ಐಪಿಎಲ್‌ನಲ್ಲಿ ಮಿಂಚಿದ್ರೆ ಪಡಿಕ್ಕಲ್‌ ಟೀಂ ಇಂಡಿಯಾಗೆ ಪಾದಾರ್ಪಣೆ?

Kannadaprabha News   | Asianet News
Published : Apr 02, 2021, 08:37 AM IST
ಐಪಿಎಲ್‌ನಲ್ಲಿ ಮಿಂಚಿದ್ರೆ ಪಡಿಕ್ಕಲ್‌ ಟೀಂ ಇಂಡಿಯಾಗೆ ಪಾದಾರ್ಪಣೆ?

ಸಾರಾಂಶ

ಕಳೆದೆರಡು ವರ್ಷಗಳಿಂದ ದೇಶಿ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ತೋರುತ್ತಾ ಬಂದಿರುವ ದೇವದತ್‌ ಪಡಿಕ್ಕಲ್‌ 14ನೇ ಆವೃತ್ತಿಯ ಐಪಿಎಲ್‌ನಲ್ಲೂ ಅದೇ ಲಯ ಮುಂದುವರೆಸಿಕೊಂಡು ಹೋದರೆ ಟೀಂ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸುವ ಹಾದಿ ಸಲೀಸಾಗಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಬೆಂಗಳೂರು(ಏ.02): 2021ರ ಐಪಿಎಲ್‌ನಲ್ಲಿ ಹಲವು ಯುವ ಆಟಗಾರರ ಮೇಲೆ ನಿರೀಕ್ಷೆಗಳಿದ್ದರೂ, ಅತಿಹೆಚ್ಚು ನಿರೀಕ್ಷೆ ಮೂಡಿಸಿರುವುದು ಆರ್‌ಸಿಬಿ ತಂಡದ ಆರಂಭಿಕ, ಕರ್ನಾಟಕದ ಯುವ ಬ್ಯಾಟ್ಸ್‌ಮನ್‌ ದೇವದತ್‌ ಪಡಿಕ್ಕಲ್‌. ಕಳೆದ 2 ಋುತುಗಳಲ್ಲಿ, ದೇಸಿ ಟೂರ್ನಿಗಳಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ಪಡಿಕ್ಕಲ್‌, ಟೀಂ ಇಂಡಿಯಾದ ಕದ ತಟ್ಟುತ್ತಿದ್ದಾರೆ.

ಇತ್ತೀಚೆಗೆ ನಡೆದ ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಗೆ ಅವರು ಭಾರತ ತಂಡಕ್ಕೆ ಆಯ್ಕೆಯಾಗಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಬಿಸಿಸಿಐ ಆಯ್ಕೆ ಸಮಿತಿ ಅವಕಾಶ ನೀಡಲಿಲ್ಲ. 14ನೇ ಆವೃತ್ತಿಯ ಐಪಿಎಲ್‌ನಲ್ಲಿ ಪಡಿಕ್ಕಲ್‌ ತಮ್ಮ ಅಮೋಘ ಲಯ ಮುಂದುವರಿಸಿದರೆ ಭಾರತ ತಂಡದ ಬಾಗಿಲು ತೆರೆಯಬಹುದು.

ಈ ವರ್ಷ ಟಿ20 ವಿಶ್ವಕಪ್‌ ಭಾರತದಲ್ಲೇ ನಡೆಯಲಿರುವ ಕಾರಣ, ಪಡಿಕ್ಕಲ್‌ ಟೀಂ ಇಂಡಿಯಾಗೆ ಆಯ್ಕೆಯಾಗುವ ಸಾಧ್ಯತೆಗಳು ದಟ್ಟವಾಗಿವೆ. ರೋಹಿತ್‌ ಶರ್ಮಾ ಜೊತೆ ಇನ್ನಿಂಗ್ಸ್‌ ಆರಂಭಿಸುವ ಬಗ್ಗೆ ಚಿಂತನೆಗಳಿವೆ ಎಂದು ವಿರಾಟ್‌ ಕೊಹ್ಲಿ ಹೇಳಿದ್ದರೂ, ಪಡಿಕ್ಕಲ್‌ ತಂಡಕ್ಕೆ ಆಯ್ಕೆಯಾದರೆ ಆರಂಭಿಕನ ಸ್ಥಾನ ಅವರಿಗೇ ಸಿಗಲಿದೆ.

