* ನಿರ್ಣಾಯಕಘಟ್ಟದತ್ತ ಸಾಗುತ್ತಿದೆ 15ನೇ ಆವೃತ್ತಿಯ ಐಪಿಎಲ್
* ಐವರು ಆಟಗಾರರು ಈ ಬಾರಿಯ ಐಪಿಎಲ್‌ನಲ್ಲಿ ಮಿಂಚಲು ವಿಫಲ
* ಅಕ್ಟೋಬರ್-ನವೆಂಬರ್ನಲ್ಲಿ ಟಿ20 ವಿಶ್ವಕಪ್ ಟೂರ್ನಿಗೆ ಸ್ಥಾನ ಪಡೆಯೋದು ಡೌಟ್
ಮುಂಬೈ(ಮೇ.05): ಐಪಿಎಲ್ (IPL 2022) ಪರ್ಫಾಮೆನ್ಸ್ ನೋಡಿ ಭಾರತ ಏಕದಿನ ಮತ್ತು ಟೆಸ್ಟ್ ತಂಡಕ್ಕೆ ಆಟಗಾರರನ್ನ ಆಯ್ಕೆ ಮಾಡೋದಿಲ್ಲ. ಆದ್ರೆ ಕಲರ್ ಫುಲ್ ಟೂರ್ನಿಯಲ್ಲಿನ ಆಟ ನೋಡಿ ಟಿ20 ತಂಡಕ್ಕೆ ಆಯ್ಕೆ ಮಾಡಲಾಗುತ್ತೆ. ಹಾಗಿಯೇ ಟೀಂ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ ಐಪಿಎಲ್ ಮೇಲೆ ಕಣ್ಣಿಟ್ಟಿದ್ದಾರೆ. ಆಸ್ಟ್ರೇಲಿಯಾದಲ್ಲಿ ಇದೇ ಅಕ್ಟೋಬರ್-ನವೆಂಬರ್ನಲ್ಲಿ ಟಿ20 ವಿಶ್ವಕಪ್ (ICC T20 WorldCup) ಟೂರ್ನಿ ನಡೆಯುತ್ತಿದೆ. ಈ ಟೂರ್ನಿಗೆ ಟೀಂ ಇಂಡಿಯಾವನ್ನ (Team India) ಆಯ್ಕೆ ಮಾಡೋದಕ್ಕೂ ಮುನ್ನ ಹಿಂದಿನ ಸಾಧನೆ ಜೊತೆ ಈ ಸೀಸನ್ ಐಪಿಎಲ್ ಪರ್ಫಾಮೆನ್ಸ್ ಅನ್ನೂ ಸೆಲೆಕ್ಟರ್ಸ್ ಪರಿಗಣಿಸುತ್ತಾರೆ. ಆದರೆ ಈ ಐಪಿಎಲ್‌ನಲ್ಲಿ ಐವರು ಟೀಂ ಇಂಡಿಯಾ ಪ್ಲೇಯರ್ಸ್ ಪ್ಲಾಫ್ ಶೋ ನೀಡ್ತಿದ್ದಾರೆ. ಹಾಗಾಗಿ ಅವರು ಮತ್ತೆ ಭಾರತ ತಂಡಕ್ಕೆ ಆಯ್ಕೆಯಾಗೋದು ಅನುಮಾನವಾಗಿದೆ.
