IPL 2022 ಟಾಸ್ ಗೆದ್ದ ಗುಜರಾತ್ ತಂಡ ಬ್ಯಾಟಿಂಗ್ ಆಯ್ಕೆ

Published : May 10, 2022, 07:05 PM ISTUpdated : May 10, 2022, 07:11 PM IST
IPL 2022 ಟಾಸ್ ಗೆದ್ದ ಗುಜರಾತ್ ತಂಡ ಬ್ಯಾಟಿಂಗ್ ಆಯ್ಕೆ

ಸಾರಾಂಶ

ಐಪಿಎಲ್ 2022ರ ಹೊಸ ಎರಡು ತಂಡಗಳಾದ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಇಂದು ಮುಖಾಮುಖಿಯಾಗಲಿವೆ.  ಈ ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡ ಪ್ಲೇ ಆಫ್ ಸ್ಥಾನವನ್ನು ಅಧಿಕೃತ ಪಡಿಸಿಕೊಳ್ಳಲಿದೆ.  

ಪುಣೆ (ಮೇ.10): ಸತತ ಎರಡು ಸೋಲುಗಳನ್ನು ಕಂಡಿರುವ ಗುಜರಾತ್ ಟೈಟಾನ್ಸ್ (Gujarat Titans) ತಂಡ ಗೆಲುವಿನ ಲಯಕ್ಕೆ ಮರಳುವ ಪ್ರಯತ್ನದಲ್ಲಿ ಇಂದು ಭರ್ಜರಿ ಲಯದಲ್ಲಿರುವ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ತಂಡವನ್ನು ಎದುರಿಸಲಿದೆ. ಟಾಸ್ ಗೆದ್ದಿರುವ ಗುಜರಾತ್ ಟೈಟಾನ್ಸ್ (GT) ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. 

ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ಪರವಾಗಿ ಕರ್ಣ್ ಶರ್ಮ ಪಾದಾರ್ಪಣೆ ಮಾಡಿದರೆ, ಗುಜರಾತ್ ಟೈಟಾನ್ಸ್ ಪರವಾಗಿ ಸಾಯಿ ಕಿಶೋರ್ ಪಾದಾರ್ಪಣೆ ಮಾಡಿದ್ದಾರೆ. ರವಿ ಬಿಷ್ನೋಯಿ ಬದಲು ಲಕ್ನೋ ತಂಡದ ಪರವಾಗಿ ಕರ್ಣ್ ಶರ್ಮ (Karan Sharma) ಆಡಲಿದ್ದಾರೆ. ಗುಜರಾತ್ ತಂಡ ಪಂದ್ಯಕ್ಕೆ ಮೂರು ಬದಲಾವಣೆ ಮಾಡಿದೆ. ಸಾಯಿ ಸುದರ್ಶನ್ ಬದಲಿ ಸಾಯಿ ಕಿಶೋರ್ (Sai Kishore) ಆಡುವ ಅವಕಾಶ ಪಡೆದುಕೊಂಡಿದ್ದರೆ,  ಮ್ಯಾಥ್ಯೂ ವೇಡ್ ಬದಲು ಲಾಕಿ ಫರ್ಗ್ಯುಸನ್, ಪ್ರದೀಪ್ ಸಂಗ್ವಾನ್ ಬದಲು ಯಶ್ ದಯಾಳ್ ಆಡುವ ಅವಕಾಶ ಪಡೆದಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್ ಪ್ಲೇಯಿಂಗ್ ಇಲೆವೆನ್: ಕ್ವಿಂಟನ್ ಡಿ ಕಾಕ್(ವಿ.ಕೀ), ಕೆಎಲ್ ರಾಹುಲ್(ನಾಯಕ), ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ಆಯುಷ್ ಬಡೋನಿ, ಮಾರ್ಕಸ್ ಸ್ಟೋನಿಸ್, ಜೇಸನ್ ಹೋಲ್ಡರ್, ಕರಣ್ ಶರ್ಮಾ, ದುಷ್ಮಂತ ಚಮೀರಾ, ಅವೇಶ್ ಖಾನ್, ಮೊಹ್ಸಿನ್ ಖಾನ್

ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ ಇಲೆವೆನ್:  ವೃದ್ಧಿಮಾನ್ ಸಹಾ(ವಿ.ಕೀ), ಶುಭಮನ್ ಗಿಲ್, ಮ್ಯಾಥ್ಯೂ ವೇಡ್, ಹಾರ್ದಿಕ್ ಪಾಂಡ್ಯ(ಸಿ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಸಾಯಿ ಕಿಶೋರ್, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಮೊಹಮ್ಮದ್ ಶಮಿ