IPL 2021: ಅಖಾಡಕ್ಕೆ ಎಬಿಡಿ ಎಂಟ್ರಿ, ಬೇಟೆಗಾರರ ಬೇಟೆಯಾಡೋ ರಣಬೇಟೆಗಾರ ಬಂದ..!

ಭರ್ಜರಿ ಲಯ: 2019-20ರ ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿಯಿಂದ ಈ ವರೆಗೂ ಪಡಿಕ್ಕಲ್‌ ಲಯ ಉಳಿಸಿಕೊಂಡಿದ್ದಾರೆ. ಕಳೆದ ವರ್ಷ ಮುಷ್ತಾಕ್‌ ಅಲಿ ಟಿ20ಯಲ್ಲಿ 12 ಪಂದ್ಯಗಳಲ್ಲಿ 580 ರನ್‌ ಸಿಡಿಸಿದ್ದ ಕರ್ನಾಟಕ ಆಟಗಾರ, ಅದೇ ವರ್ಷ ವಿಜಯ್‌ ಹಜಾರೆ ಟೂರ್ನಿಯಲ್ಲಿ 609 ರನ್‌ ಕಲೆಹಾಕಿದ್ದರು. 2020ರ ಐಪಿಎಲ್‌ನಲ್ಲಿ 15 ಪಂದ್ಯಗಳನ್ನಾಡಿದ್ದ ಪಡಿಕ್ಕಲ್‌ 5 ಅರ್ಧಶತಕಗಳೊಂದಿಗೆ 473 ರನ್‌ ಸಿಡಿಸಿದ್ದರು. ಈ ವರ್ಷ ಮುಷ್ತಾಕ್‌ ಅಲಿ ಟೂರ್ನಿಯಲ್ಲಿ 6 ಪಂದ್ಯಗಳಲ್ಲಿ 218 ರನ್‌ ಗಳಿಸಿದ್ದ ದೇವದತ್‌, ವಿಜಯ್‌ ಹಜಾರೆ ಟೂರ್ನಿಯಲ್ಲಿ ಬರೋಬ್ಬರಿ 737 ರನ್‌ ಚಚ್ಚಿದ್ದರು.

ಕೊಹ್ಲಿಯಿಂದ ಮೆಚ್ಚುಗೆ: ಪಡಿಕ್ಕಲ್‌ ಆಟದ ಬಗ್ಗೆ ನಾಯಕ ವಿರಾಟ್‌ ಕೊಹ್ಲಿ ಹಲವು ಸನ್ನಿವೇಶಗಳಲ್ಲಿ ಮೆಚ್ಚುಗೆಯ ಮಾತುಗಳನ್ನಾಡಿದ್ದು, ಯುವ ಆಟಗಾರನನ್ನು ನಿರಂತರವಾಗಿ ಬೆಂಬಲಿಸುತ್ತಾ ಬಂದಿದ್ದಾರೆ. ಕಳೆದ ವರ್ಷ ಐಪಿಎಲ್‌ ವೇಳೆ ಬ್ಯಾಟಿಂಗ್‌ ಅಭ್ಯಾಸ ನಡೆಸಲು ಕೊಹ್ಲಿ, ಪಡಿಕ್ಕಲ್‌ರನ್ನೇ ತಮ್ಮ ಜೊತೆಗಾರರನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. ಕೊಹ್ಲಿ ಹಾಗೂ ಎಬಿ ಡಿ ವಿಲಿಯ​ರ್ಸ್ ಮಾರ್ಗದರ್ಶನ, ತಮ್ಮ ಆಟ ಸುಧಾರಿಸಲು ಸಹಕಾರಿಯಾಗಿದೆ ಎಂದು ಪಡಿಕ್ಕಲ್‌ ಸಹ ಸಂತಸ ವ್ಯಕ್ತಪಡಿಸಿದ್ದರು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸೈಲೆಂಟ್ ಆದ ಸೌತ್ ಆಫ್ರಿಕಾ , 74 ರನ್‌ಗೆ ಆಲೌಟ್ ಮಾಡಿ 101 ರನ್ ಗೆಲುವು ದಾಖಲಿಸಿದ ಭಾರತ
100 ಸಿಕ್ಸರ್ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ, ಸೌತ್ ಆಫ್ರಿಕಾಗೆ 176 ರನ್ ಟಾರ್ಗೆಟ್