IPL 2022: ಪ್ರತಿಭೆ ಇದ್ರೂ ಈ ನಾಲ್ವರಿಗೆ ಚಾನ್ಸ್ ಕೊಡ್ತಿಲ್ಲ ಫ್ರಾಂಚೈಸಿಗಳು..!

By Suvarna News  |  First Published Apr 25, 2022, 3:05 PM IST

* ಈ ಬಾರಿಯ ಐಪಿಎಲ್‌ನಲ್ಲಿ ಅವಕಾಶವೇ ಸಿಗುತ್ತಿಲ್ಲ ನಾಲ್ವರು ಆಟಗಾರರಿಗೆ

* ಮೊದಲಾರ್ಧದಲ್ಲಿ ಬೆಂಚ್ ಕಾಯಿಸಲಷ್ಟೇ ಸೀಮಿತವಾದ ಪ್ರತಿಭಾನ್ವಿತ ಆಟಗಾರರ

* ಮಹಿಪಾಲ್‌ಗೆ ಇನ್ನಾದರೂ ಅರ್‌ಸಿಬಿ ನೀಡುತ್ತಾ ಚಾನ್ಸ್?


ಮುಂಬೈ(ಏ.25): ಕ್ರಿಕೆಟ್​ ಲೋಕದ ಶ್ರೀಮಂತ ಟಿ20 ಲೀಗ್​​​ ಅಂತ ಕರೆಸಿಕೊಳ್ಳೋ 15ನೇ ಐಪಿಎಲ್​​​​​ನ (IPL 2022) ಮೊದಲಾರ್ಧ ಕೊನೆಗೊಂಡಿವೆ. ಎಲ್ಲಾ ಪಂದ್ಯಗಳು ರೋಚಕತೆ ಉಣಬಡಿಸಿವೆ. ಸೆಕೆಂಡ್​ ಹಾಫ್​​​ನಲ್ಲಿ ಮತ್ತಷ್ಟು ಅತೀ ರೋಚಕ ಪಂದ್ಯಗಳಿಗೆ ಟೂರ್ನಿ ಸಾಕ್ಷಿಯಾಗಲಿದೆ. ಇನ್ನು ಟೂರ್ನಿ ಆರಂಭಗೊಂಡು ನಾಲ್ಕು ವಾರ ಕಳೆದಿದೆ. ಇಷ್ಟಾದ್ರು ಪ್ರತಿಭಾನ್ವಿತ ಆಟಗಾರರಿಗೆ ಇನ್ನೂ ಒಂದೂ ಚಾನ್ಸ್  ಸಿಕ್ಕಿಲ್ಲ. ಕೋಟಿ ಕೋಟಿ ಸುರಿದು ತೆಕ್ಕೆಗೆ ಹಾಕಿಕೊಂಡ ಫ್ರಾಂಚೈಸಿಗಳು ಇವರನ್ನ ಬೆಂಚ್​​​​ಗೆ ಸೀಮಿತಗೊಳಿಸಿವೆ. ಪ್ರತಿಭೆಗೆ ಸಾಣೆ ಹಾಕದೇ ಬೆಂಚ್​​ ಕಾಯ್ತಿರೋ ಆಟಗಾರರನ್ನ ಒನ್​ ಬೈ ಒನ್ ಹೇಳ್ತೇವೆ ನೋಡಿ.

ಡೆಲ್ಲಿ ತಂಡದಲ್ಲಿ  ಅವಕಾಶ ಸಿಗದೇ ಯಶ್​​​ ಧುಳ್​​ಗೆ ನಿರಾಸೆ:

Tap to resize

Latest Videos

ಅಂಡರ್​ 19 ವಿಶ್ವಕಪ್ (ICC U19 World Cup)​ ಗೆಲ್ಲಿಸಿಕೊಟ್ಟು, ರಣಜಿ ಟ್ರೋಫಿಯಲ್ಲಿ ರನ್​ ಹೊಳೆ ಹರಿಸಿದ ಯುವ ಬ್ಯಾಟರ್​ ಯಶ್​ ಧುಳ್​​ಗೆ (Yash Dhull) ಅವಕಾಶ ಮರೆಯಾಗಿದೆ. 50 ಲಕ್ಷ ಕೊಟ್ಟು ಖರೀದಿಸಿದ ಡೆಲ್ಲಿ ಈವರೆಗೆ ಒಂದೂ ಚಾನ್ಸ್ ಕೊಟ್ಟಿಲ್ಲ. ಬರೀ ಚೆಂಚ್​​ಗೆ ಸೀಮಿತಗೊಳಿಸಿದೆ. ಡೆಲ್ಲಿ ಮಿಡಲ್ ಆರ್ಡರ್​​​ ವೀಕ್​​ ಆಗಿದ್ದು, ಧುಳ್​​​ಗೆ ಚಾನ್ಸ್ ಕೊಟ್ರೆ ನ್ಯಾಯ ಒದಗಿಸಬಲ್ಲರು.

