ರವೀಂದ್ರ ಜಡೇಜಾ ಸಿಕ್ಸರ್ ಸುರಿಮಳೆ; RCBಗೆ 192 ರನ್ ಟಾರ್ಗೆಟ್!

By Suvarna NewsFirst Published Apr 25, 2021, 5:27 PM IST
Highlights

ಆರಂಭಿಕರ ಅಬ್ಬರ, ಮಧ್ಯಮ ಕ್ರಮಾಂಕದ ಸಾಥ್‌ನಿಂದ ಚೆನ್ನೈ ಸೂಪರ್ ಕಿಂಗ್ಸ್ ಅಬ್ಬರಿಸಿದೆ. ಆರ್‌ಸಿಬಿ ವಿರುದ್ಧ ಬೃಹತ್ ಮೊತ್ತ ಪೇರಿಸಿದೆ.ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿರುವ ಆರ್‌ಸಿಬಿ ಈ ಮೊತ್ತ ಚೇಸ್ ಮಾಡುತ್ತಾ?

ಮುಂಬೈ(ಏ.25): 14ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಸೋಲಿಲ್ಲದೆ ಸರದಾರನಾಗಿ ಮುಂದುವರಿದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇದೀಗ ಚೆನ್ನೈ ವಿರುದ್ಧ ರನ್ ಗುರಿ ಸಿಕ್ಕಿದೆ. ಸ್ಫೋಟಕ ಆರಂಭ ಪಡೆದು ಮುನ್ನಗ್ಗುತ್ತಿದ್ದ ಸಿಎಸ್‌ಕೆ ತಂಡವನ್ನು ಆರ್‌ಸಿಬಿ ಕಟ್ಟಿಹಾಕಿತು. ಹೀಗಾಗಿ ಸಿಎಸ್‌ಕೆ 4 ವಿಕೆಟ್ ನಷ್ಟಕ್ಕೆ 191 ರನ್ ಸಿಡಿಸಿತು.

ಬೃಹತ್ ಮೊತ್ತ ದಾಖಲಿಸೋ ಲೆಕ್ಕಾಚಾರದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಸಿಎಸ್‌ಕೆ ನಿರೀಕ್ಷಿತ ಆರಂಭ ಪಡೆಯಿತು. ರುತುರಾಜ್ ಗಾಯಕ್ವಾಡ್ ಹಾಗೂ ಫಾಫ್ ಡುಪ್ಲೆಸಿಸ್ 74 ರನ್ ಜೊತೆಯಾಟ ನೀಡಿದರು. ರುತುರಾಜ್ 33  ರನ್ ಸಿಡಿಸಿ ಔಟಾದರು. ಆದರೆ ಡುಪ್ಲೆಸಿಸ್ ಹೋರಾಟ ಮುಂದುವರಿಸಿದರು.

ಸುರೇಶ್ ರೈನಾ 24 ರನ್ ಸಿಡಿಸಿ ಔಟಾದರೆ, ಡುಪ್ಲೆಸಿಸ್ ಹಾಫ್ ಸೆಂಚುರಿ ಸಿಡಿಸಿದರು. 50 ರನ್ ಸಿಡಿಸಿ ಡುಪ್ಲೆಸಿಸ್ ಔಟಾದ ಬಳಿಕ ಅಂಬಾಟಿ ರಾಯುಡು ಹಾಗೂ ರವೀಂದ್ರ ಜಡೇಜಾ ಅಬ್ಬರ ಮುಂದುವರಿಯಿತು. ಅಂಬಾಟಿ ರಾಯುಡು 14 ರನ್ ಸಿಡಿಸಿ ಔಟಾದರು. ಆದರೆ ಅಬ್ಬರಿಸಿದ ಜಡೇಜಾ ಹಾಫ್ ಸೆಂಚುರಿ ಸಿಡಿಸಿದರು.

ಅಂತಿಮ ಓವರ್‌ನಲ್ಲಿ ರವೀಂದ್ರ ಜಡೇಜಾ 5 ಸಿಕ್ಸರ್, 1 ಬೌಂಡರಿ ಸಿಡಿಸಿದರು. ಈ ಮೂಲಕ ಒಂದೇ ಓವರ್‌ನಲ್ಲಿ  37 ರನ್ ಸಿಡಿಸಿದರು. ರವೀಂದ್ರ ಜಡೇಜಾ ಅಜೇಯ 62 ರನ್ ಹಾಗೂ ಎಂ.ಎಸ್.ಧೋನಿ ಅಜೇಯ 2 ರನ್ ಸಿಡಿಸಿದರು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ 4 ವಿಕೆಟ್ ನಷ್ಟಕ್ಕೆ 191 ರನ್ ಸಿಡಿಸಿದೆ.

click me!