ರೋಹಿತ್ ಶರ್ಮ ಹಾಗೂ ಇಶಾನ್ ಕಿಶನ್ ಮೊದಲ ವಿಕೆಟ್ ಗೆ ಸ್ಫೋಟಕ ಆಟವಾಡಿದರೂ, ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ನಲ್ಲಿ ಕುಸಿತ ಕಂಡ ಮುಂಬೈ ಇಂಡಿಯನ್ಸ್ ತಂಡ, ಗುಜರಾತ್ ಟೈಟಾನ್ಸ್ ತಂಡದ ಗೆಲುವಿಗೆ 000 ರನ್ ಸವಾಲು ನೀಡಿದೆ.
ಮುಂಬೈ (ಮೇ. 6): ಸಂಘಟಿತ ಬ್ಯಾಟಿಂಗ್ ಪ್ರಯತ್ನ ತೋರಿದ ಮುಂಬೈ ಇಂಡಿಯನ್ಸ್ (Mumbai Indians) ತಂಡ ಅಂಕಪಟ್ಟಿಯ ಅಗ್ರಸ್ಥಾನಿ ಗುಜರಾತ್ ಟೈಟಾನ್ಸ್ (Gujarat Titans ) ವಿರುದ್ಧ ಉತ್ತಮ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಗಿದೆ. ಈಗಾಗಲೇ ಹಾಲಿ ಆವೃತ್ತಿಯ ಐಪಿಎಲ್ ನಿಂದ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್ ತಂಡ 2ನೇ ಗೆಲುವಿನ ನಿರೀಕ್ಷೆಯಲ್ಲಿದ್ದರೆ, ಗುಜರಾತ್ ಟೈಟಾನ್ಸ್ ತಂಡ ಪ್ಲೇ ಆಫ್ ಖಚಿತಪಡಿಸಿಕೊಳ್ಳುವ ಇರಾದೆಯಲ್ಲಿದೆ.
ಬ್ರಬೋರ್ನ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ (MI) ತಂಡ, ರೋಹಿತ್ ಶರ್ಮ ( Rohit Sharma ) ಹಾಗೂ ಇಶಾನ್ ಕಿಶನ್ ( Ishan Kishan ) ಅವರ ಉತ್ತಮ ಆರಂಭಿಕ ಜೊತೆಯಾಟದ ಬಳಿಕ 6 ವಿಕೆಟ್ ಗೆ 177 ರನ್ ಕಲೆಹಾಕಿತು. ಕೊನೇ ಹಂತದಲ್ಲಿ ಟಿಮ್ ಡೇವಿಡ್ ( Tim David ) ಹಾಗೂ ತಿಲಕ್ ವರ್ಮ ( Tilak Verma ) ಮುಂಬೈ ತಂಡದ ಮೊತ್ತವನ್ನು ಏರಿಸಲು ನೆರವಾದರು.
ಬ್ಯಾಟಿಂಗ್ ಆರಂಭಿಸಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ರೋಹಿತ್ ಶರ್ಮ ಹಾಗೂ ಇಶಾನ್ ಕಿಶನ್ ಜೋಡಿ ಓವರ್ ಗೆ 10 ರಂತೆ 45 ಎಸೆತಗಳಲ್ಲಿ 74 ರನ್ ಗಳ ಅದ್ಭುತ ಜೊತೆಯಾಟವಾಡಿದರು. 29 ಎಸೆತ ಎದುರಿಸಿದ ಇಶಾನ್ ಕಿಶನ್ 5 ಬೌಂಡರಿ, 1 ಸಿಕ್ಸರ್ ನೆರವಿನಿಂದ 45 ರನ್ ಬಾರಿಸಿದರೆ, 28 ಎಸೆತ ಎದುರಿಸಿದ ರೋಹಿತ್ ಶರ್ಮ 5 ಬೌಂಡರಿ ಹಾಗೂ 2 ಸಿಕ್ಸರ್ ಗಳಿದ್ದ 43 ರನ್ ಸಿಡಿಸಿ ಅಬ್ಬರಿಸಿದರು. ರಶೀದ್ ಖಾನ್ ಎಸೆದ 8ನೇ ಓವರ್ ನ ಮೂರನೇ ಎಸೆತದಲ್ಲಿ ರೋಹಿತ್ ಶರ್ಮ ಎಲ್ ಬಿಯಾಗಿ ಹೊರನಡೆಯುವ ಮೂಲಕ ಗುಜರಾತ್ ಮೊದಲ ಯಶಸ್ಸು ಕಂಡಿತು.
