ಜಡೇಜಾ ದಾಳಿಗೆ ತತ್ತರಿಸಿದ ಕೊಹ್ಲಿ ಸೈನ್ಯ;ಗೆಲುವಿನ ಸರದಾರ RCBಗೆ ಮೊದಲ ಸೋಲು!

Published : Apr 25, 2021, 07:17 PM IST
ಜಡೇಜಾ ದಾಳಿಗೆ ತತ್ತರಿಸಿದ ಕೊಹ್ಲಿ ಸೈನ್ಯ;ಗೆಲುವಿನ ಸರದಾರ RCBಗೆ ಮೊದಲ ಸೋಲು!

ಸಾರಾಂಶ

ಸಿಕ್ಸರ್ ಸುರಿಮಳೆ ಸುರಿಸಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ರವೀಂದ್ರ ಜಡೇಜಾ ಬೌಲಿಂಗ್‌ಲ್ಲೂ ಮೋಡಿ ಮಾಡಿದ್ದಾರೆ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 14ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಮೊದಲ ಸೋಲು ಕಂಡಿದೆ.

ಮುಂಬೈ(ಏ.25): ಸೋಲಿಲ್ಲದ ಸರದಾರನಾಗಿ ಸತತ 4 ಗೆಲುವು ದಾಖಲಿಸಿ ಮುನ್ನುಗ್ಗುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮೊದಲ ಆಘಾತ ಎದುರಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ನೆಲಕಚ್ಚಿದೆ. ರವೀಂದ್ರ ಜಡೇಜಾ ಆಲ್ರೌಂಡರ್ ಆಟಕ್ಕೆ ಚೆನ್ನೈ ಸೂಪರ್ ಕಿಂಗ್ಸ್ 69 ರನ್ ಗೆಲುವು ಕಂಡಿದೆ.

14ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಮೊದಲ ಸೋಲು ಕಂಡಿದೆ. ಇಷ್ಟೇ ಅಲ್ಲ ಮೊದಲ ಸ್ಥಾನದಿಂದ 2ನೇ ಸ್ಥಾನಕ್ಕೆ ಕುಸಿದಿದೆ. ಇದೀಗ ಚೆನ್ನೈ ಅಗ್ರಸ್ಥಾನ ಅಲಂಕರಿಸಿದೆ. ಬ್ಯಾಟಿಂಗ್‌ನಲ್ಲಿ 28 ಎಸೆತದಲ್ಲಿ 62 ರನ್ ಸಿಡಿಸಿದ ರವೀಂದ್ರ ಜಡೇದಾ ಬೌಲಿಂಗ್‌ನಲ್ಲೂ ಮೋಡಿ ಮಾಡಿದರು.

ನಾಯಕ ವಿರಾಟ್ ಕೊಹ್ಲಿ 8 ರನ್ ಸಿಡಿಸಿ ಔಟಾದರೆ,ದೇವದತ್ ಪಡಿಕ್ಕಲ್ 34 ರನ್ ಕಾಣಿಕೆ ನೀಡಿದರು. ವಾಶಿಂಗ್ಟನ್ ಸುಂದರ್ 7 ರನ್ ಸಿಡಿಸಿ ನಿರ್ಗಮಿಸಿದರು. ಗ್ಲೆನ್ ಮ್ಯಾಕ್ಸ್‌ವೆಲ್ 22 ರನ್ ಸಿಡಿಸಿ ಔಟಾದರು. 79 ರನ್‌ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಎಬಿ ಡಿವಿಲಿಯರ್ಸ್ ಕೇವಲ 4 ರನ್ ಸಿಡಿಸಿ ಔಟಾದರು. ಅಷ್ಟರಲ್ಲೇ ಆರ್‌ಸಿಬಿ ಸೋಲು ಖಚಿತಗೊಂಡಿತು. ಹರ್ಷಲ್ ಪಟೇಲ್ , ನವದೀಪ್ ಸೈನಿ ಅಬ್ಬರಿಸಲಿಲ್ಲ. ಜಡೇಜಾ ಜೊತೆ ಇಮ್ರಾನ್ ತಾಹಿರ್ ಕೂಡ ಶಾಕ್ ನೀಡಿದರು. 

ಯಜುವೇಂದ್ರ ಚಹಾಲ್ ಹಾಗೂ ಮೊಹಮ್ಮದ್ ಸಿರಾಜ್ ನಡೆಸಿದ ಹೋರಾಟ ಸಾಕಾಗಲಿಲ್ಲ. ಸಿಎಸ್‌ಕೆ ಬೌಲರ್‌ಗಳ ಮಿಂಚಿನ ದಾಳಿಯಿಂದ ಕೊಹ್ಲಿ ಸೈನ್ಯ 9 ವಿಕೆಟ್ ನಷ್ಟಕ್ಕೆ 122 ರನ್‌ ಸಿಡಿಸಿತು. ಇದರೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ 69 ರನ್ ಗೆಲುವು ಕಂಡಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India vs New Zealand: ಕೊಹ್ಲಿ ಕ್ಲಾಸಿಕ್‌ ಇನ್ನಿಂಗ್ಸ್‌, ನ್ಯೂಜಿಲೆಂಡ್‌ ವಿರುದ್ಧ 4 ವಿಕೆಟ್‌ ಗೆಲುವು ಕಂಡ ಟೀಮ್‌ ಇಂಡಿಯಾ
ಯಶ್‌ ದಯಾಳ್‌ ಬಳಿಕ ಮತ್ತೊಬ್ಬ ಆರ್‌ಸಿಬಿ ಪ್ಲೇಯರ್‌ ಸೋಶಿಯಲ್‌ ಮೀಡಿಯಾ ರಂಗಿನಾಟ ಬಯಲು..!