ಸೆಕೆಂಡ್​ ಹಾಫ್​​ನಲ್ಲಾದ್ರು ಲೊಮ್ರಾರ್​​​​​​ ಗೆ ಚಾನ್ಸ್ ಸಿಗುತ್ತಾ..?:

ಸಲೀಸಾಗಿ ದೊಡ್ಡ  ಹೊಡೆತಗಳ ಬಾರಿಸೋದ್ರಲ್ಲಿ ಯಂಗ್​ಮ್ಯಾನ್​​ ಮಹಿಪಾಲ್​​​ ಲೊಮ್ರೊರ್​​​ (Mahipal Lomror) ಎತ್ತಿದ ಕೈ. ಕಳೆದ ಬಾರಿ ರಾಜಸ್ಥಾನ ರಾಯಲ್ಸ್ (Rajasthan Royals) ಪರ ಇದನ್ನು ಪ್ರೂವ್​​ ಮಾಡಿದ್ರು. ಆದ್ರೆ ಆರ್​ಸಿಬಿ(RCB) ಸೇರಿದ ಬಳಿಕ ಲೊಮ್ರೊರ್​ ಮೂಲೆಗುಂಪಾಗಿದ್ದಾರೆ. ಆರಂಭಿಕ ಅನೂಜ್​​ ರಾವುತ್​​​ ಫೇಲಾಗಿದ್ದಾರೆ. ಇನ್ನು ಪ್ರಭುದೇಸಾಯಿ ಸ್ಥಿರ ಪ್ರದರ್ಶನ ನೀಡ್ತಿಲ್ಲ.  ಇಷ್ಟಾದ್ರು ಆರ್​​ಸಿಬಿ ಮ್ಯಾನೇಜ್​​ಮೆಂಟ್​​​​​ ಲೊಮ್ರೊರ್​ಗೆ ಚಾನ್ಸ್ ಕೊಡದೇ ಬೆಂಚ್​​ಗೆ ಕೊನೆಗೊಳಿಸಿದೆ. 

IPL 2022: ಮುಂಬೈ ಪ್ಲೇ ಆಫ್ ಕನಸು ಭಗ್ನ, ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆದ ಮೀಮ್ಸ್‌ಗಳಿವು..!

ಚೇತನ್ ಸಕಾರಿಯಾರನ್ನ ಸದ್ಭಳಕೆ ಮಾಡಿಕೊಳ್ತಿಲ್ಲ ಡೆಲ್ಲಿ: 

ಕಳೆದ ಆವೃತ್ತಿಯಲ್ಲಿ ರಾಜಸ್ಥಾನ ಪರ ಚೇತನ್ ಸಕಾರಿಯಾ (Chetan Sakariya) ಮಿಂಚಿನ ದಾಳಿ ನಡೆಸಿದ್ರು. ಪರಿಣಾಮ ಟೀಮ್​ ಇಂಡಿಯಾಗೂ (Team India) ಎಂಟ್ರಿ ಕೊಟ್ಟಿದ್ರು. ಇಂತಹ ಟ್ಯಾಲೆಂಟೆಂಡ್​ ಬೌಲರ್​​​​​​​​​​ ಗುರುತಿಸುವಲ್ಲಿ ಡೆಲ್ಲಿ ಎಡವಿದೆ. ತಂಡ ಬ್ಯಾಕ್ ಟು ಬ್ಯಾಕ್​ ಸೋಲ್ತಿದ್ರು ಸಕಾರಿಯನ್ನ ಆಡಿಸೋ ಮನಸ್ಸು ಮಾಡ್ತಿಲ್ಲ.

ಮಾರ್ಕಂಡೆಗೆ ಇನ್ನಾದ್ರು ಒಲಿಯುತ್ತಾ ಅದೃಷ್ಟ..?: 

2018 ಹಾಗೂ 2019ರ ಆವೃತ್ತಿಯಲ್ಲಿ ಮಯಾಂಕ್​ ಮಾರ್ಕಂಡೆ (Mayank Markande) ಸ್ಪಿನ್​ ಮೋಡಿ ಜೋರಾಗಿತ್ತು. ಇಂತಹ ಆಟಗಾರನಿಗೆ ಮುಂಬೈ ಇಂಡಿಯನ್ಸ್​​​ (Mumbai Indians) ಈವರೆಗೆ ಚಾನ್ಸ್ ಕೊಟ್ಟಿಲ್ಲ. ತಂಡ ಒಂದೂ ಗೆಲುವು ಕಾಣದೇ ಸೋತು ಸುಣ್ಣವಾಗಿದೆ. ಮುಂದಿನ ಪಂದ್ಯಗಳಲ್ಲಿ ಗೆಲುವು ಕಾಣಬೇಕಾದ್ರೆ ಯಂಗ್​ ಸ್ಪಿನ್ನರ್ ಮಾರ್ಕಂಡೆಗೆ ಸ್ಥಾನ ನೀಡಬೇಕಾಗಿದೆ.

ಮೇಲಿನ ನಾಲ್ವರು ಆಟಗಾರರಿಗೆ ಮೊದಲ ಹಾಫ್​​​​​ನಲ್ಲಿ ಚಾನ್ಸ್ ಸಿಕ್ಕಿಲ್ಲ. ಕನಿಷ್ಠ ಪಕ್ಷ ಸೆಕೆಂಡ್​ ಹಾಫ್​​ನಲ್ಲಾದ್ರು ಫ್ರಾಂಚೈಸಿಗಳು ಪ್ರತಿಭಾನ್ವಿತ ಆಟಗಾರರನ್ನ ಕಣಕ್ಕಿಳಿಸುತ್ತವಾ ಅನ್ನೋದನ್ನ ಕಾದು ನೋಡಬೇಕು.

click me!