
ಹೈದರಾಬಾದ್(ಏ.04): ಡೇವಿಡ್ ವಾರ್ನರ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ಕಳೆದ ವರ್ಷ ಪ್ಲೇ-ಆಫ್‌ಗೇರಿದ್ದರೂ, 2ನೇ ಕ್ವಾಲಿಫೈಯರ್‌ನಲ್ಲಿ ಸೋತು 2ನೇ ಬಾರಿಗೆ ಚಾಂಪಿಯನ್ ಆಗುವ ಅವಕಾಶ ಕೈಚೆಲ್ಲಿತ್ತು.
ಈ ವರ್ಷ ತಮ್ಮ ಸಮಸ್ಯೆಗಳಿಗೆ ಪರಿಹಾರ ಹುಡುಕಿಕೊಂಡು ಪ್ರಶಸ್ತಿ ಎತ್ತಿಹಿಡಿಯಲು ಕಾತರಿಸುತ್ತಿದೆ. ತಂಡದಲ್ಲಿ ಬ್ಯಾಟಿಂಗ್ ತಾರೆಯರ ದಂಡೇ ಇದ್ದು, ಆಯ್ಕೆ ಗೊಂದಲ ಎದುರಾಗಲಿದೆ. ಯಾವೆಲ್ಲಾ ಬ್ಯಾಟ್ಸ್‌ಮನ್‌ಗಳಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಬೇಕು ಎನ್ನುವ ಗೊಂದಲ ಸನ್‌ರೈಸರ್ಸ್‌ಗೆ ಶುರುವಾಗಿದೆ. ಇನ್ನು ಬೌಲರ್‌ಗಳೇ ತಂಡದ ಟ್ರಂಪ್‌ಕಾರ್ಡ್‌ಗಳು ಎನ್ನುವುದರಲ್ಲಿ ಅನುಮಾನವಿಲ್ಲ.
ಪ್ರಾಬಲ್ಯ: ಸನ್‌ರೈಸರ್ಸ್ ಬ್ಯಾಟಿಂಗ್ ಪಡೆ ಅತ್ಯಂತ ಬಲಿಷ್ಠವಾಗಿದೆ. ಪ್ರಮುಖವಾಗಿ ವಿದೇಶಿ ಬ್ಯಾಟ್ಸ್‌ಮನ್‌ಗಳು. ವಾರ್ನರ್, ಜಾನಿ ಬೇರ್‌ಸ್ಟೋವ್, ಜೇಸನ್ ರಾಯ್, ಕೇನ್ ವಿಲಿಯಮ್ಸ್ ಇದ್ದಾರೆ. ಇದರೊಂದಿಗೆ ಆಲ್ರೌಂಡರ್ ಜೇಸನ್ ಹೋಲ್ಡರ್, ಸ್ಪಿನ್ನರ್ ರಶೀದ್ ಖಾನ್, ಹೀಗೆ ಘಟಾನುಘಟಿಗಳಿದ್ದಾರೆ. ಭುವನೇಶ್ವರ್ ಕುಮಾರ್, ಸಂದೀಪ್ ಶರ್ಮಾ, ಟಿ.ನಟರಾಜನ್, ಸಿದ್ಧಾರ್ಥ್ ಕೌಲ್ ಹೀಗೆ ಟಿ20 ತಜ್ಞ ಬೌಲರ್‌ಗಳ ಬಲ ಸನ್‌ರೈಸರ್ಸ್ ತಂಡಕ್ಕಿದೆ.
IPL 2021: ಸಿಎಸ್‌ಕೆ ಲಕ್ ಬದಲಿಸ್ತಾರಾ ಸುರೇಶ್ ರೈನಾ?
ದೌರ್ಬಲ್ಯ: ಸನ್‌ರೈಸರ್ಸ್‌ನಲ್ಲಿರುವ ಪ್ರಮುಖ ಸಮಸ್ಯೆಯೆಂದರೆ ತಂಡದ ಆಯ್ಕೆಯಲ್ಲಿ ಎದುರಾಗುವ ಗೊಂದಲ. ನಾಲ್ವರು ವಿದೇಶಿಗರನ್ನು ಆಯ್ಕೆ ಮಾಡುವುದು ದೊಡ್ಡ ಸವಾಲಾಗಿ ಪರಿಣಮಿಸಲಿದೆ. ಜೊತೆಗೆ ಫಿನಿಶರ್‌ಗಳ ಕೊರತೆ ಸಹ ತಂಡಕ್ಕಿದೆ. ಕೇದಾರ್ ಜಾಧವ್‌ರನ್ನು ತಂಡ ಈ ಬಾರಿ ಸೇರಿಸಿಕೊಂಡಿದೆ. ಜಾಧವ್ ಇತ್ತೀಚೆಗೆ ಸ್ಪರ್ಧಾತ್ಮಕ ಕ್ರಿಕೆಟ್ ಆಡಿಲ್ಲ. ಹೀಗಾಗಿ ಸನ್‌ರೈಸರ್ಸ್ ಫಿನಿಶರ್‌ಗಳ ಕೊರತೆ ಎದುರಾಗಬಹುದು.
ಬಲಿಷ್ಠ ಪ್ಲೇಯಿಂಗ್ ಇಲೆವೆನ್
ವಾರ್ನರ್, ಬೇರ್‌ಸ್ಟೋವ್, ಪಾಂಡೆ, ವಿಲಿಯಮ್ಸನ್, ಜಾಧವ್, ಅಭಿಷೇಕ್/ಸಮದ್/ನದೀಂ, ವಿಜಯ್ ಶಂಕರ್, ರಶೀದ್, ಭುವನೇಶ್ವರ್, ನಟರಾಜನ್, ಸಂದೀಪ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.