IPL 2022: ಲಖನೌ ಐಪಿಎಲ್ ತಂಡಕ್ಕೆ ಗ್ಯಾರಿ ಕರ್ಸ್ಟನ್‌ ಕೋಚ್‌..?

By Suvarna News  |  First Published Nov 17, 2021, 1:43 PM IST

* 15ನೇ ಆವೃತ್ತಿಯ ಐಪಿಎಲ್‌ಗೆ ಎರಡು ಹೊಸ ತಂಡಗಳ ಸೇರ್ಪಡೆ

* ಬಲಿಷ್ಠ ತಂಡ ಕಟ್ಟಲು ಈಗಾಗಲೇ ಸಿದ್ದತೆ ಆರಂಭಿಸಿದ ಲಖನೌ

* ಗ್ಯಾರಿ ಕರ್ಸ್ಟನ್‌ಗೆ ಕೋಚ್ ಆಫರ್‌ ನೀಡಿದ ಲಖನೌ ಫ್ರಾಂಚೈಸಿ


ನವದೆಹಲಿ(ನ.17): 2022ರ ಆವೃತ್ತಿಯ ಐಪಿಎಲ್‌ಗೆ (IPL 2022) ಹೊಸದಾಗಿ ಸೇರ್ಪಡೆಯಾಗಿರುವ ಸಂಜಯ್ ಗೋಯೆಂಕಾ (Sanjay Goenka) ಮಾಲಿಕತ್ವದ ಲಖನೌ ತಂಡಕ್ಕೆ ದಕ್ಷಿಣ ಆಫ್ರಿಕಾ ಮಾಜಿ ಆಟಗಾರ, ಭಾರತ ತಂಡದ ಮಾಜಿ ಕೋಚ್‌ ಗ್ಯಾರಿ ಕಸ್ರ್ಟನ್‌ (Gary Kirsten) ಪ್ರಧಾನ ಕೋಚ್‌ ಆಗಿ ನೇಮಕವಾಗುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಜೊತೆಗೆ ಭಾರತದ ಮಾಜಿ ವೇಗಿ ಆಶಿಶ್‌ ನೆಹ್ರಾ (Ashish Nehra) ಸಲಹೆಗಾರರಾಗಿ ನೇಮಕಗೊಳ್ಳುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 

ಇಬ್ಬರ ಜೊತೆಯೂ ತಂಡದ ಮಾಲಿಕರು ಈಗಾಗಲೇ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದ್ದು, ಸದ್ಯದಲ್ಲೇ ಅಧಿಕೃತ ಘೋಷಣೆ ನಿರೀಕ್ಷಿಸಲಾಗಿದೆ. ಮಹೇಂದ್ರ ಸಿಂಗ್ ಧೋನಿ (MS Dhoni) ನೇತೃತ್ವದ ಟೀಂ ಇಂಡಿಯಾ (Team India), ಗ್ಯಾರಿ ಕರ್ಸ್ಟನ್‌ ಮಾರ್ಗದರ್ಶನದಲ್ಲಿ 2011ರಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇನ್ನು ಐಪಿಎಲ್‌ನಲ್ಲಿ ಗ್ಯಾರಿ ಕರ್ಸ್ಟನ್ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಹಾಗೂ ಆರ್‌ಸಿಬಿ (RCB) ತಂಡ ಪ್ರಧಾನ ಕೋಚ್‌ ಆಗಿಯೂ ಕಾರ್ಯನಿರ್ವಹಿಸಿದ್ದರು. ಇನ್ನು ಆಶಿಶ್ ನೆಹ್ರಾ ಆರ್‌ಸಿಬಿಯ ಬೌಲಿಂಗ್‌ ಕೋಚ್‌ ಆಗಿ ಕಾರ‍್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

Latest Videos

undefined

15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಈಗಿರುವ 8 ತಂಡಗಳ ಜತೆ ಮತ್ತೆರಡು ತಂಡಗಳು ಸೇರ್ಪಡೆಯಾಗಿದ್ದು, ಒಟ್ಟು 10 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. ಇತ್ತೀಚೆಗಷ್ಟೇ ನಡೆದ ತಂಡಗಳ ಹರಾಜಿನಲ್ಲಿ ಸಂಜಯ್ ಗೋಯೆಂಕಾ ಒಡೆತನದ RPSG ಗ್ರೂಪ್‌ ಬರೋಬ್ಬರಿ 7,090 ಕೋಟಿ ರುಪಾಯಿಗೆ ಬಿಡ್‌ ಮಾಡಿ ಲಖನೌ ತಂಡದ ಫ್ರಾಂಚೈಸಿ ಹಕ್ಕು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

Team Indiaದಲ್ಲಿ ವಿರಾಟ್ ಕೊಹ್ಲಿ ಪಾತ್ರದ ಬಗ್ಗೆ ತುಟಿಬಿಚ್ಚಿದ ಕ್ಯಾಪ್ಟನ್ ರೋಹಿತ್ ಶರ್ಮಾ..!

