IPL 2021: ಪಂಜಾಬ್‌ಗೆ ಸ್ಪರ್ಧಾತ್ಮಕ ಗುರಿ ನೀಡಿದ ಚೆನ್ನೈ ಸೂಪರ್ ಕಿಂಗ್ಸ್‌

By Suvarna NewsFirst Published Oct 7, 2021, 5:28 PM IST
Highlights

* ಪಂಜಾಬ್ ಎದುರು ಆಕರ್ಷಕ ಅರ್ಧಶತಕ ಚಚ್ಚಿದ ಫಾಫ್ ಡುಪ್ಲೆಸಿಸ್

* ಪಂಜಾಬ್‌ಗೆ ಗೆಲ್ಲಲು 135 ರನ್‌ಗಳ ಗುರಿ ನೀಡಿದ ಸಿಎಸ್‌ಕೆ

* ಬೌಲಿಂಗ್‌ನಲ್ಲಿ ಮಿಂಚಿದ ಕ್ರಿಸ್ ಜೋರ್ಡನ್‌, ಆರ್ಶದೀಪ್ ಸಿಂಗ್

ದುಬೈ(ಅ.07): ಫಾಫ್ ಡು ಪ್ಲೆಸಿಸ್‌ (Faf du Plessis) ಆಕರ್ಷಕ ಅರ್ಧಶತಕದ ಹೊರತಾಗಿಯೂ ಪಂಜಾಬ್ ಬೌಲರ್‌ಗಳ ಶಿಸ್ತುಬದ್ದ ದಾಳಿಯಿಂದಾಗಿ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್‌ (Chennai Super Kings) ತಂಡವನ್ನು 134 ರನ್‌ಗಳಿಗೆ ನಿಯಂತ್ರಿಸುವಲ್ಲಿ ಪಂಜಾಬ್ ಕಿಂಗ್ಸ್ (Punjab Kings) ತಂಡ ಯಶಸ್ವಿಯಾಗಿದೆ. 

ಇಲ್ಲಿನ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಪಂದ್ಯದ 4ನೇ ಓವರ್‌ನಲ್ಲೇ ಉತ್ತಮ ಫಾರ್ಮ್‌ನಲ್ಲಿರುವ ಋತುರಾಜ್ ಗಾಯಕ್ವಾಡ್‌ (12) ಅಲ್ಪ ಮೊತ್ತಕ್ಕೆ ಆರ್ಶದೀಪ್ ಸಿಂಗ್‌ಗೆ ವಿಕೆಟ್‌ ಒಪ್ಪಿಸಿದರು. ಇದರ ಬೆನ್ನಲ್ಲೇ ಮೋಯಿನ್ ಅಲಿ (Moeen Ali) ಶೂನ್ಯ ಸುತ್ತಿ ಆರ್ಶದೀಪ್‌ಗೆ ಎರಡನೇ ಬಲಿಯಾದರು. 

INNINGS BREAK!

Solid 7⃣6⃣ for

2⃣ wickets each for &

The 's chase to begin soon.

Scorecard 👉 https://t.co/z3JT9U9tHZ pic.twitter.com/FTbXbn0QL6

— IndianPremierLeague (@IPL)

ಕೈಕೊಟ್ಟ ಮಧ್ಯಮ ಕ್ರಮಾಂಕ: ಆರಂಭಿಕ ಆಘಾತದಿಂದ ಹೊರಬರುವ ಮುನ್ನವೇ ಚೆನ್ನೈ ಮಧ್ಯಮ ಕ್ರಮಾಂಕ ಕೂಡಾ ದಿಢೀರ್ ಕುಸಿತ ಕಂಡಿತು. ರೈನಾ ಅನುಪಸ್ಥಿತಿಯಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿದ್ದ ಕನ್ನಡಿಗ ರಾಬಿನ್ ಉತ್ತಪ್ಪ(02) ಒಂದಂಕಿ ಮೊತ್ತಕ್ಕೆ ಕ್ರಿಸ್‌ ಜೋರ್ಡನ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಅಂಬಟಿ ರಾಯುಡು(04) ಕೂಡಾ ದೊಡ್ಡ ಹೊಡೆತಕ್ಕೆ ಯತ್ನಿಸಿ ಜೋರ್ಡನ್‌ಗೆ ಎರಡನೇ ಬಲಿಯಾದರು. ಇನ್ನು ನಾಯಕ ಧೋನಿ ಆಟ ಕೇವಲ 12 ರನ್‌ಗಳಿಗೆ ಸೀಮಿತವಾಯಿತು. ಈ ವೇಳೆಗೆ 12 ಓವರ್‌ ಅಂತ್ಯದ ವೇಳೆಗೆ ಚೆನ್ನೈ ತಂಡವು 5 ವಿಕೆಟ್ ಕಳೆದುಕೊಂಡು 61 ರನ್‌ ಗಳಿಸಿತ್ತು.

