಸಂಪಾದಿಸಿದೆ. ಶೀಘ್ರದಲ್ಲೇ ಲಖನೌ ಅಧಿಕೃತವಾಗಿ ಪ್ಲೇ ಆಫ್ ಸ್ಥಾನ ಖಚಿತಪಡಿಸಲಿದೆ. ರಾಜಸ್ಥಾನ ರಾಯಲ್ಸ್ 12 ಪಂದ್ಯಗಳಲ್ಲಿ 7 ಗೆಲುವು ದಾಖಲಿಸಿದೆ. ಈ ಮೂಲಕ 3ನೇ ಸ್ಥಾನದಲ್ಲಿದೆ. 

click me!