
ಮುಂಬೈ, (ಏ.16) : ಬಿಸಿಸಿಐ, ಇತಿಹಾಸದಲ್ಲೇ ಮೊದಲ ಬಾರಿ ಬಲಿಷ್ಠ ಅಧ್ಯಕ್ಷನನ್ನ ಕಂಡಿದೆ. ಬಂಗಾಳದ ಹುಲಿ ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷಗಾದೆಗೇರಿದ ಬಳಿಕ ಮಹತ್ತರ ಬದಲಾವಣೆಗಳಾಗಿವೆ. ಆಡಳಿತಾತ್ಮಕತೆಯಿಂದ ಹಿಡಿದು, ಭಾರತ ತಂಡದ ಕ್ರಿಕೆಟ್ ಬೆಳವಣಿಗೆಯಲ್ಲಿ ಹೊಸ ಪರ್ವಕ್ಕೆ ನಾಂದಿ ಹಾಡಿದ್ದಾರೆ. ಇದರ ಆದಿಯಾಗಿಯೇ ವಿವಿಎಸ್ ಲಕ್ಷ್ಮಣ್ರನ್ನ NCA ಡೈರೆಕ್ಟರ್ ಆಗಿ ನೇಮಿಸುವಲ್ಲಿ ಯಶಸ್ವಿಗೊಂಡಿದ್ರು.
ರಾಹುಲ್ ದ್ರಾವಿಡ್ರಂತೆ ಶಿಸ್ತು, ಸಂಯಮಕ್ಕೆ ಲಕ್ಷ್ಮಣ್ ಕೂಡ ಹೆಸರುವಾಸಿ. ಇವರ ಮಾರ್ಗದರ್ಶನದಲ್ಲಿ NCAಗೆ ಹೊಸ ಚೈತನ್ಯ ತುಂಬಬಹುದು ಎಂದು ಎಲ್ಲರೂ ನಿರೀಕ್ಷಿಸಿದ್ರು. ಆದ್ರೆ ಮೊದಲ ಹೆಜ್ಜೆಯಲ್ಲಿ ವಿವಿಎಸ್ ಲಕ್ಷ್ಮಣ್ ಎಡವಿದಂತಿದೆ. ಹೀಗಾಗಿ ಎನ್ಸಿಎ ಮುಖ್ಯಸ್ಥರ ವಿರುದ್ಧ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಫುಲ್ ಗರಂ ಆಗಿದ್ದಾರೆ.
ಖದರ್ ಕಳೆದುಕೊಂಡ IPL, 14 ವರ್ಷದ ಐಪಿಎಲ್ ಯಶಸ್ವಿ ಓಟಕ್ಕೆ ಬಿತ್ತಾ ಬ್ರೇಕ್..?
ದೀಪಕ್ ಚಹರ್ ಮರು ಇಂಜುರಿಗೆ ಬಿಸಿಸಿಐ ಕೆಂಡಾಮಂಡಲ:
ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಗಾಯಕ್ಕೆ ತುತ್ತಾಗಿದ್ದ ಯುವ ವೇಗಿ ದೀಪಕ್ ಚಹರ್ NCA ಪುನಶ್ಚೇತನ ಶಿಬಿರದಲ್ಲಿ ಭಾಗಿಯಾಗಿದ್ರು. ಸದ್ಯ ಈ ಬೌಲರ್ ಗಂಭೀರ ಬೆನ್ನು ನೋವಿಗೆ ತುತ್ತಾಗಿ, 2022ನೇ ಐಪಿಎಲ್ನಿಂದ ಹೊರಬಿದ್ದಿದ್ದಾರೆ. ಇದೇ ವಿಚಾರವಾಗಿ ಸೌರವ್ ಗಂಗೂಲಿ, NCA ವಿರುದ್ಧ ಕಿಡಿ ಕಾರಿದ್ದು, ಖಡಕ್ ಎಚ್ಚರಿಯೊಂದನ್ನ ನೀಡಿದ್ದಾರೆ.
