IPL 2022 ಅವೇಶ್ ಖಾನ್ ದಾಳಿಗೆ ಹೈದರಾಬಾದ್ ತತ್ತರ, ಲಖನೌಗೆ 12 ರನ್ ಗೆಲುವು

By Suvarna NewsFirst Published Apr 4, 2022, 11:23 PM IST
Highlights
  • ರಾಹುಲ್ ತ್ರಿಪಾಠಿ, ಪೂರನ್ ಹೋರಾಟ ವ್ಯರ್ಥ
  • ಹೈದರಾಬಾದ್ ಮಣಿಸಿದ ಲಖನೌ ಸೂಪರ್‌ಜೈಂಟ್ಸ್
  • 12 ರನ್ ರೋಚಕ ಗೆಲುವು ದಾಖಲಿಸಿದ ಲಖನೌ

ಮುಂಬೈ(ಏ.04): ತೀವ್ರ ಕುತೂಹಲ, ಒಂದು ಬಾರಿ ಲಖನೌ ಮೇಲುಗೈ, ಮತ್ತೊಮ್ಮೆ ಸನ್‌ರೈಸರ್ಸ್ ಹೈದರಾಬಾದ್. ಹೀಗೆ ಪಂದ್ಯದ ಪ್ರತಿ ಓವರ್ ಕೂಡ ಗೆಲುವು ಯಾರಿಗೆ ಅನ್ನೋ ಕುತೂಹಲ ಮೂಡಿಸುತ್ತಲೇ ಸಾಗಿದ ಪಂದ್ಯದಲ್ಲಿ ಕೊನೆಗೂ ಲಖನೌ ಸೂಪರ್‌ಜೈಂಟ್ಸ್ ಗೆದ್ದು ಬೀಗಿದೆ. ಅಂತಿಮ 6 ಎಸೆತದಲ್ಲಿ ಸನ್‌ರೈಸರ್ಸ್ ಗೆಲುವಿಗೆ 16 ರನ್‌ಗಳ ಅವಶ್ಯಕತೆ ಇತ್ತು. ಈ ವೇಳೆ ವಾಶಿಂಗ್ಟನ್ ಸುಂದರ್ ವಿಕೆಟ್ ಪತನ ಹೈದರಾಬಾದ್ ತಂಡಕ್ಕೆ ತೀವ್ರ ಹಿನ್ನಡೆ ನೀಡಿತು. ಪರಿಣಾಮ ಲಖನೌ 1 2 ರನ್ ಗೆಲುವು ದಾಖಲಿಸಿದೆ.

ಗೆಲುವಿಗೆ 170 ರನ್ ಟಾರ್ಗೆಟ್ ಪಡೆದ ಸನ್‌ರೈಸರ್ಸ್ ಹೈದರಾಬಾದ್ ತಂಡ ಎಚ್ಚರಿಕೆಯಿಂದ ಬ್ಯಾಟಿಂಗ್ ಆರಂಭಿಸಿತು. ಆದರೆ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಅಭಿಷೇಕ್ ಶರ್ಮಾ ಜೊತೆಯಾಟ ಹೆಚ್ಚು ಹೊತ್ತು ಇರಲಿಲ್ಲ. 25 ರನ್‌ಗಳಿಸುವಷ್ಟರಲ್ಲೇ ಹೈದರಾಬಾದ್ ಮೊದಲ ವಿಕೆಟ್ ಕಳೆದುಕೊಂಡಿತು. ವಿಲಿಯಮ್ಸನ್ 16 ರನ್ ಸಿಡಿಸಿ ಔಟಾದರು. ಇನ್ನು ಅಭಿಷೇಕ್ ಶರ್ಮಾ 13 ರನ್ ಸಿಡಿಸಿ ನಿರ್ಗಮಿಸಿದರು. 

IPL 2022 ಕೆಎಲ್ ರಾಹುಲ್ ಆಯ್ತು, ಮಯಾಂಕ್ ಟೀಮ್ ಮೇಲೂ ಸೋತ ಚೆನ್ನೈ ಸೂಪರ್ ಕಿಂಗ್ಸ್!

ಆರಂಭಿಕರ ವಿಕೆಟ್ ಪತನ ರಾಹುಲ್ ತ್ರಿಪಾಠಿ ಹಾಗೂ ಆ್ಯಡಿನ್ ಮಕ್ರಮ್ ಮೇಲಿ ಹೆಚ್ಚಿನ ಒತ್ತಡ ನೀಡಿತು. ತ್ರಿಪಾಠಿ ದಿಟ್ಟ ಹೋರಾಟ ನೀಡಿದರೆ. ಆದರೆ ಮಕ್ರಮ್ 12 ರನ್ ಸಿಡಿಸಿ ಔಟಾದರು. ಇತ್ತ ರಾಹುಲ್ ತ್ರಿಪಾಠಿ 30 ಎಸೆತದಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 44 ರನ್ ಸಿಡಿಸಿ ಔಟಾದರು. 

