IPL 2021: ಚೆನ್ನೈ ಎದುರು ಟಾಸ್ ಗೆದ್ದ ಪಂಜಾಬ್ ಕಿಂಗ್ಸ್‌ ಬೌಲಿಂಗ್ ಆಯ್ಕೆ

By Suvarna NewsFirst Published Oct 7, 2021, 3:07 PM IST
Highlights

* ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕಿಂದ ಪಂಜಾಬ್ ಕಿಂಗ್ಸ್‌ ಸವಾಲು

* ಈ ಹೈವೋಲ್ಟೇಜ್ ಪಂದ್ಯಕ್ಕೆ ದುಬೈ ಅಂತಾರಾಷ್ಟ್ರೀಯ ಮೈದಾನ ಆತಿಥ್ಯ

* ಲೀಗ್ ಹಂತದ ಕೊನೆಯ ಪಂದ್ಯವನ್ನಾಡುತ್ತಿರುವ ಉಭಯ ತಂಡಗಳು

ದುಬೈ(ಅ.7): ಚೆನ್ನೈ ಸೂಪರ್ ಕಿಂಗ್ಸ್‌ (Chennai Super Kings) ಹಾಗೂ ಪಂಜಾಬ್‌ ಕಿಂಗ್ಸ್‌ (Punjab Kings) ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆ.ಎಲ್‌. ರಾಹುಲ್‌ (KL Rahul) ಬೌಲಿಂಗ್‌ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. 

ಈ ಹೈವೋಲ್ಟೇಜ್ ಪಂದ್ಯಕ್ಕೆ ದುಬೈನ ಅಂತಾರಾಷ್ಟ್ರೀಯ ಮೈದಾನ ಆತಿಥ್ಯವನ್ನು ವಹಿಸಿದೆ. ಪಂಜಾಬ್ ಕಿಗ್ಸ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ನಿಕೋಲಸ್‌ ಪೂರನ್ ಬದಲಿಗೆ ಕ್ರಿಸ್ ಜೋರ್ಡನ್‌ ಪಂಜಾಬ್ ತಂಡ ಕೂಡಿಕೊಂಡಿದ್ದಾರೆ. ಇನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. 

🚨 Toss Update 🚨 have elected to bowl against .

Follow the match 👉 https://t.co/z3JT9U9tHZ pic.twitter.com/H94DPnktyv

— IndianPremierLeague (@IPL)

Match 53. Punjab Kings win the toss and elect to field https://t.co/dWWDNHc3p8

— IndianPremierLeague (@IPL)

IPL 2021: ಪಂಜಾಬ್‌ ಕಿಂಗ್ಸ್‌ಗಿಂದು ಚೆನ್ನೈ ಸೂಪರ್‌ ಕಿಂಗ್ಸ್ ಸವಾಲು..!

ಮಹೇಂದ್ರ ಸಿಂಗ್ ಧೋನಿ (MS Dhoni) ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಇದುವರೆಗೂ 13 ಪಂದ್ಯಗಳನ್ನಾಡಿ 9 ಗೆಲುವು ಹಾಗೂ 4 ಸೋಲುಗಳೊಂದಿಗೆ 18 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಕೆ.ಎಲ್‌.ರಾಹುಲ್‌ ಪಡೆ ಸದ್ಯ 13 ಪಂದ್ಯಗಳನ್ನಾಡಿ 5 ಗೆಲುವು ಹಾಗೂ 8 ಸೋಲುಗಳೊಂದಿಗೆ 10 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದು, ಗೆಲುವಿನೊಂದಿಗೆ ಅಭಿಯಾನ ಮುಗಿಸಲು ಎದುರು ನೋಡುತ್ತಿದೆ.

Getting into the zone be like 👍 👍 pic.twitter.com/UoKOo4D9Sn

— IndianPremierLeague (@IPL)

What do you reckon is the chat between the two❓ 🤔 pic.twitter.com/VW6nHBU82f

— IndianPremierLeague (@IPL)

ಐಪಿಎಲ್ ಇತಿಹಾಸದಲ್ಲಿ ಇದುವರೆಗೂ ಉಭಯ ತಂಡಗಳು ಒಟ್ಟು 24 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಚೆನ್ನೈ ಸೂಪರ್‌ ಕಿಂಗ್ಸ್ ತಂಡವು ಸ್ಪಷ್ಟ ಮೇಲುಗೈ ಸಾಧಿಸಿದೆ. 24 ಐಪಿಎಲ್ ಪಂದ್ಯಗಳ ಪೈಕಿ ಸಿಎಸ್‌ಕೆ ತಂಡವು 15 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದರೆ, ಪಂಜಾಬ್ ಕಿಂಗ್ಸ್ ತಂಡವು 9 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ

ತಂಡಗಳು ಹೀಗಿವೆ ನೋಡಿ

ಚೆನ್ನೈ ಸೂಪರ್ ಕಿಂಗ್ಸ್

Match 53. Chennai Super Kings XI: F du Plessis, R Gaikwad, R Uthappa, M Ali, A Rayudu, MS Dhoni, R Jadeja, DJ Bravo, S Thakur, D Chahar, J Hazlewood https://t.co/dWWDNHc3p8

— IndianPremierLeague (@IPL)

ಪಂಜಾಬ್ ಕಿಂಗ್ಸ್

Match 53. Punjab Kings XI: KL Rahul, M Agarwal, A Markram, S Khan, SN Khan, M Henriques, H Brar, C Jordan, M Shami, R Bishnoi, A Singh https://t.co/dWWDNHc3p8

— IndianPremierLeague (@IPL)
click me!