ಅವ್ಯವಸ್ಥೆ ಸರಿಪಡಿಸಿಕೊಳ್ಳಿ ಎಂದು NCAಗೆ ಖಡಕ್ ವಾರ್ನಿಂಗ್:
ದೀಪಕ್ ಚಹರ್ ಮರು ಇಂಜುರಿ ಸುದ್ದಿ ಗಂಗೂಲಿ ಪಿತ್ತ ನೆತ್ತಿಗೇರುವಂತೆ ಮಾಡಿದೆ. NCA ಪುನಶ್ಚೇತನ ಶಿಬಿರದಲ್ಲಿ ಭಾಗವಹಿಸಿದ್ದ ಯಂಗ್ ಬೌಲರ್ ಶೀಘ್ರದಲ್ಲೇ ಗುಣಮುಖರಾಗಿ ಐಪಿಎಲ್ ಮರುಳುತ್ತಾರೆ ಎಂಬ ನಿರೀಕ್ಷೆಯಲ್ಲಿದ್ರು. ಆದ್ರೆ NCAಯಲ್ಲಿರುವಾಗಲೇ 2ನೇ ಬಾರಿ ಇಂಜುರಿಗೆ ಒಳಗಾಗಿ ಐಪಿಎಲ್ ತೊರೆದಿದ್ದಲ್ಲದೇ, ಮುಂದಿನ ನಾಲ್ಕು ತಿಂಗಳು ಟೀಮ್ ಇಂಡಿಯಾದಿಂದ ಹೊರಗುಳಿಯಲಿದ್ದಾರೆ. ಅಲ್ಲದೇ ಟಿ20 ವಿಶ್ವಕಪ್ ಆಡುವುದು ಕೂಡ ಅನುಮಾನ ಎನ್ನಲಾಗ್ತಿದೆ. ಒಂದು ವೇಳೆ ಚಹರ್ ಚುಟುಕು ದಂಗಲ್ನಿಂದ ಹೊರಬಿದ್ರೆ ಭಾರತಕ್ಕೆ ದೊಡ್ಡ ಹಿನ್ನಡೆಯಾಗಲಿದೆ.
ಈ ಕಹಿ ಸುದ್ದಿಯನ್ನ ಬಿಸಿಸಿಐಯಿಂದ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಪುನಶ್ಚೇತನ ಶಿಬಿರದಲ್ಲಿರುವಾಗಲೇ ಚಹರ್ ಇಂಜುರಿಗೆ ಒಳಗಾಗಿದ್ದು ಬಿಗ್ಬಾಸ್ಗಳಿಗೆ ಆಶ್ವರ್ಯ ತರಿಸಿದೆ. ನಿಮ್ಮ ಅಸಡ್ಡೆಯಿಂದಲೇ ಇದು ಜರುಗಿದೆ. ಆದಷ್ಟು ಬೇಗ ನಿಮ್ಮ ಅವ್ಯವಸ್ಥೆ ಬಗೆಹರಿಸಿಕೊಳ್ಳಿ ಎಂದು NCAಗೆ ಖಡಕ್ ವಾರ್ನಿಂಗ್ ಮಾಡಿದೆ.
NCAಯ ಈ ನಿರ್ಲಕ್ಷ್ಯ ಧೋರಣೆ ಇನ್ನೆಷ್ಟು ದಿನ..? :
ಅಂದಹಾಗೇ ವೀಕ್ಷಕರೇ, NCA ಎಡವಟ್ಟಿನಿಂದಾಗಿ ಪ್ಲೇಯರ್ಸ್ ಶಿಕ್ಷೆ ಅನುಭವಿಸ್ತಿರೋದು ಇದೇ ಮೊದಲೇನಲ್ಲ. ಈ ಹಿಂದೆಯೂ ಇಂತಹ ಘಟನೆಗಳು ಜರುಗಿವೆ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಸುದೀರ್ಘ ಕಾಲ NCA ಪುನಶ್ಚೇತನ ಶಿಬಿರದಲ್ಲಿ ಭಾಗವಹಿಸಿದ ಬಳಿಕ ಮತ್ತೆ ಗಾಯಕ್ಕೆ ತುತ್ತಾಗಿದ್ರು. ರವೀಂದ್ರ ಜಡೇಜಾ, ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಇಂಜುರಿ ವಿಚಾರದಲ್ಲಿಯೂ NCA ಕಾರ್ಯವೈಖರಿ ಬಗ್ಗೆ ಪ್ರಶ್ನೆ ಎದ್ದಿತ್ತು. ಫೈನಲಿ NCA ಇನ್ನಾದರೂ ಆಟಗಾರರ ಇಂಜುರಿ ವಿಚಾರದಲ್ಲಿ ನಿರ್ಲಕ್ಷ್ಯ ಧೋರಣೆ ಬಿಟ್ಟು, ತಪ್ಪು ತಿದ್ದಿಕೊಳ್ಳಲಿ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.