IPL 2021 ಮುಂದಿನ ಆವೃತ್ತಿಯಲ್ಲಿ ನೀವು ನನ್ನನ್ನು CSK ಜೆರ್ಸಿಯಲ್ಲಿ ಕಾಣಬಹುದು, ಆದರೆ..?

ಆಸರೆಯಾದ ಡು ಪ್ಲೆಸಿಸ್‌-ಜಡೇಜಾ: ಒಂದು ಕಡೆ ನಿರಂತರ ವಿಕೆಟ್ ಬೀಳುತ್ತಿದ್ದರೂ ಸಿಎಸ್‌ಕೆ ಆರಂಭಿಕ ಬ್ಯಾಟ್ಸ್‌ಮನ್‌ ಫಾಫ್ ಡು ಪ್ಲೆಸಿಸ್‌ ನೆಲಕಚ್ಚಿ ಆಡುವ ಮೂಲಕ ತಂಡಕ್ಕೆ ಆಸರೆಯಾದರು. ಡು ಪ್ಲೆಸಿಸ್‌ಗೆ ರವೀಂದ್ರ ಜಡೇಜಾ (Ravindra Jadeja) ಉತ್ತಮ ಸಾಥ್ ನೀಡಿದರು. ಡು ಪ್ಲೆಸಿಸ್ 46 ಎಸೆತಗಳನ್ನು ಎದುರಿಸಿ ಅರ್ಧಶತಕ ಪೂರೈಸಿದರು. ಅಂದಹಾಗೆ ಇದು ಪಂಜಾಬ್ ಎದುರು ಡು ಪ್ಲೆಸಿಸ್‌ ಬಾರಿಸಿದ 7ನೇ ಅರ್ಧಶತಕ ಇದಾಗಿದೆ. ಜಡೇಜಾ ಜೊತೆಗೂಡಿ ಡು ಪ್ಲೆಸಿಸ್ ಸಿಎಸ್‌ಕೆ ರನ್‌ ವೇಗಕ್ಕೆ ಚುರುಕು ಮುಟ್ಟಿಸಿದರು. ಸಿಎಸ್‌ಕೆ ಪರ ಆರನೇ ವಿಕೆಟ್‌ಗೆ ಈ ಜೋಡಿ 45 ಎಸೆತಗಳನ್ನು ಎದುರಿಸಿ 67 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಡು ಪ್ಲೆಸಿಸ್‌ 55 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 76 ರನ್‌ ಬಾರಿಸಿ ಶಮಿಗೆ ವಿಕೆಟ್ ಒಪ್ಪಿಸಿದರು. ಮತ್ತೊಂದು ತುದಿಯಲ್ಲಿ ಜಡೇಜಾ 15 ರನ್‌ ಬಾರಿಸಿ ಅಜೇಯರಾಗುಳಿದರು.

ಪಂಜಾಬ್‌ ಕಿಂಗ್ಸ್‌ ತಂಡದ ಪರ ಕ್ರಿಸ್ ಜೋರ್ಡನ್ ಹಾಗೂ ಅರ್ಶದೀಪ್ ಸಿಂಗ್ ತಲಾ 2 ವಿಕೆಟ್ ಪಡೆದರೆ, ರವಿ ಬಿಷ್ಣೋಯಿ ಹಾಗೂ ಮೊಹಮ್ಮದ್ ಶಮಿ ತಲಾ ಒಂದೊಂದು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್

ಚೆನ್ನೈ ಸೂಪರ್ ಕಿಂಗ್ಸ್‌: 134/6
ಫಾಫ್ ಡು ಪ್ಲೆಸಿಸ್: 76
ಕ್ರಿಸ್ ಜೋರ್ಡನ್‌: 20/2

click me!