ಯೋ-ಯೋ ಟೆಸ್ಟ್‌ನಲ್ಲಿ ದಾದಾ, ಲಕ್ಷಣ್‌ ಪಾಸಾಗ್ತಿರಲಿಲ್ಲ: ಸೆಹ್ವಾಗ್‌ ಅಚ್ಚರಿಯ ಹೇಳಿಕೆ

By Suvarna NewsFirst Published Apr 1, 2021, 1:34 PM IST
Highlights

ಟೀಂ ಇಂಡಿಯಾದಲ್ಲಿ ಸ್ಥಾನಗಿಟ್ಟಿಸಿಕೊಳ್ಳಲು ಯೋ ಯೋ ಟೆಸ್ಟ್‌ ಕಡ್ಡಾಯ ಮಾಡಿರುವ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್‌ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಏ.01): ಕಳೆದ ಕೆಲವು ವರ್ಷಗಳಿಂದ ಟೀಂ ಇಂಡಿಯಾ ಆಟಗಾರರು ಫಿಟ್ನೆಸ್‌ನತ್ತ ಗಮನ ಕೊಡುವಂತೆ ಮಾಡಲು ಬಿಸಿಸಿಐ ಯೋ ಯೋ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದನ್ನು ಕಡ್ಡಾಯ ಮಾಡಲಾಗಿದೆ. ಇದರ ಬೆನ್ನಲ್ಲೇ ಇದೀಗ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. 

‘ನಾವು ಕ್ರಿಕೆಟ್‌ ಆಡುತ್ತಿದ್ದ ಕಾಲದಲ್ಲಿ ಯೋ-ಯೋ ಫಿಟ್ನೆಸ್‌ ಟೆಸ್ಟ್‌ ಇದ್ದಿದ್ದರೆ, ಸಚಿನ್ ತೆಂಡುಲ್ಕರ್, ವಿವಿಎಸ್‌ ಲಕ್ಷ್ಮಣ್‌, ಸೌರವ್‌ ಗಂಗೂಲಿ ಯಾವತ್ತೂ ಪಾಸಾಗುತ್ತಿರಲಿಲ್ಲ’ ಎಂದು ಭಾರತ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್‌ ಹೇಳಿದ್ದಾರೆ. 

ಖಾಸಗಿ ವೆಬ್‌ಸೈಟ್‌ವೊಂದು ನಡೆಸಿದ್ದ ಸಂವಾದದ ವೇಳೆ ಭಾರತ ತಂಡಕ್ಕೆ ಆಯ್ಕೆಗೆ ಫಿಟ್ನೆಸ್‌ ಪರೀಕ್ಷೆಯಲ್ಲಿ ಪಾಸಾಗುವುದು ಬಹು ಮುಖ್ಯ ಮಾನದಂಡ ಆಗಿರುವ ಬಗ್ಗೆ ಮಾತನಾಡಿದ ಸೆಹ್ವಾಗ್‌, ‘ತಂಡದ ಆಯ್ಕೆ ವೇಳೆ ಫಿಟ್ನೆಸ್‌ ಒಂದೇ ಮಾನದಂಡವಾಗಬಾರದು. ಕೌಶಲ್ಯವನ್ನೂ ಪರಿಗಣಿಸಬೇಕು. ಫಿಟ್‌ ಇರುವ ತಂಡವನ್ನು ಆಡಿಸಿ ಆ ತಂಡಕ್ಕೆ ಕೌಶಲ್ಯವಿಲ್ಲದಿದ್ದರೆ ಪಂದ್ಯ ಸೋಲುವುದು ಖಚಿತ’ ಎಂದಿದ್ದಾರೆ.

IPL 2021: ವಿರಾಟ್ ಕೊಹ್ಲಿ ಆರಂಭಿಕನಾಗಿ ಆಡಿದ್ರೆ ಆರ್‌ಸಿಬಿಗೆ ಲಾಭ!

ಇತ್ತೀಚೆಗಷ್ಟೇ ಮುಕ್ತಾಯವಾದ ಇಂಗ್ಲೆಂಡ್‌ ವಿರುದ್ದ ಸೀಮಿತ ಓವರ್‌ಗಳ ಸರಣಿಗೂ ಮುನ್ನ ನಡೆದ ಯೋ ಯೋ ಟೆಸ್ಟ್‌ ಪಂದ್ಯದಲ್ಲಿ ವರುಣ್‌ ಚಕ್ರವರ್ತಿ, ರಾಹುಲ್ ತೆವಾಟಿಯಾ ಫೇಲ್‌ ಆಗಿದ್ದರಿಂದ ಟೀಂ ಇಂಡಿಯಾ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನಗಿಟ್ಟಿಸಿಕೊಳ್ಳಲು ವಿಫಲವಾಗಿದ್ದರು.
 

click me!