IPL 2021: ಕೊಹ್ಲಿ-ಸಿರಾಜ್‌ಗೆ ವಿಶೇಷ ವಿಮಾನ ವ್ಯವಸ್ಥೆ ಮಾಡಿದ RCB

By Suvarna NewsFirst Published Sep 11, 2021, 6:10 PM IST
Highlights

* ಯುಎಇ ಚರಣದ ಐಪಿಎಲ್‌ಗೆ ಸಜ್ಜಾಗುತ್ತಿದೆ ಆರ್‌ಸಿಬಿ

* ಇಂಗ್ಲೆಂಡ್‌ನಲ್ಲಿರುವ ಆರ್‌ಸಿಬಿ ನಾಯಕ ಕೊಹ್ಲಿ, ಸಿರಾಜ್

* ಆರ್‌ಸಿಬಿಯ ಈ ಇಬ್ಬರು ಆಟಗಾರರಿಗೆ ವಿಶೇಷ ವಿಮಾನದ ವ್ಯವಸ್ಥೆ ಮಾಡಲಿರುವ ಫ್ರಾಂಚೈಸಿ

ಮ್ಯಾಂಚೆಸ್ಟರ್(ಸೆ.11): ಟೆಸ್ಟ್ ಸರಣಿಯನ್ನಾಡಲು ಇಂಗ್ಲೆಂಡ್‌ಗೆ ತೆರೆಳಿರುವ ನಾಯಕ ವಿರಾಟ್ ಕೊಹ್ಲಿ ಹಾಗೂ ವೇಗದ ಬೌಲರ್ ಮೊಹಮ್ಮದ್ ಸಿರಾಜ್‌ ಅವರನ್ನು ವಿಶೇಷ ವಿಮಾನದ ಮೂಲಕ 14ನೇ ಆವೃತ್ತಿಯ ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಯುಎಇಗೆ ಕರೆ ತರಲಾಗುವುದು ಎಂದು ಬೆಂಗಳೂರು ಮೂಲದ ಫ್ರಾಂಚೈಸಿ ಇಂದು ಘೋಷಿಸಿದೆ.

ಆಟಗಾರರ ಸುರಕ್ಷತೆ ಹಾಗೂ ಆರೋಗ್ಯ ಭದ್ರತೆ ನಮ್ಮ ಮೊದಲ ಆದ್ಯತೆ. ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿಯು ನಾಯಕ ವಿರಾಟ್ ಕೊಹ್ಲಿ ಹಾಗೂ ಮೊಹಮ್ಮದ್ ಸಿರಾಜ್‌ಗೆ ವಿಶೇಷ ವಿಮಾನದ ವ್ಯವಸ್ಥೆ ಮಾಡಲಾಗಿದೆ ಎಂದು ಆರ್‌ಸಿಬಿ ಫ್ರಾಂಚೈಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಸಿರಾಜ್ ಇಂಗ್ಲೆಂಡ್‌ನಿಂದ ಭಾನುವಾರ ಮುಂಜಾನೆ 4 ಗಂಟೆಗೆ ಯುಎಇನತ್ತ ವಿಮಾನವನ್ನು ಏರಲಿದ್ದಾರೆ.

IPL 2021: ಅಬುಧಾಬಿಗೆ ಬಂದಿಳಿದ ರೋಹಿತ್, ಸೂರ್ಯಕುಮಾರ್, ಬುಮ್ರಾ

ಇಂಗ್ಲೆಂಡ್‌ನಿಂದ ದುಬೈಗೆ ಬಂದಿಳಿಯುತ್ತಿದ್ದಂತೆಯೇ ಈ ಇಬ್ಬರು ಆಟಗಾರರು 6 ದಿನಗಳ ಕಡ್ಡಾಯ ಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ. ಕ್ವಾರಂಟೈನ್‌ ಅವಧಿ ಮುಗಿಸಿದ ಬಳಿಕ ಈ ಇಬ್ಬರು ಆಟಗಾರರು ಬಯೋ ಬಬಲ್‌ನೊಳಗೆ ಸೇರ್ಪಡೆಗೊಳ್ಳಲಿದ್ದಾರೆ. 

ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಸದ್ಯ 7 ಪಂದ್ಯಗಳನ್ನಾಡಿ 5 ಗೆಲುವು ಹಾಗೂ 2 ಸೋಲಿನೊಂದಿಗೆ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. 14ನೇ ಆವೃತ್ತಿಯ ಐಪಿಎಲ್‌ನಲ್ಲಿ ಕಪ್‌ ಗೆಲ್ಲಬಲ್ಲ ನೆಚ್ಚಿನ ತಂಡಗಳಲ್ಲಿ ಆರ್‌ಸಿಬಿ ಕೂಡಾ ಒಂದು ಎನಿಸಿದೆ.  
 

click me!