ಏನನ್ನು ನಿರೀಕ್ಷೆ ಮಾಡಬಹುದು: ಗುಜರಾತ್ ಟೈಟಾನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡ ಈ ಮೈದಾನದಲ್ಲಿ ಅಜೇಯವಾಗಿ ಉಳಿದಿದೆ. ಇಲ್ಲಿ ಆಡಿರುವ ಎರಡೂ ಪಂದ್ಯಗಳನ್ನು ಈ ಎರಡೂ ತಂಡಗಳು ಜಯಿಸಿವೆ.  ಈ ಮೈದಾನದಲ್ಲಿ ಆಡಿದ 11 ಪಂದ್ಯಗಳ ಪೈಕಿ ಮೊದಲು ಬ್ಯಾಟಿಂಗ್ ಮಾಡಿದ ತಂಡ 8ರಲ್ಲಿ ಜಯಿಸಿವೆ. ಲಕ್ನೋ ತಂಡ ಈ ಮೈದಾನದಲ್ಲಿ ಆಡಿದ್ದ ವೇಳೆ 153 ರನ್ ಗಳನ್ನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ರಾಜಸ್ಥಾನ ರಾಯಲ್ಸ್ 144 ರನ್ ರಕ್ಷಿಸಿಕೊಳ್ಳಲು ಯಶ ಕಂಡಿತ್ತು. ಈ ತಿಂಗಳ ಆರಂಭದಲ್ಲಿ ಚೆನ್ನೈ ತಂಡ ಈ ಮೈದಾನದಲ್ಲಿ 202 ರನ್ ಬಾರಿಸಿತ್ತು. ರುತುರಾಜ್ ಗಾಯಕ್ವಾಡ್ 99 ರನ್ ಬಾರಿಸಿದ್ದರು.

ನಿಮಗಿದು ಗೊತ್ತೇ?
- ಮೊದಲು ಬ್ಯಾಟಿಂಗ್ ಮಾಡಿದ್ದಾಗ ಗರಿಷ್ಠ ಗೆಲುವು ಕಂಡಿರುವ ತಂಡ ಲಕ್ನೋ ಸೂಪರ್ ಜೈಂಟ್ಸ್, ಲಕ್ನೋ ತಂಡ ಟಾರ್ಗೆಟ್ ನೀಡಿದ 7 ಪಂದ್ಯಗಳ ಪೈಕಿ 6ರಲ್ಲಿ ಗೆಲುವು ಕಂಡಿದೆ.

IPL 2022: ಹ್ಯಾಟ್ರಿಕ್ ಸೋಲಿನ ಬಳಿಕ ಕೆರಳಿದ ನಿಂತ RCB ಬಾಯ್ಸ್

- ಗುಜರಾತ್ ಟೈಟಾನ್ಸ್ ತಂಡ ಚೇಸಿಂಗ್ ವಿಚಾರದಲ್ಲಿ ಹಾಲಿ ಐಪಿಎಲ್ ನ (IPL 2022) ಬೆಸ್ಟ್ ಟೀಮ್ ಎನಿಸಿದೆ. ಚೇಸಿಂಗ್ ಮಾಡಿದ 6 ಪಂದ್ಯಗಳ ಪೈಕಿ 5ರಲ್ಲಿ ತಂಡ ಗೆಲುವು ಕಂಡಿದೆ.

IPL 2022: ರಾಕಿ ಭಾಯ್​​​ಗೆ ವೈಲೆನ್ಸ್ ಹಿಡಿಸಲ್ಲ, ಡಿಕೆ ಬಾಸ್​​​ಗೆ ಸಿಕ್ಸರ್ಸ್​ ಹಿಡಿಸಲ್ಲ..!

- ಐಪಿಎಲ್ 2022ರಲ್ಲಿ ಮಾರ್ಕಸ್ ಸ್ಟೋಯಿನಸ್ ಈವರೆಗೂ ಆಡಿದ 8 ಪಂದ್ಯಗಳ ಪೈಕಿ 5ರಲ್ಲಿ ಸ್ಟೋಯಿನಸ್ ಐದು ಭಿನ್ನ ಬ್ಯಾಟಿಂಗ್ ಕ್ರಮಾಂಕದಲ್ಲಿ ಆಡಿದ್ದಾರೆ. ರಾಜಸ್ಥಾನ ರಾಯಲ್ಸ್ ವಿರುದ್ಧ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದು 17 ಎಸೆತಗಳಲ್ಲಿ ಅಜೇಯ 38 ರನ್ ಬಾರಿಸಿದ್ದು ಅವರ ಗರಿಷ್ಠ ಮೊತ್ತ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