1. ಇಶಾನ್ ಕಿಶನ್:
ಮುಂಬೈ ಇಂಡಿಯನ್ಸ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಇಶಾನ್ ಕಿಶನ್, ಮೊದಲೆರಡು ಪಂದ್ಯದಲ್ಲಿ ಬ್ಯಾಕ್ ಟು ಬ್ಯಾಕ್ ಎರಡು ಹಾಫ್ ಸೆಂಚುರಿ ಬಾರಿಸಿ ಮಿಂಚಿದ್ರು. ಬಳಿಕ ಅವರ ಬ್ಯಾಟ್ನಿಂದ ರನ್ ಬರಲೇ ಇಲ್ಲ. 7 ಮ್ಯಾಚ್ನಲ್ಲಿ ವಿಫಲರಾದ್ರು. ಮುಂಬೈ ಸಹ 9 ಪಂದ್ಯಗಳಲ್ಲಿ ಗೆದ್ದಿರೋದು ಜಸ್ಟ್ ಒಂದನ್ನ ಮಾತ್ರ. ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸೋ ಇಶಾನ್, 9 ಮ್ಯಾಚ್ನಲ್ಲಿ 28ರ ಸರಾಸರಿಯಲ್ಲಿ 225 ರನ್ ಗಳಿಸಿದ್ದಾರೆ. ವಿಕೆಟ್ ಹಿಂದೆ ಐದು ಕ್ಯಾಚ್ಗಳನ್ನ ಹಿಡಿದಿದ್ದಾರೆ. ಇದೇ ಈ ಸೀಸನ್ನಲ್ಲಿ ಇಶಾನ್ ಸಾಧನೆ. ಇನ್ನೊಬ್ಬ ಕೀಪರ್ ಸಂಜು ಸ್ಯಾಮ್ಸನ್ 10 ಪಂದ್ಯಗಳಲ್ಲಿ 298 ರನ್ ಗಳಿಸಿ, ನಾಯಕ ಹಾಗೂ ಕೀಪರ್ ಆಗಿಯೂ ಸಕ್ಸಸ್ ಆಗಿದ್ದಾರೆ. ಸಂಜುನೇ ಇಶಾನ್ಗೆ ಕಂಟಕವಾದ್ರೂ ಆಶ್ಚರ್ಯವಿಲ್ಲ.
2. ವೆಂಕಟೇಶ್ ಅಯ್ಯರ್:
2021ರ ಐಪಿಎಲ್‌ನಲ್ಲಿ ತಮ್ಮ ಆಲ್ರೌಂಡ್ ಆಟದಿಂದ ಮಿಂಚಿದ್ದ ವೆಂಕಟೇಶ್ ಅಯ್ಯರ್, ಟೀಂ ಇಂಡಿಯಾಗೆ ಡೈರೆಕ್ಟ್ ಎಂಟ್ರಿ ಪಡೆದ್ರು. ಆದ್ರೆ ಈ ಸೀಸನ್ನಲ್ಲಿ ತೀರ ಕಳಪೆ ಪ್ರದರ್ಶನ ನೀಡುತ್ತಿದ್ದು, ಟೀಂ ಇಂಡಿಯಾದಿಂದ ಗೇಟ್ ಪಾಸ್ ಸಿಗುವ ಸಾಧ್ಯತೆ ಇದೆ. ಕೆಕೆಆರ್ ಪರ ವೆಂಕಿ 9 ಪಂದ್ಯಗಳನ್ನಾಡಿದ್ದು, 132 ರನ್ ಹೊಡೆದಿದ್ದಾರೆ ಅಷ್ಟೆ. ಒಂದೂ ವಿಕೆಟ್ ಸಹ ಪಡೆದಿಲ್ಲ. ಹಾರ್ದಿಕ್ ಪಾಂಡ್ಯ ಬದಲಿಗೆ ವೆಂಕಿಯನ್ನೇ ಟಿ20 ವರ್ಲ್ಡ್ಕಪ್ನಲ್ಲಿ ಆಡಿಸುವ ಪ್ಲಾನ್ ಇತ್ತು. ಆದ್ರೆ ವೆಂಕಟೇಶ್ ಕಳಪೆ ಫಾರ್ಮ್ನಲ್ಲಿದ್ದಾರೆ. ಪಾಂಡ್ಯ ಬ್ಯಾಟಿಂಗ್, ಬೌಲಿಂಗ್ ಮತ್ತು ಕ್ಯಾಪ್ಟನ್ಸಿಯಲ್ಲಿ ಅದ್ಭುತ ಪ್ರದರ್ಶನ ನೀಡ್ತಿದ್ದಾರೆ. ಈಗ ವೆಂಕಿಗಿಂತ ಹಾರ್ದಿಕ್ ಬೆಟರ್ ಅನಿಸ್ತಿದೆ.
