KGF-2 ವೀಕ್ಷಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ..! ವಿಡಿಯೋ ವೈರಲ್

By Suvarna News  |  First Published Apr 19, 2022, 2:55 PM IST

* KGF-2 ವೀಕ್ಷಿಸಿದ ಆರ್‌ಸಿಬಿ ಟೀಂ 

* ಏಫ್ರಿಲ್​​ 14 ರಂದು ತೆರೆಗೆ ಅಪ್ಪಳಿಸಿದ ಕೆಜಿಎಫ್ ಚಾಪ್ಟರ್​​​-2

* ಫಾಫ್ ಡು ಪ್ಲೆಸಿಸ್​​​​​ ಹುಡುಗರು ಚಿತ್ರ ವೀಕ್ಷಿಸುತ್ತಿರುವ ವಿಡಿಯೋ ವೈರಲ್


ಮುಂಬೈ(ಏ.19): ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಿ ಭಾಷೆಯ ಯಾವ ಸಿನಿ ಪ್ರಿಯನನ್ನ ಕೇಳಿದ್ರೂ ಚಿತ್ರ ಸೂಪರ್​​, ಅಲ್ಟಿಮೇಟ್​​​​, ಮೈಂಡ್​​ಬ್ಲೋವಿಂಗ್​​, ಪರ್ಫೆಕ್ಷನ್​​, ಪ್ಯಾನ್​ ವರ್ಲ್ಡ್ ಮೂವಿ ಅನ್ನೋ ರಿಯಾಕ್ಷನ್​​​. ಇದು ಕೆಜಿಎಫ್​​​-2 (KGF-2) ಚಿತ್ರದ ಬಗ್ಗೆ ಕೇಳಿ ಬರ್ತಿರೋ ಮೆಚ್ಚುಗೆಯ ಮಾತುಗಳಾಗಿವೆ. ಏಫ್ರಿಲ್​​ 14 ರಂದು ತೆರೆಗೆ ಅಪ್ಪಳಿಸಿದ ಕೆಜಿಎಫ್ ಚಾಪ್ಟರ್​​​-2 ಧೂಳೆಬ್ಬಿಸಿದೆ. ಗಲ್ಲಾಪೆಟ್ಟಿಯಲ್ಲಿ ಹೊಸ ಇತಿಹಾಸವನ್ನೇ ಬರೆದಿದೆ. ತೆರೆಗೆ ಅಪ್ಪಳಿಸಿ 5 ದಿನ ಕಳೆದ್ರೂ ಇನ್ನೂ ಚಿತ್ರದ ಫೀವರ್​ ಮಾತ್ರ ಇನ್ನು ಕಮ್ಮಿಯಾಗಿಲ್ಲ.

ಸದ್ಯ ಕೆಜಿಎಫ್​​-2 ಬಿರುಗಾಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡಕ್ಕೂ ಬೀಸಿದೆ. ಸ್ಕ್ರೀನ್​ ಮೇಲೆ ಪ್ರೇಕ್ಷಕರನ್ನ ಮಂತ್ರ ಮುಗ್ಧರನ್ನಾಗಿಸಿದ ಈ ಸೂಪರ್​ ಚಿತ್ರವನ್ನ, ಆರ್​ಸಿಬಿ ಆಂಡ್ ಟೀಮ್​ ಕೂಡ ವೀಕ್ಷಿಸಿದೆ. ಅಭಿಮಾನಿಗಳು ಚಿತ್ರಕ್ಕೆ ಜೈಕಾರ ಕೂಗಿದಂತೆ ಕೆಂಪಂಗಿ ಬಾಯ್ಸ್ ಕೂಡ ಚಿತ್ರಕ್ಕೆ ಜೈ ಜೋ ಅಂದಿದ್ದಾರೆ.

Tap to resize

Latest Videos

ಡೆಲ್ಲಿ ಕ್ಯಾಪಿಟಲ್ಸ್‌ ಬೇಟೆ ಬಳಿಕ ಕೆಜಿಎಫ್​​​-2 ಚಿತ್ರ ವೀಕ್ಷಿಸಿದ ಕೆಂಪಂಗಿ ಪಡೆ: 

ಡೆಲ್ಲಿ ತಂಡವನ್ನ ಮಣಿಸಿದ ಜೋಶ್ನಲ್ಲಿದ್ದ ಆರ್​ಸಿಬಿ & ಟೀಮ್​ ಮರುದಿನವೇ ಕೆಜಿಎಫ್​​​-2 ಚಿತ್ರವನ್ನ ವೀಕ್ಷಿಸಿದೆ. ಇವರಿಗಾಗಿ ತಂಗಿರುವ ಹೋಟೆಲ್​​​ನಲ್ಲಿ ಪ್ರತ್ಯೇಕ್ಷ ಶೋ ವ್ಯವಸ್ಥೆ ಮಾಡಲಾಗಿತ್ತು. ಸದ್ಯ ಫಾಫ್ ಡು ಪ್ಲೆಸಿಸ್​​​​​ ಹುಡುಗರು ಚಿತ್ರ ವೀಕ್ಷಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಇನ್ನು ಡೇವಿಡ್​​​ ವಿಲ್ಲಿ ಚಿತ್ರಕ್ಕೆ ಫಿದಾ ಆಗಿದ್ದು, ಅನ್​​​ಬಿಲೀವ್​​ಯೇಬಲ್​ ಎಂದಿದ್ದಾರೆ.