ನಿಕೋಲಸ್ ಪೂರನ್ ಹಾಗೂ ವಾಶಿಂಗ್ಟನ್ ಸುಂದರ್ ಜೊತೆಯಾಟದಿಂದ ಹೈದರಾಬಾದ್ ತಂಡದ ಗೆಲುವಿನ ಆಸೆ ಮತ್ತೆ ಚಿಗುರೊಡೆಯಿತು. ನಿಕೋಲಸ್ ಪೂರನ್ 34 ರನ್ ಕಾಣಿಕೆ ನೀಡಿದರು. ಅಬ್ದುಲ್ ಸಮಾದ್ ಡಕೌಟ್‌ಗೆ ಬಲಿಯಾದರು. ಇತ್ತ ವಾಶಿಂಗ್ಟನ್ ಸುಂದರ್ ಹೋರಾಟ ಮುಂದುವರಿಸಿದರು.

IPL 2022 'ನನ್ನ ಅಪ್ಪ-ಅಪ್ಪನಿಗಾಗಿ ಮನೆ ಖರೀದಿಸೋದು ನನ್ನ ಏಕೈಕ ಗುರಿ' ಎಂದ ಸೆನ್ಸೇಷನ್ ತಿಲಕ್ ವರ್ಮ!

ಸನ್‌ರೈಸರ್ಸ್ ಹೈದರಬಾದ್ ಗೆಲುವಿಗೆ ಅಂತಿಮ 12 ಎಸೆತ 26 ರನ್ ಅವಶ್ಯಕತೆ ಇತ್ತು. 18  ರನ್ ಸಿಡಿಸಿ ವಾಶಿಂಗ್ಟನ್ ಸುಂದರ್ ವಿಕೆಟ್ ಕೈಚೆಲ್ಲಿದರು. ಬಳಿಕ ರೋಮಾರಿ ಶೆಫರ್ಡ್ ಹಾಗೂ ಭುವನೇಶ್ವರ್ ಕುಮಾರ್ ತಂಡವನ್ನ ದಡ ಸೇರಿಸಲು ಪ್ರಯತ್ನಿಸಿದರೂ ಕೈಗೂಡಲಿಲ್ಲ. ಹೈದರಾಬಾದ್ ವಿಕೆಟ್ 9 ನಷ್ಟಕ್ಕೆ 157 ರನ್ ಸಿಡಿಸಿ ಸೋಲೋಪ್ಪಿಕೊಂಡಿತು. ಲಖನೌ 12 ರನ್ ಗೆಲುವು ಕಂಡಿತು.  

ಲಖನೌ ಸೂಪರ್‌ಜೈಂಟ್ಸ್ ಇನ್ನಿಂಗ್ಸ್
ಲಖನೌ ತಂಡಕ್ಕೆ ನಾಯಕ ಕೆಎಲ್ ರಾಹುಲ್ ಹಾಗೂ ದೀಪಕ್ ಹೂಡ ಬ್ಯಾಟಿಂಗ್ ಪ್ರದರ್ಶನ ನೆರವಾಗಿತ್ತು. ಇವರಿಬ್ಬರನ್ನು ಹೊರತು ಪಡಿಸಿದರೆ ಇತರ ಬ್ಯಾಟ್ಸ್‌ಮನ್‌ಗಳಿಂದ ರನ್ ಹರಿದು ಬರಲಿಲ್ಲ. ಕೆಎಲ್ ರಾಹುಲ್ ದಿಟ್ಟ ಹೋರಾಟ ನೀಡಿ ಹಾಫ್ ಸೆಂಚುರಿ ಸಿಡಿಸಿದರು. ರಾಹುಲ್ 50 ಎಸೆದಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 68 ರನ್ ಸಿಡಿಸಿದರು.

ಇತ್ತ ದೀಪಕ್ ಹೂಡ ಉತ್ತಮ ಪ್ರದರ್ಶನ ನೀಡಿದರು. ಹೂಡ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. 33 ಎಸೆತದಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್ ಮೂಲಕ ಹೂಡ 51 ರನ್ ಸಿಡಿಸಿ ಔಟಾದರು. ಇವರಿಬ್ಬರ ಹೋರಾಟದಿಂದ ಲಖನೌ ತಂಡ ಉತ್ತಮ ಮೊತ್ತ ಪೇರಿಸಿತು. ಆದರೆ ಕ್ವಿಂಟನ್ ಡಿಕಾಕ್ ಕೇವಲ 1 ರನ್ ಸಿಡಿಸಿದರೆ, ಇವಿನ್ ಲಿವಿಸ್ 1 ರನ್ ಸಿಡಿಸಿ ನಿರ್ಗಮಿಸಿದರು. ಕನ್ನಡಿಗ ಮನೀಶಾ ಪಾಂಡೆ 12 ರನ್‌ಗೆ ಸುಸ್ತಾದರು. 

ಅಂತಿಮ ಹಂತದಲ್ಲಿ ಆಯುಷ್ ಬದೋನಿ 12 ಎಸೆತದಲ್ಲಿ 19 ರನ್ ಸಿಡಿಸಿದರು. ಜೇಸನ್ ಹೋಲ್ಡರ್ 8 ಹಾಗೂ ಕ್ರುನಾಲ್ ಪಾಂಡ್ಯ 6 ರನ್ ಸಿಡಿಸಿದರು. ಇದರೊಂದಿಗೆ ಲಖನೌ ತಂಡ 7 ವಿಕೆಟ್ ನಷ್ಟಕ್ಕೆ 169 ರನ್ ಸಿಡಿಸಿತು. 
 

 

click me!