
ಮುಂಬೈ(ಏ.21): ಸೆಪ್ಟೆಂಬರ್ 8, 2021. ಈ ದಿನಂದು ಎರಡು ಘಟನೆ ನಡೆದಿತ್ತು. ಟಿ20 ವಿಶ್ವಕಪ್ಗೆ ಟೀಂ ಇಂಡಿಯಾ (Team India) ಅನೌನ್ಸ್ ಆಯ್ತು, ಜೊತೆಗೆ ಇಬ್ಬರು ಸ್ಟಾರ್ ಸ್ಪಿನ್ನರ್ಸ್ಗೆ ದೊಡ್ಡ ಶಾಕ್ ಎದುರಾಯ್ತು. ಕುಲ್ಚಾ ಜೋಡಿ ಖ್ಯಾತಿಯ ಕುಲ್ದೀಪ್ ಯಾದವ್ (Kuldeep Yadav) ಹಾಗೂ ಯುಜವೇಂದ್ರ ಚಹಲ್ರನ್ನ (Yuzvendra Chahal) ಟಿ20 ವಿಶ್ವಕಪ್ನಿಂದ ಕೈಬಿಡಲಾಯ್ತು. ಅದ್ಯಾವ ಮಾನದಂಡದಲ್ಲಿ ಬಿಸಿಸಿಐ ಸೆಲೆಕ್ಟರ್ಸ್ ತಂಡವನ್ನ ಸೆಲೆಕ್ಟ್ ಮಾಡಿದ್ರೋ ಗೊತ್ತಿಲ್ಲ. ಆದ್ರೆ ಸ್ಟಾರ್ ಸ್ಪಿನ್ನರ್ಗಳಾದ ಚಹಲ್ ಹಾಗೂ ಕುಲ್ದೀಪ್ಗೆ ನಿಜಕ್ಕೂ ದೊಡ್ಡ ಮೋಸವಾಗಿತ್ತು. ಟಿ20 ಮಹಾಸಮರದ ಬಳಿಕನೂ ಇಬ್ಬರಿಗೆ ಕೆಲ ಕಾಲ ಟೀಂ ಇಂಡಿಯಾದಿಂದ ಗೇಟ್ಪಾಸ್ ಕೂಡ ನೀಡಲಾಯ್ತು. ಆದ್ರೆ ಈ ವರ್ಷಾರಂಭದಲ್ಲಿ ಮತ್ತೆ ಕುಲ್ಚಾ ಜೋಡಿ ಮತ್ತೆ ಜೊತೆಯಾಗಿ ಕಣಕ್ಕಿಳಿದ್ರು.
ಅಂದು ಯಾವ ಸೆಲೆಕ್ಟರ್ಸ್ ಟಿ20 ವಿಶ್ವಕಪ್ಗೆ ಕುಲ್ಚಾ ಜೋಡಿಯನ್ನ ಬಿಟ್ಟು ಅವಮಾನಿಸಿತ್ತೋ, ಯಾವ ಆಯ್ಕೆಗಾರರು ಇಬ್ಬರ ಕೆಪಾಸಿಟಿ ಮೇಲೆ ಅನುಮಾನ ಪಟ್ಟು ತಂಡದಿಂದ ಕಿಕೌಟ್ ಮಾಡಿದ್ರೋ ಇಂದು ಅದೇ ಸೆಲೆಕ್ಟರ್ಸ್ ಮೂಗಿನ ಮೇಲೆ ಕೈಯಿಟ್ಟು ನೋಡುವಂತೆ ಪ್ರದರ್ಶನವನ್ನ ಕುಲ್ಚಾ ಜೋಡಿ ಐಪಿಎಲ್‌ನಲ್ಲಿ ನೀಡ್ತಿದೆ.
