
ಅಬುಧಾಬಿ(ಅ.06): ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2021) 52ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ, ಆರ್‌ಸಿಬಿಗೆ 142 ರನ್‌ಗಳ ಗೆಲುವಿನ ಗುರಿ ನೀಡಿದೆ.
ಅಬುಧಾಬಿಯ ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ಟಾಸ್ ಸೋತು ಮೊದಲ ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ (SRH) 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 141ರನ್ ಕಲೆಹಾಕಿದೆ. ಈ ಮೂಲಕ ಆರ್‌ಸಿಬಿಗೆ 142 ರನ್‌ಗಳ ಸಾಧಾರಣ ಗುರಿ ನೀಡಿದೆ.
IPL 2021 ಸನ್‌ರೈಸರ್ಸ್ ಹೈದರಾಬಾದ್ ಎದುರು ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಆಯ್ಕೆ
SRH ಪರ ಜೇಸನ್ ರಾಯ್ 44, ವೃದ್ಧಿಮಾನ್ ಸಹಾ 13, ಕೇನ್ ವಿಲಿಯಮ್ಸನ್ 31, ಪ್ರಿಯಂ ಗರ್ಗ್ 15, ಅಬ್ದುಲ್ ಸಮದ್ 1, ಅಭಿಷೇಕ್ ಶರ್ಮಾ 13, ಜೇಸನ್ ಹೋಲ್ಡರ್ 16, ರಶೀದ್ ಖಾನ್ 7 ರನ್ ಗಳಿಸಿದರು.
ಇನ್ನು ಆರ್‌ಸಿಬಿ ಬೌಲರ್ಸ್ ಹರ್ಷಲ್ ಪಟೇಲ್ 3, ಡೇನಿಯಲ್ ಕ್ರಿಶ್ಚಿಯನ್ 2, ಚಹಲ್ ಹಾಗೂ ಜಾರ್ಜ್ ಗಾರ್ಟನ್ ತಲಾ 1 ವಿಕೆಟ್ ಕಬಳಿಸಿ ಸನ್‌ರೈಸರ್ಸ್ ರನ್ ವೇಗಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.