
ದುಬೈ(ಅ.08): 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ಹಾಗೂ ಡೆಲ್ಲಿ ಕ್ಯಾಪಿಟಲ್ಸ್(Delhi Capitals) ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ದುಕೊಂಡಿದ್ದರು. ಡೆಲ್ಲಿ ಹುಡುಗರು ಆರ್ ಸಿಬಿಗೆ 165 ರನ್ ಟಾರ್ಗೆಟ್ ನೀಡಿದ್ದಾರೆ.
ಈ ಹೈವೋಲ್ಟೇಜ್ ಪಂದ್ಯಕ್ಕೆ ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ಆತಿಥ್ಯ ವಹಿಸಿದೆ. ಮತ್ತೊಮ್ಮೆ ದೆಹಲಿಗೆ ಅದ್ಭುತ ಆರಂಭ ಸಿಕ್ಕಿತು. ಶಿಖರ್ ಧವನ್ ಮತ್ತು ಪೃಥ್ವಿ ಶಾ 88 ರನ್ ಗಳ ಜತೆಯಾಟ ನೀಡಿದರು. ಎಂದಿನಂತೆ ಹತ್ತು ಓವರ್ ಗಳ ನಂತರ ಲಯಕ್ಕೆ ಮರಳಿದ ಆರ್‌ಸಿಬಿ ಬೌಲರ್ ಗಳು ವಿಕೆಟ್ ಉರುಳಿಸಿದರು. ಶಾ 48 ರನ್ ಗಳಿಸಿದರೆ ಧವನ್ 43 ರನ್ ಗಳಿಸಿದರು. ಈ ವೇಳೆ ಡೆಲ್ಲಿಯ ಒಂದಷ್ಟು ವಿಕೆಟ್ ಗಳು ಉರುಳಿದವು.
ಅತಿವೇಗದ ಅರ್ಧಶತಕ ದಾಖಲಿಸಿದ ಕಿಶನ್
ಆದರೆ ಕೊನೆ ಹಂತದಲ್ಲಿ ಜತೆಯಾದ ಹೆಟ್ಮಾಯರ್ ಮತ್ತು ಶ್ರೇಯಸ್ ಅಯ್ಯರ್ ಇನಿಂಗ್ಸ್ ಕಟ್ಟಿ ತಂಡದ ಮೊತ್ತ ಹೆಚ್ಚಿಸುವ ಕೆಲಸ ಮಾಡಿದರು. ಹರ್ಷಲ್ ಪಟೇಲ್ ಮತ್ತು ಸಿರಾಜ್ ಕೊನೆ ಹಂತದಲ್ಲಿ ಬಿಗಿಯಾದ ಬೌಲಿಂಗ್ ದಾಳಿ ಸಂಘಟಿಸಿ ಹೆಚ್ಚಿನ ರನ್ ಬಿಟ್ಟುಕೊಡಲಿಲ್ಲ.
ಎರಡು ತಂಡಗಳು ಈಗಾಗಲೇ ಉಪಾಂತ್ಯಕ್ಕೆ ಪ್ರವೇಶ ಮಾಡಿದ್ದು ಯಾರಿಗೂ ಹೆಚ್ಚಿನ ಒತ್ತಡ ಇಲ್ಲ. ಆರ್ ಸಿಬಿ ಸಹ ಅತ್ಯುತ್ತಮ ಬ್ಯಾಟಿಂಗ್ ಲೈನ್ ಅಪ್ ಹೊಂದಿದ್ದು ಈ ಮೊತ್ತವನ್ನು ಹೇಗೆ ಚೇಸ್ ಮಾಡಲಿದೆ ಎನ್ನುವುದನ್ನು ನೋಡಬೇಕಿದೆ. ದೆಹಲಿ ಸಹ ಒಳ್ಳೆಯ ಬೌಲಿಂಗ್ ಶಕ್ತಿ ಹೊಂದಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.