ಮೊದಲ ವಿಕೆಟ್ ಜೊತೆಯಾಟ ಬೇರ್ಪಟ್ಟ ಬಳಿಕ ಮುಂಬೈ ಇಂಡಿಯನ್ಸ್ ಮೇಲೆ ಕಡಿವಾಣ ಹೇರಲು ಗುಜರಾತ್ ಯಶಸ್ವಿಯಾಯಿತು. 11 ಎಸೆತಗಳನ್ನು ಆಡಿದ ಸೂರ್ಯಕುಮಾರ್ ಯಾದವ್ 13 ರನ್ ಬಾರಿಸಿ ಪ್ರದೀಪ್ ಸಂಗ್ವಾನ್ ಗೆ ವಿಕೆಟ್ ನೀಡಿದ್ದು ಮುಂಬೈ ತಂಡದ ದೊಡ್ಡ ಮೊತ್ತದ ಆಸೆಗೆ ಏಟು ನೀಡಿತು. ಅಕರ್ಷಕವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಇಶಾನ್ ಕಿಶನ್ ಹಾಗೂ ಅನುಭವಿ ಕೈರಾನ್ ಪೊಲ್ಲಾರ್ಡ್ (4) ಎಂಟು ರನ್ ಗಳ ಅಂತರದಲ್ಲಿ ಔಟಾದರು. ಇಶಾನ್ ಕಿಶನ್ ವಿಕೆಟ್ ಅನ್ನು ಅಲ್ಜಾರಿ ಜೋಸೆಫ್ ಪಡೆದುಕೊಂಡರೆ, ಕೈರಾನ್ ಪೊಲ್ಲಾರ್ಡ್, ರಶೀದ್ ಖಾನ್ ಎಸೆತದಲ್ಲಿ ಬೌಲ್ಡ್ ಆದರು.
ಐಪಿಎಲ್ ಇತಿಹಾಸದ 2ನೇ ಅತ್ಯಂತ ವೇಗದ ಎಸೆತ ಎಸೆದ ಉಮ್ರಾನ್ ಮಲಿಕ್!
119 ರನ್ ಗೆ 4 ವಿಕೆಟ್ ಕಳೆದುಕೊಂಡ ತಂಡಕ್ಕೆ ತಿಲಕ್ ವರ್ಮ (21 ರನ್, 16 ಎಸತೆ, 2 ಸಿಕ್ಸರ್) ಹಾಗೂ ಟಿಮ್ ಡೇವಿಡ್ (44*ರನ್, 21 ಎಸೆತ, 2 ಬೌಂಡರಿ, 4 ಸಿಕ್ಸರ್) 37 ರನ್ ಜೊತೆಯಾಟವಾಡಿದರು. ಇದರಿಂದಾಗಿ ಮುಂಬೈ ಇಂಡಿಯನ್ಸ್ ಸವಾಲಿನ ಮೊತ್ತ ಪೇರಿಸುವಲ್ಲಿ ಯಶ ಕಂಡಿತು. ಅದರಲ್ಲೂ ಟಿಮ್ ಡೇವಿಡ್,
IPL 2022 ಖಲೀಲ್ ಅಹ್ಮದ್ ಸೂಪರ್ ದಾಳಿ, 5ನೇ ಗೆಲುವು ಕಂಡ ಡೆಲ್ಲಿ
20 ಸಿಕ್ಸರ್ ಚಚ್ಚಿಸಿಕೊಂಡ ಲಾಕಿ ಫರ್ಗುಸನ್ : ಗುಜರಾತ್ ಟೈಟಾನ್ಸ್ ತಂಡದ ವೇಗಿ ಲಾಕಿ ಫರ್ಗುಸನ್ ಹಾಲಿ ಆವೃತ್ತಿಯಲ್ಲಿ ಆಡಿದ ಪಂದ್ಯಗಳಿಂದ 20 ಸಿಕ್ಸರ್ ಗಳನ್ನು ಚಚ್ಚಿಸಿಕೊಂಡಿದ್ದಾರೆ. ಗರಿಷ್ಠ ಸಿಕ್ಸರ್ ಚಚ್ಚಿಸಿಕೊಂಡ ವೇಗದ ಬೌಲರ್ ಇವರಾಗಿದ್ದಾರೆ. ಆರ್ ಸಿಬಿ ತಂಡದ ವಾನಿಂದು ಹಸರಂಗ ಈ ಋತುವಿನಲ್ಲಿ ಈವರೆಗೂ 23 ಸಿಕ್ಸರ್ ಚಚ್ಚಿಸಿಕೊಂಡಿದ್ದಾರೆ.