15ನೇ ಐಪಿಎಲ್‌ನಲ್ಲಿ ಯುಜಿ-ಕುಲ್ದೀಪ್ ಬೊಂಬಾಟ್ ಪ್ರದರ್ಶನ:
ಹೌದು, ಪ್ರಸಕ್ತ ಐಪಿಎಲ್‌ನಲ್ಲಿ ಟೀಂ ಇಂಡಿಯಾದ ಯುಜವೇಂದ್ರ ಚಹಲ್ ಹಾಗೂ ಕುಲ್ದೀಪ್ ಯಾದವ್ ಸಾಲಿಡ್ ಪ್ರದರ್ಶನ ನೀಡ್ತಿದ್ದಾರೆ. ತನ್ನ ಸ್ಪಿನ್ ಕೈಚಳಕದಿಂದ ಇಡೀ ಐಪಿಎಲ್ ಲೋಕವನ್ನ ಮಂತ್ರ ಮುಗ್ದರನ್ನಾಗಿಸಿದ್ದಾರೆ. ವಿಕೆಟ್ ಬೇಟೆಗಾಗಿ ಇಬ್ಬರು ಜಿದ್ದಿಗೆ ಬಿದ್ದಿದ್ದಾರೆ. ಒಮ್ಮೆ ಚೈನಾಮ್ಯಾನ್ ಕುಲ್ದೀಪ್ ಮೇಲುಗೈ ಸಾಧಿಸಿದ್ರೆ, ಇನ್ನೊಮ್ಮೆ ಚಹಲ್ ಮೇಲುಗೈ ಸಾಧಿಸ್ತಿದ್ದಾರೆ. ಇಬ್ಬರು ಸೇರಿ ಕಲರ್ಫುಲ್ ಟೂರ್ನಿಯಲ್ಲಿ ಒಟ್ಟು 28 ವಿಕೆಟ್ ಪಡೆದು ಹಲ್ಚಲ್ ಎಬ್ಬಿಸಿದ್ದಾರೆ.
IPL 2022: ವಿಶ್ವದ ನಂ. 1 ಟೆಸ್ಟ್ ಬೌಲರ್, ಐಪಿಎಲ್‌ನಲ್ಲಿ ಪ್ಲಾಫ್ ಶೋ..!
17 ವಿಕೆಟ್ ಕಬಳಿಸಿದ ಚಹಲ್ ಪರ್ಪಲ್ ಕ್ಯಾಪ್ಮ್ಯಾನ್: ಆರ್ಸಿಬಿಯಿಂದ ಹೊರಬಿದ್ದ ಚಹಲ್, ರಾಜಸ್ಥಾನ ಸೇರಿದ ಬಳಿಕ ಇನ್ನುಷ್ಟು ವೈಲೆಂಟ್ ಆಗಿದ್ದಾರೆ. ಪ್ರತಿ ಪಂದ್ಯದಲ್ಲೂ ಎದುರಾಳಿ ಕಿಲ್ಲರ್ ಆಗಿ ಪರಿಣಮಿಸಿದ್ದಾರೆ. ಈವರೆಗೆ ಆರು ಪಂಧ್ಯಗಳನ್ನಾಡಿರುವ ಯುಜಿ 7.33 ರ ಎಕಾನಮಿಯಲ್ಲಿ 17 ವಿಕೆಟ್ ಕಬಳಿಸಿ ಪರ್ಪಲ್ ಕ್ಯಾಪ್ ಉಳಿಸಿಕೊಂಡಿದ್ದಾರೆ. ಅಲ್ಲದೇ ಇದೇ ಮೊದಲ ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ಗರಿಮೆ ಕೂಡ ಇವರದ್ದಾಗಿದೆ.
11 ವಿಕೆಟ್ ಪಡೆದು ಚಹಲ್ಗೆ ಪ್ರಬಲ ಸ್ಪರ್ಧೆ ನೀಡ್ತಿದ್ದಾರೆ ಕುಲ್ದೀಪ್: ಇನ್ನು ಕುಲ್ದೀಪ್ ಕೂಡ ಈ ಬಾರಿ ಐಪಿಎಲ್‌ನಲ್ಲಿ ಸ್ಪಿನ್ ಮ್ಯಾಜಿಕ್ ಮಾಡ್ತಿದ್ದಾರೆ. 5 ಪಂದ್ಯಗಳಿಂದ 11 ವಿಕೆಟ್ ಕಬಳಿಸಿ ಗರಿಷ್ಠ ವಿಕೆಟ್ ಪಡೆದ 3ನೇ ಬೌಲರ್ ಅನ್ನಿಸಿಕೊಂಡಿದ್ದಾರೆ. ಒಂದು ಬಾರಿ 4 ವಿಕೆಟ್ ಪಡೆದು ಚಹಲ್ಗೆ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ.
ಒಟ್ಟಿನಲ್ಲಿ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಹೊರಬಿದ್ದ ಕುಲ್ಚಾ ಜೋಡಿ ರಂಗಿನ್ ಆಟದಲ್ಲಿ ಸ್ಪಿನ್ ಮ್ಯಾಜಿಕ್ ನಡೆಸಿದ್ದಾರೆ. ಆ ಮೂಲಕ ಮುಂಬರೋ ಟಿ20 ವಿಶ್ವಕಪ್ನಲ್ಲಿ ಸ್ಥಾನ ಪಡೆದೇ ತೀರುವ ಛಲ ಇವರದ್ದು. ಯುಜಿ-ಕುಲ್ದೀಪ್ರ ಆ ಆಸೆ ಈಡೇರಲಿ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.