ರಾಜಸ್ಥಾನ ದಾಳಿಗೆ ಸೈಲೆಂಟ್ ಆದ ಕೆಕೆಆರ್; ಸ್ಯಾಮ್ಸನ್ ಪಡೆಗೆ ಸುಲಭ ಟಾರ್ಗೆಟ್!

Published : Apr 24, 2021, 09:20 PM IST
ರಾಜಸ್ಥಾನ ದಾಳಿಗೆ ಸೈಲೆಂಟ್ ಆದ ಕೆಕೆಆರ್; ಸ್ಯಾಮ್ಸನ್ ಪಡೆಗೆ ಸುಲಭ ಟಾರ್ಗೆಟ್!

ಸಾರಾಂಶ

ರಾಜಸ್ಥಾನ ರಾಯಲ್ಸ್ ಸಂಘಟಿತ ದಾಳಿಗೆ ಕೋಲ್ಕತಾ ನೈಟ್ ರೈಡರ್ಸ್ ಅಬ್ಬರಿಸಲು ವಿಫಲವಾಗಿದೆ. ಪರಿಣಾಮ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸುಲಭ ಗುರಿ ನೀಡಿದೆ.

ಮುಂಬೈ(ಏ.24): ಕೆಕೆಆರ್ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕೋ ರಾಜಸ್ಥಾನ ರಾಯಲ್ಸ್ ತಂಡದ ಲೆಕ್ಕಾಚಾರ ವರ್ಕೌಟ್ ಆಗಿದೆ. 18ನೇ ಲೀಗ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ 9 ವಿಕೆಟ್ ನಷ್ಟಕ್ಕೆ 133 ರನ್ ಸಿಡಿಸಿದೆ. ಈ ಮೂಲಕ ರಾಜಸ್ಥಾನ ತಂಡಕ್ಕೆ ಸುಲಭ ಗುರಿ ನೀಡಿದೆ.

ಆರಂಭಿಕರಾದ ನಿತೀಶ್ ರಾಣಾ ಹಾಗೂ ಶುಭ್‌ಮನ್ ಗಿಲ್ ಹೋರಾಟ ಹೆಚ್ಚು ಹೊತ್ತು ಇರಲಿಲ್ಲ. ಗಿಲ್ 11 ರನ್ ಸಿಡಿಸಿದರೆ, ರಾಣಾ 22 ರನ್ ಸಿಡಿಸಿದರು. ಕುಸಿದ ಕೆಕೆಆರ್ ತಂಡಕ್ಕೆ ರಾಹುಲ್ ತ್ರಿಪಾಠಿ ಆಸರೆಯಾದರು. ತ್ರಿಪಾಠಿ 36 ರನ್ ಸಿಡಿಸಿ ನಿರ್ಗಮಿಸಿದರು.

ಸುನಿಲ್ ನರೈನ್ ಹಾಗೂ ನಾಯಕ ಇಯಾನ್ ಮಾರ್ಗನ್ ಅಬ್ಬರಿಸಲಿಲ್ಲ. ಆದರೆ ದಿನೇಶ್ ಕಾರ್ತಿಕ್ ಹಾಗೂ ಆ್ಯಂಡ್ರೆ ರಸೆಲ್ ಹೋರಾಟ ಕೆಕೆಆರ್ ತಂಡವನ್ನು ಕಾಪಾಡಿತು. ರಸೆಲ್ ಕೇವಲ 9 ರನ್ ಸಿಡಿಸಿ ಔಟಾದರು. ಇತ್ತ ಕಾರ್ತಿಕ್ 25 ರನ್ ಕಾಣಿಕೆ ನೀಡಿದರು. ಪ್ಯಾಟ್ ಕಮಿನ್ಸ್ ಕೂಡ ನೆರವಾಗಲಿಲ್ಲ.  ಅಂತಿಮವಾಗಿ ಕೆಕೆಆರ್ 9 ವಿಕೆಟ್ ನಷ್ಟಕ್ಕೆ 133 ರನ್ ಸಿಡಿಸಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL Mini Auction 2026: 1355 ಆಟಗಾರರಲ್ಲಿ 350 ಪ್ಲೇಯರ್ಸ್ ಶಾರ್ಟ್‌ಲಿಸ್ಟ್! ಇಲ್ಲಿದೆ ಹರಾಜಿನ ಕಂಪ್ಲೀಟ್ ಡೀಟೈಲ್ಸ್
ಸಡನ್ನಾಗಿ ಸೋಶಿಯಲ್‌ ಮೀಡಿಯಾದಲ್ಲಿ ಸನ್ನಿ ಲಿಯೋನ್‌ ಫೋಟೋ ಹಂಚಿಕೊಂಡ ಅಶ್ವಿನ್‌, ಇದಕ್ಕಿದೆ ಐಪಿಎಲ್ ಲಿಂಕ್‌!