IPL 2022: ಡೆಲ್ಲಿ ಗೆದ್ದರೆ ಪ್ಲೇ ಆಫ್​ಗೆ, ಮುಂಬೈ ಗೆದ್ದರೆ ಆರ್​ಸಿಬಿ ಪ್ಲೇ ಆಫ್​​ಗೆ..!!

Published : May 21, 2022, 04:41 PM IST
IPL 2022: ಡೆಲ್ಲಿ ಗೆದ್ದರೆ ಪ್ಲೇ ಆಫ್​ಗೆ, ಮುಂಬೈ ಗೆದ್ದರೆ ಆರ್​ಸಿಬಿ ಪ್ಲೇ ಆಫ್​​ಗೆ..!!

ಸಾರಾಂಶ

* ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ಡೆಲ್ಲಿ ಕ್ಯಾಪಿಟಲ್ಸ್‌ * ಡೆಲ್ಲಿ ವರ್ಸಸ್‌ ಮುಂಬೈ ನಡುವಿನ ಫಲಿತಾಂಶ ಆರ್‌ಸಿಬಿ ಪ್ಲೇ-ಆಫ್‌ ಭವಿಷ್ಯ ನಿರ್ಧಾರ * ಡೆಲ್ಲಿ ಸೋಲು, ಆರ್‌ಸಿಬಿ ಪ್ಲೇ ಆಫ್‌ ಹಾದಿಯನ್ನು ಸುಗಮಗೊಳಿಸಲಿದೆ

ಮುಂಬೈ(ಮೇ.21): ಐಪಿಎಲ್​ ಲೀಗ್ (IPL 2022 League Matches) ಪಂದ್ಯಗಳು ಇದೇ ಭಾನುವಾರ(ಮೇ.22) ಮುಗಿಯೋದು. ಆದ್ರೆ ನಾಳೆಯ ಪಂದ್ಯ ಆಟಕ್ಕುಂಟು ಲೆಕ್ಕಕ್ಕಿಲ್ಲ. ಹಾಗಾಗಿ ಇಂದಿನ ಲೀಗ್ ಮ್ಯಾಚೇ ಮಹತ್ವದ್ದು. ಇಂದು ವಾಂಖೇಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಮುಖಾಮುಖಿಯಾಗ್ತಿವೆ. ಈ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್‌ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ. ಇಂದು ಗೆದ್ದು ಪ್ಲೇ ಆಫ್​ಗೆ ಎಂಟ್ರಿ ಪಡೆಯಲು ಡೆಲ್ಲಿ ಕ್ಯಾಪಿಟಲ್ಸ್​ ಎದುರು ನೋಡ್ತಿದೆ. ಪ್ಲೇ ಆಫ್ ರೇಸ್​ನಿಂದ ಹೊರಬಿದ್ದಿರುವ ಐದು ಬಾರಿ ಚಾಂಪಿಯನ್ ಮುಂಬೈಗೆ ಈ ಪಂದ್ಯ ಅಷ್ಟೇನು ಮಹತ್ವದಲ್ಲ. ಆದರೂ ಗೆಲುವಿನೊಂದಿಗೆ 15ನೇ ಸೀಸನ್​ಗೆ ಗುಡ್ ಬೈ ಹೇಳಲು ಪ್ಲಾನ್ ಮಾಡಿಕೊಂಡಿದೆ.

ಗುಜರಾತ್ ಟೈಟನ್ಸ್ (Gujarat Titans)​, ಲಖನೌ ಸೂಪರ್ ಜೈಂಟ್ಸ್​ (Lucknow Supergiants) ಮತ್ತು ರಾಜಸ್ಥಾನ ರಾಯಲ್ಸ್‌ ಫ್ಲೇ ಆಫ್​ ಹಂತಕ್ಕೇರಿವೆ. ಇನ್ನೊಂದು ಸ್ಥಾನಕ್ಕೆ ಆರ್​ಸಿಬಿ (RCB) ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಫೈಟ್ ಬಿದ್ದಿದೆ. ಆರ್​ಸಿಬಿ 16 ಅಂಕಗಳಿಸಿದೆ. 14 ಅಂಕ ಗಳಿಸಿರೋ ಡೆಲ್ಲಿ ಕ್ಯಾಪಿಟಲ್ಸ್‌ ಇಂದು ಮುಂಬೈ ವಿರುದ್ಧ ಗೆದ್ದರೆ ಸಾಕು, ಉತ್ತಮ ರನ್ ರೇಟ್ ಇರುವುದರಿಂದ ನೇರ ಪ್ಲೇ ಆಫ್ ಹಂತಕ್ಕೇರಲಿದೆ. ಆಕಸ್ಮಾತ್ ಮುಂಬೈ ಇಂಡಿಯನ್ಸ್ ಗೆದ್ದರೆ ಆರ್​​ಸಿಬಿ ಪ್ಲೇ ಆಫ್​​​ಗೆ ಎಂಟ್ರಿ ಪಡೆಯಲಿದೆ.