3. ಶಾರ್ದೂಲ್ ಠಾಕೂರ್:
ಆಲ್ರೌಂಡರ್ ಶರ್ದೂಲ್ ಠಾಕೂರ್, ಆಲ್ರೌಂಡ್ ಆಟವನ್ನೇ ಮರೆತಂತೆ ಕಾಣುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ ಶಾರ್ದುಲ್, 9 ಪಂದ್ಯಗಳಿಂದ ಜಸ್ಟ್ 7 ವಿಕೆಟ್ ಪಡೆದಿದ್ದಾರೆ. ಹೆಚ್ಚುಕಮ್ಮಿ 10ರ ಎಕಾನಮಿಯಲ್ಲಿ ರನ್ ನೀಡಿದ್ದಾರೆ. ಇನ್ನೂ ನೂರು ರನ್ ಸಹ ಹೊಡೆದಿಲ್ಲ. ಡೆಲ್ಲಿ ಸಹ 9 ಮ್ಯಾಚ್ನಿಂದ ಗೆದ್ದಿರೋದು ನಾಲ್ಕನ್ನ ಮಾತ್ರ. ಉಳಿದ ಐದು ಪಂದ್ಯಗಳಲ್ಲಿ ಮಿಂಚಿದ್ರೆ ಶರ್ದೂಲ್ಗೆ ಭವಿಷ್ಯ. ಇಲ್ಲ ಟೀಂ ಇಂಡಿಯಾದಿಂದ ಗೇಟ್ ಪಾಸ್ ಗ್ಯಾರಂಟಿ.
4. ಋತುರಾಜ್ ಗಾಯಕ್ವಾಡ್:
ಕಳೆದ ಸೀಸನ್ನಲ್ಲಿ ಆರೆಂಜ್ ಕ್ಯಾಪ್ ಗೆದ್ದಿದ್ದ ಚೆನ್ನೈ ಸೂಪರ್ ಕಿಂಗ್ಸ್ ಓಪನರ್ ಋತುರಾಜ್ ಗಾಯಕ್ವಾಡ್, ಈ ಸಲ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ. 9 ಪಂದ್ಯಗಳಿಂದ ಹೊಡೆದಿರುವುದು 237 ರನ್ ಮಾತ್ರ. ಅದರಲ್ಲಿ ಎರಡು ಮ್ಯಾಚ್ನಲ್ಲೇ 172 ರನ್ ಬಾರಿಸಿದ್ದಾರೆ. ಅಂದರೆ ಉಳಿದ 7 ಪಂದ್ಯದಿಂದ ಜಸ್ಟ್ 65 ರನ್ ಮಾತ್ರ. ಉಳಿದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ರೆ ರಿಸರ್ವ್ ಓಪನರ್ ಆಗಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಇಲ್ಲವಾದ್ರೆ ಕಿಕೌಟೇ.
5. ಭುವನೇಶ್ವರ್ ಕುಮಾರ್:
32 ವರ್ಷದ ಭುವನೇಶ್ವರ್ ಕುಮಾರ್, ಯಾಕೋ ಕಳಪೆ ಫಾರ್ಮ್ನಲ್ಲಿದ್ದಾರೆ. ಐಪಿಎಲ್‌ನಲ್ಲಿ ಸನ್ ರೈಸರ್ಸ್ ಪರ ಆಡುತ್ತಿರುವ ಭುವಿ, 9 ಪಂದ್ಯಗಳಿಂದ 9 ವಿಕೆಟ್ ಪಡೆದಿದ್ದಾರೆ. ಕಳೆದ ಟಿ20 ವಿಶ್ವಕಪ್ನಲ್ಲಿ ಬೆಂಚ್ ಕಾಯ್ದಿದ್ದ ಭುವನೇಶ್ವರ್, ಈ ಸಲದ ವರ್ಲ್ಡ್ಕಪ್ಗೆ ಆಯ್ಕೆಯಾಗೋದೇ ಡೌಟ್.