IPL 2021; ಹೈದ್ರಾಬಾದ್‌ ವಿರುದ್ಧ RCBಗೆ ವಿರೋಚಿತ ಸೋಲು,  ಪಾಯಿಂಟ್ ಪಟ್ಟಿ ಯಥಾಸ್ಥಿತಿ!

By Suvarna NewsFirst Published Oct 6, 2021, 11:44 PM IST
Highlights

* ಸನ್ ರೈಸರ್ಸ್ ವಿರುದ್ಧ ಆರ್‌ ಸಿಬಿ ಗೆ ಸೋಲು
*ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗುವ ಅವಕಾಶ ಇತ್ತು
* ಹೈದರಾಬಾದ್ ನಿಂದ ಮಿಂಚಿನ ಬೌಲಿಂಗ್ ದಾಳಿ
* ಆರ್‌ ಸಿಬಿಗೆ ನಾಲ್ಕು ರನ್ ಸೋಲು 

ಅಬುಧಾಬಿ(ಅ.06): ಈಗಾಗಲೇ ಪಂದ್ಯಾವಳಿಯಿಂದ ಹೊರಬಿದ್ದಿದ್ದ ಸನ್​ರೈಸರ್ಸ್​ ಹೈದರಾಬಾದ್  ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ಮುಗ್ಗರಿಸಿದೆ. ಪಾಯಿಂಟ್ ಟೇಬಲ್ ನಲ್ಲಿ ಟಾಫ್ ಟು ಸ್ಥಾನಕ್ಕೆ ತೆರಳುವ ಅವಕಾಶ ಕಳೆದುಕೊಂಡಿದೆ.

ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2021) 52ನೇ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ತಂಡ,  ಆರ್‌ಸಿಬಿಗೆ 142 ರನ್‌ಗಳ ಗೆಲುವಿನ ಗುರಿ ನೀಡಿತ್ತು. ಇದನ್ನು ಬೆನ್ನು ಹತ್ತಿದ ತಂಡಕ್ಕೆ ಆರಂಭದಲ್ಲೇ ಆಘಾತ ಕಾದಿತ್ತು. ವಿರಾಟ್ ಕೊಹ್ಲಿ ಮೊದಲ ಈವರ್ ನಲ್ಲೇ ಔಟ್ ಆದರು.

ಆದರೆ ಮಾಕ್ಸ್ ವೆಲ್ ಮತ್ತು ಪಡಿಕ್ಕಲ್ ಇನಿಂಗ್ಸ್ ಕಟ್ಟಿದರು. ಮ್ಯಾಕ್ಸ್ ವೆಲ್ ಅಬ್ಬರಿಸಿದರೆ ಪಡಿಕ್ಕಲ್ ಸಾವಧಾನವಾಗಿ ಆಡಿದರು. ಕೊನೆ ಹಂತದಲ್ಲಿ ಜತೆಯಾದ ಡೆವಿಲಿಯರ್ಸ್ ಗೆ ಹೆಚ್ಚಿನ ಸ್ಟ್ರೈಕ್ ಸಿಗಲಿಲ್ಲ. ಇದೆಲ್ಲದರ ಪರಿಣಾಮ ಸನ್ ರೈಸರ್ಸ್ ಗೆ ನಾಲ್ಕು ರನ್ ಗಳ ವಿಜಯ ಸಿಕ್ಕಿತು.

ಐಪಿಎಲ್‌ಗೆ ಹೊಸ ತಂಡಗಳು..ಲೆಕ್ಕಾಚಾರ ಏನು?

ಅಬುಧಾಬಿಯ ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ  ಟಾಸ್ ಸೋತು ಮೊದಲ ಬ್ಯಾಟಿಂಗ್ ಮಾಡಿದ  ಸನ್​ರೈಸರ್ಸ್​ ಹೈದರಾಬಾದ್ (SRH) 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 141ರನ್ ಕಲೆಹಾಕಿತ್ತು. ಸಾಧಾರಣ ಗುರಿ ಎಂದು ಭಾವಿಸಿದ್ದರೂ ಪಿಚ್ ವ್ಯತಿರಿಕ್ತವಾಗಿ ವರ್ತಿಸಿತು.

25 ಚೆಂಡುಗಳಲ್ಲಿ 40 ರನ್ ಗಳಿಸಿ ಮ್ಯಾಕ್ಸ್ ವೆಲ್ ಅಬ್ಬರಿಸಿದರು.  ಕೊನೆಯ ಓವರ್ ನಲ್ಲಿ ಆರ್ ಸಿಬಿಗೆ ಗೆಲ್ಲಲು ಹದಿಮೂರು ರನ್ ಬೇಕಿತ್ತು. ಭುವನೇಶ್ವರ ಕುಮಾರ್ ಬೌಲಿಂಗ್ ದಾಳಿ ನಡೆಸಿದರು. ಎಬಿಡಿ ಒಂದು ಸಿಕ್ಸರ್ ಬಾರಿಸಿದರೂ ಗೆಲುವಿಗೆ ಅದು ಸಾಕಾಗಲಿಲ್ಲ. 

ಸನ್ ರೈಸರ್ಸ್ ಪರ ಎಲ್ಲರೂ ಒಂದೊಂದು ವಿಕೆಟ್ ಪಡೆದುಕೊಂಡರು. ಭುವನೇಶ್ವರ ಕುಮಾರ್,  ರಶೀದ್ ಖಾನ್, ಸಿದ್ಧಾರ್ಥ್ ಕೌಲ್, ಉಮ್ರಾನ್ ಮಲ್ಲಿಕ್ ಮತ್ತು ಹೋಲ್ಡರ್ ಒಂದೊಂದು ವಿಕೆಟ್ ಪಡೆದುಕೊಂಡರು. 

SRH ಪರ ಜೇಸನ್ ರಾಯ್ 44, ವೃದ್ಧಿಮಾನ್ ಸಹಾ 13, ಕೇನ್ ವಿಲಿಯಮ್ಸನ್ 31, ಪ್ರಿಯಂ ಗರ್ಗ್ 15, ಅಬ್ದುಲ್ ಸಮದ್ 1, ಅಭಿಷೇಕ್ ಶರ್ಮಾ 13, ಜೇಸನ್ ಹೋಲ್ಡರ್ 16, ರಶೀದ್ ಖಾನ್ 7 ರನ್‌ ಗಳಿಸಿದರು.

ಇನ್ನು ಆರ್‌ಸಿಬಿ ಬೌಲರ್ಸ್ ಹರ್ಷಲ್ ಪಟೇಲ್ 3, ಡೇನಿಯಲ್ ಕ್ರಿಶ್ಚಿಯನ್ 2, ಚಹಲ್ ಹಾಗೂ  ಜಾರ್ಜ್ ಗಾರ್ಟನ್ ತಲಾ 1 ವಿಕೆಟ್ ಕಬಳಿಸಿ ಸನ್‌ರೈಸರ್ಸ್ ರನ್ ವೇಗಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು.

 

 

A flurry of emotions in both the camps as clinch a thriller against .

Scorecard - https://t.co/EqmOIV0UoV pic.twitter.com/6EicLI02T0

— IndianPremierLeague (@IPL)
click me!