ಡೆಲ್ಲಿಗೆ ಭಯ ಹುಟ್ಟಿಸಿದೆ Do or Die ಪದ:

ಡೆಲ್ಲಿ ಕ್ಯಾಪಿಟಲ್ಸ್ 13 ಲೀಗ್ ಪಂದ್ಯಗಳಲ್ಲಿ 7 ಗೆದ್ದು ಆರನ್ನು ಸೋತಿದೆ. ಕೊನೆಯ ಎರಡು ಮ್ಯಾಚ್ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್‌, ಹ್ಯಾಟ್ರಿಕ್ ಜಯದ ಮೇಲೆ ಕಣ್ಣಿಟ್ಟಿದೆ. ಮೊದಲ ಮುಖಾಮುಖಿಯಲ್ಲಿ ಮುಂಬೈ ಇಂಡಿಯನ್ಸ್ ಸೋಲಿಸಿದ್ದ ಪಂತ್ ಪಡೆ, ಮತ್ತೊಮ್ಮೆ ಸೋಲಿಸಲು ಎದುರು ನೋಡ್ತಿದೆ. ಆದರೆ ಅಸ್ಥಿರ ಪ್ರದರ್ಶನ ನೀಡ್ತಿರೋ ಡೆಲ್ಲಿ ಇಂದು ಒತ್ತಡದಲ್ಲೇ ಆಡಲಿದೆ. ಡು ಆರ್ ಡೈ ಅನ್ನೋ ಪದವೇ ಕ್ಯಾಪಿಟಲ್ಸ್​​​​​​​​​​​​​ಗೆ ಹಿನ್ನಡೆಯಾಗಲಿದೆ. ಜ್ವರದಿಂದ ಬಳಲುತ್ತಿದ್ದ ಪೃಥ್ವಿ ಶಾ ಚೇತರಿಸಿಕೊಂಡಿದ್ದು, ಇಂದು ಕಣಕ್ಕಿಳಿಯುವ ಸಾಧ್ಯತೆ ಇದೆ. ರಿಷಭ್ ಪಂತ್ (Rishabh Pant) ನಾಯಕತ್ವವೂ ಡೆಲ್ಲಿಗೆ ಶಾಪವಾಗಿ ಪರಿಣಮಿಸಿದೆ ಅನಿಸ್ತಿದೆ. ಡೆಲ್ಲಿ ಇದುವರೆಗೂ ಚಾಂಪಿಯನ್ ಆಗಿಲ್ಲ.

ಕೊನೆ ಪಂದ್ಯವನ್ನಾದ್ರೂ ಗೆಲ್ಲುತ್ತಾ ಮುಂಬೈ..?:

ಮುಂಬೈ ಇಂಡಿಯನ್ಸ್ (Mumbai Indians)​ 13ರಲ್ಲಿ 10 ಪಂದ್ಯ ಸೋತಿದೆ. ಈ ಮೂಲಕ ಮೆಂಟರ್​ ಸಚಿನ್ ತೆಂಡೂಲ್ಕರ್ (Sachin Tendulkar) ಜೆರ್ಸಿ ನಂಬರ್ ಅನ್ನ ತನ್ನ ಸೋಲಿಗೆ ಹಾಕಿಕೊಂಡಿದೆ. ಇಂದು ಗೆದ್ದರೂ ಪಾಯಿಂಟ್ ಟೇಬಲ್​ನಲ್ಲಿ ಕೊನೆ ಸ್ಥಾನದಿಂದ ಮೇಲೇಳಲ್ಲ. ಆದ್ರೂ ಪ್ರತಿಷ್ಠೆ. ತವರು ಸ್ಟೇಡಿಯಂ ವಾಂಖೆಡೆಯಲ್ಲಿ ಸೋತರೆ ಮುಂಬೈಗೆ ಭಾರಿ ಮುಖಭಂಗವಾಗಲಿದೆ. ಹಾಗಾಗಿ ಗೆಲುವಿಗಾಗಿ ಹೋರಾಟ ನಡೆಸಲಿದೆ. ಇಂದು ಸಚಿನ್ ಪುತ್ರ ಅರ್ಜುನ್ ತೆಂಡುಲ್ಕರ್ ಐಪಿಎಲ್​ಗೆ ಪದಾರ್ಪಣೆ ಮಾಡುವ ಸಾಧ್ಯತೆ ಇದೆ. ಸ್ಟಾರ್ ಪ್ಲೇಯರ್ ಕಳಪೆ ಫಾರ್ಮ್​ ಮುಂಬೈ ಸೋಲಿಗೆ ಕಾರಣವಾಗ್ತಿದೆ.

ಐಪಿಎಲ್‌ ಕಪ್​​​​​ ​​​​ಗೆದ್ದ ಬಿಗ್​​​ 3 ತಂಡಗಳು​ ಪ್ಲೇ ಆಫ್​​​ನಿಂದ ಔಟ್​​..!

ಮುಂಬೈ-ಡೆಲ್ಲಿ (Mumbai Indians vs Delhi Capitals) ಪಂದ್ಯ ಹೆಚ್ಚು ಮಹತ್ವ ಪಡೆದಿರೋದ್ರಿಂದ ಇಂದು ಭಾರಿ ಸಂಖ್ಯೆಯಲ್ಲಿ ಈ ಪಂದ್ಯವನ್ನ ವೀಕ್ಷಿಸಲಿದ್ದಾರೆ. ಮುಂಬೈನಲ್ಲಿ ಪಂದ್ಯ ನಡೆಯುತ್ತಿದ್ದು, ಸ್ಟೇಡಿಯಂನಲ್ಲೂ ಪ್ರೇಕ್ಷಕರು ಹೆಚ್ಚಾಗಿ ಕಾಣಿಸಿಕೊಳ್ಳಲಿದ್ದಾರೆ. ಒಟ್ಟಿನಲ್ಲಿ ಇಂದು ಮುಂಬೈಗೆ ಎರಡು ಟೀಂ​​​​ಗಳ ಅಭಿಮಾನಿಗಳ ಬೆಂಬಲ ಸಿಗಲಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