An evening to remember. 🤩🎥

Hopefully one on the field today! 👊🏼 pic.twitter.com/YWyM4ZqNTo

— Royal Challengers Bangalore (@RCBTweets)

IPL 2022: ಲಖನೌ ಸೂಪರ್‌ ಜೈಂಟ್ಸ್‌ ಸವಾಲು ಗೆಲ್ಲುತ್ತಾ ಆರ್‌ಸಿಬಿ..?

ಮಿಷಿನ್​​ ಗನ್​ ಹಿಡಿದು ಪೋಸ್​ ಕೊಟ್ಟ ಹರ್ಷಲ್​​-ಫಾಫ್​​​: ಇನ್ನು ಆರ್​ಸಿಬಿ & ಟೀಮ್​ ಬರಿ ಚಿತ್ರ ನೋಡಿ ಸುಮ್ಮನಾಗಿಲ್ಲ. ಚಿತ್ರದ ಫೈಟಿಂಗ್ ಶೂಟ್​ ವೇಳೆ ನಟ ಯಶ್​​ ಬಳಸಿದ ಮಿಷಿನ್ ಗನ್​ ಹಿಡಿದು ಹರ್ಷಲ್​​ ಪಟೇಲ್​​​ ಹಾಗೂ ಕ್ಯಾಪ್ಟನ್​ ಫಾಫ್​​ ಡು ಪ್ಲೆಸಿಸ್​​​​ ಪೋಟೋಗೆ ಪೋಸ್​ ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ಸ್ಯಾಂಡಲ್​ವುಡ್​ನ ದೊಡ್ಡ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್​, ಆರ್​ಸಿಬಿ ಜೊತೆ ಕೈ ಜೋಡಿಸಿತ್ತು. ಮನರಂಜನೆ, ಗ್ಲಾಮರ್​​, ಸಿನಿಮಾ ಮತ್ತು ಕ್ರೀಡೆಗಳ ಅದ್ಭುತ ಸಂಗಮದ ವಿಚಾರವಾಗಿ 3 ವರ್ಷ ಒಪ್ಪಂದಕ್ಕೆ ಸಹಿ ಹಾಕಿದ್ವು. ಇದರ ಭಾಗವಾಗಿಯೇ ಆರ್​ಸಿಬಿ ತಂಡ ಹೊಂಬಾಳೆ ಫಿಲ್ಮ್ಸ್​​​ ನಿರ್ಮಿಸಿರೋ ಕೆಜಿಎಫ್​​​-2 ಚಿತ್ರವನ್ನ ವೀಕ್ಷಿಸಿದೆ.

ಲಖನೌ ಸವಾಲಿಗೆ ಸಜ್ಜಾದ ಆರ್‌ಸಿಬಿ:

ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಸೋಲಿನ ಬಳಿಕ ಪುಟಿದೆದ್ದು ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೋಲುಣಿಸಿ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ರಾಯಲ್‌ ಚಾಲೆಂಜ​ರ್ಸ್‌ ಬೆಂಗಳೂರು ಮತ್ತೊಂದು ಗೆಲುವಿಗೆ ಎದುರು ನೋಡುತ್ತಿದ್ದು, ಮಂಗಳವಾರ ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ ಸೆಣಸಾಡಲಿದೆ. 15ನೇ ಆವೃತ್ತಿಯ ಐಪಿಎಲ್‌ನಲ್ಲಿ ಆಡಿರುವ 6 ಪಂದ್ಯಗಳಲ್ಲಿ ಫಾಫ್‌ ಡು ಪ್ಲೆಸಿ 4ರಲ್ಲಿ ಗೆಲುವು ಸಾಧಿಸಿದೆ. ಪಂಜಾಬ್‌ ವಿರುದ್ಧದ ಆರಂಭಿಕ ಪಂದ್ಯದ ಸೋಲಿನ ಬಳಿಕ ತಂಡ ಹ್ಯಾಟ್ರಿಕ್‌ ಗೆಲುವು ಸಾಧಿಸಿತ್ತು. ತಂಡ ಸುಧಾರಿತ ಪ್ರದರ್ಶನ ನೀಡುತ್ತಿದ್ದರೂ ಲಖನೌ ಎದುರು ಕಠಿಣ ಸವಾಲು ಎದುರಾಗುವ ಸಾಧ್ಯತೆ ಇದೆ. ಅತ್ತ ಲಖನೌ ಕೂಡಾ ಆಡಿರುವ 6 ಪಂದ್ಯಗಳಲ್ಲಿ 4ರಲ್ಲಿ ಗೆದ್ದಿದ್ದು, ಗೆಲುವಿನ ಓಟ ಮುಂದುವರಿಸುವ ತವಕದಲ್ಲಿದೆ.

 

click me!