2022ನೇ ಸಾಲಿನ ಐಪಿಎಲ್ ಟೂರ್ನಿಗೂ ಮುನ್ನ ಮೆಗಾ ಹರಾಜು ನಡೆಯಲಿದೆ. ಮೆಗಾ ಹರಾಜಿಗೂ ಮುನ್ನ ಈಗಿರುವ 8 ಫ್ರಾಂಚೈಸಿಗಳಿಗೆ ಗರಿಷ್ಠ ನಾಲ್ವರು ಆಟಗಾರರನ್ನು(2 ದೇಶಿ+2 ವಿದೇಶಿ) ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಇನ್ನು ಹೊಸ ಎರಡು ತಂಡಗಳಿಗೆ ಮೆಗಾ ಹರಾಜಿಗೂ (Mega Auction) ಮುನ್ನ ಮೂವರು(ಇಬ್ಬರು ದೇಶಿ+ಒಬ್ಬರು ವಿದೇಶಿ) ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಆದರೆ ಈ ಬಾರಿಯ ಮೆಗಾ ಹರಾಜಿನಲ್ಲಿ ರೈಟ್ ಟು ಮ್ಯಾಚ್‌ ಕಾರ್ಡ್ ಬಳಕೆ ಇರುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

ಆ್ಯಷಸ್‌ ಸವಾಲಿಗೆ ನನಗೆ ಪಂತ್‌ ಸ್ಫೂರ್ತಿ: ಬಟ್ಲರ್‌

ಮೆಲ್ಬರ್ನ್‌: ಟಿ20 ವಿಶ್ವಕಪ್‌ (ICC T20 World Cup) ಸೆಮೀಸ್‌ನಲ್ಲಿ ಮುಗ್ಗರಿಸಿದ ಇಂಗ್ಲೆಂಡ್‌ ಮುಂದಿನ ತಿಂಗಳು ಪ್ರತಿಷ್ಠಿತ ಆ್ಯಷಸ್‌ ಟೆಸ್ಟ್‌ ಸರಣಿ ಆಡಲು ಆಸ್ಪ್ರೇಲಿಯಾಗೆ ತೆರಳಲಿದ್ದು, ಇಂಗ್ಲೆಂಡ್‌ನ ತಾರಾ ವಿಕೆಟ್‌ ಕೀಪರ್‌ ಬ್ಯಾಟರ್‌ ಜೋಸ್‌ ಬಟ್ಲರ್‌ (Jos Buttler), ರಿಷಭ್‌ ಪಂತ್‌ (Rishabh Pant) ರಿಂದ ಸ್ಫೂರ್ತಿ ಪಡೆಯುವುದಾಗಿ ಹೇಳಿಕೊಂಡಿದ್ದಾರೆ. 

Team India ಕೋಚ್ ಹುದ್ದೆಯಿಂದ ಕೆಳಗಿಳಿದ ಬಳಿಕ ಹೊಸ ಕನಸನ್ನು ಬಿಚ್ಚಿಟ್ಟ ರವಿಶಾಸ್ತ್ರಿ..!

‘ಪಂತ್‌ರ ನಿರ್ಭೀತ ಆಟ ನನಗೆ ಬಹಳ ಇಷ್ಟ. ಆ್ಯಷಸ್‌ನಲ್ಲಿ ಅವರ ಆಟದ ಶೈಲಿಯನ್ನು ಅಳವಡಿಸಿಕೊಳ್ಳಲು ಎದುರು ನೋಡುತ್ತಿದ್ದೇನೆ. ಕಳೆದ ಆಸ್ಪ್ರೇಲಿಯಾ ಪ್ರವಾಸದಲ್ಲಿ ಪಂತ್‌ ಆಡಿದ ಆಟ ನನಗೆ ಸ್ಫೂರ್ತಿ ತುಂಬಿದೆ’ ಎಂದು ಬಟ್ಲರ್‌ ಹೇಳಿದ್ದಾರೆ. ಡಿ.8ರಿಂದ ಆ್ಯಷಸ್‌ ಸರಣಿ ಆರಂಭಗೊಳ್ಳಲಿದೆ.

ಕಿವೀಸ್‌ ಟೆಸ್ಟ್‌ಗೆ ಭಾರತ ಟೆಸ್ಟ್‌ ತಜ್ಞರ ಅಭ್ಯಾಸ

ಮುಂಬೈ: ನವೆಂಬರ್ 25ರಂದು ಆರಂಭವಾಗಲಿರುವ ನ್ಯೂಜಿಲೆಂಡ್‌ ವಿರುದ್ಧದ 2 ಪಂದ್ಯಗಳ ಟೆಸ್ಟ್‌ ಸರಣಿಗೆ ಭಾರತ ಟೆಸ್ಟ್‌ ತಂಡದ ಪ್ರಮುಖ ಆಟಗಾರರು ಇಲ್ಲಿನ ಎಂಸಿಎ ಮೈದಾನದಲ್ಲಿ 2 ದಿನಗಳ ಕಾಲ ಅಭ್ಯಾಸ ನಡೆಸಿದರು. ಮೊದಲ ಟೆಸ್ಟ್‌ನಲ್ಲಿ ನಾಯಕತ್ವ ವಹಿಸಲಿರುವ ಅಜಿಂಕ್ಯ ರಹಾನೆ(Ajinkya Rahane), ಚೇತೇಶ್ವರ್‌ ಪೂಜಾರ, ಶುಭ್‌ಮನ್‌ ಗಿಲ್‌, ವಿಕೆಟ್‌ ಕೀಪರ್‌ಗಳಾದ ವೃದ್ಧಿಮಾನ್‌ ಸಾಹ, ಕೆ.ಎಸ್‌.ಭರತ್‌, ವೇಗಿಗಳಾದ ಇಶಾಂತ್‌ ಶರ್ಮಾ, ಉಮೇಶ್‌ ಯಾದವ್‌, ಸ್ಪಿನ್ನರ್‌ ಜಯಂತ್‌ ಯಾದವ್‌ ಅಭ್ಯಾಸ ನಡೆಸಿದರು.

click me!