14ನೇ ಆವೃತ್ತಿಯ ಆವೃತ್ತಿಯ ಐಪಿಎಲ್ ಟೂರ್ನಿ ಅರ್ಧದಲ್ಲೇ ಸ್ಥಗಿತಗೊಂಡ ಬೆನ್ನಲ್ಲೇ ಇಂಗ್ಲೆಂಡ್ ಕ್ರಿಕೆಟಿಗರು ಲಂಡನ್‌ಗೆ ವಾಪಾಸ್ಸಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಮೇ.06): ಐಪಿಎಲ್ ಮುಂದೂಡಿಕೆಯಾದ ಕಾರಣ, ಟೂರ್ನಿಯಲ್ಲಿ ಆಡುತ್ತಿದ್ದ ಇಂಗ್ಲೆಂಡ್‌ನ 11 ಆಟಗಾರರ ಪೈಕಿ 8 ಆಟಗಾರರು ಬುಧವಾರ ಲಂಡನ್‌ಗೆ ತೆರಳಿದರು. ಅವರು ಅಲ್ಲಿ 10 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಲಿದ್ದಾರೆ.
ಇನ್ನು ಕೋಲ್ಕತ ನೈಟ್ ರೈಡರ್ಸ್ ತಂಡದ ನಾಯಕ ಇಯಾನ್ ಮೊರ್ಗನ್, ಕ್ರಿಸ್ ಜೋರ್ಡನ್ ಹಾಗೂ ಡೇವಿಡ್ ಮಲಾನ್ ಗುರುವಾರ ಇಲ್ಲವೇ ಶುಕ್ರವಾರ ತೆರಳಲಿದ್ದಾರೆ. ವಿಶೇಷವಾದ ಭಾರತ ಸದ್ಯ ಸಂಕಷ್ಟದ ಸಮಯವನ್ನು ಎದುರಿಸುತ್ತಿದೆ. ನಿಮ್ಮವನಂತೆ ನನ್ನ ಹಾಗೂ ನನ್ನ ಕುಟುಂಬವನ್ನು ಸ್ವಾಗತಿಸಿದ್ದಕ್ಕೆ ಧನ್ಯವಾದಗಳು. ಎಲ್ಲರೂ ಸುರಕ್ಷಿತವಾಗಿರಿ, ಮತ್ತೆ ಸಿಗೋಣ ಎಂದು ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಟ್ವೀಟ್ ಮಾಡಿ ಭಾರತದ ಆತಿಥ್ಯವನ್ನು ಸ್ಮರಿಸಿಕೊಂಡಿದ್ದಾರೆ.
undefined
ಐಪಿಎಲ್ 2021 ರದ್ದು ಮಾಡಿಲ್ಲ, ಮುಂದೂಡಲಾಗಿದೆ: ರಾಜೀವ್ ಶುಕ್ಲಾ
India is a special country going through a very difficult time. Thank you for welcoming me and my family like you always do. Please stay safe and look after yourselves 🇮🇳 pic.twitter.com/DnNdFKkuO2
— Jos Buttler (@josbuttler)ಇದೇ ವೇಳೆ ಆಸ್ಟ್ರೇಲಿಯಾ ಆಟಗಾರರು, ಕೋಚ್ ಹಾಗೂ ಕಾಮೆಂಟೇಟರ್‌ಗಳು ಮಾಲ್ಡೀಲ್ಸ್ ಇಲ್ಲವೇ ಶ್ರೀಲಂಕಾಕ್ಕೆ ತೆರಳಿ, ಅಲ್ಲಿ ಕೆಲ ದಿನಗಳ ಕಾಲ ಉಳಿಯಲಿದ್ದಾರೆ. ಬಳಿಕ ಆಸ್ಟ್ರೇಲಿಯಾ ಸರ್ಕಾರ ಅನುಮತಿ ನೀಡಿದ ಬಳಿಕ ತಮ್ಮ ದೇಶಕ್ಕೆ ತೆರಳಲಿದ್ದಾರೆ. ಮಾಲ್ಡೀವ್ಸ್ ಇಲ್ಲವೇ ಶ್ರೀಲಂಕಾಕ್ಕೆ ಹೋಗಲು ಬಿಸಿಸಿಐ ವಿಶೇಷ ವಿಮಾನದ ವ್ಯವಸ್ಥೆ ಮಾಡಿಕೊಡಲಿದೆ. ದ. ಆಫ್ರಿಕಾ, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ಬಾಂಗ್ಲಾ, ಆಫ್ಘಾನಿಸ್ತಾನ ಆಟಗಾರರಿಗೂ ವ್ಯವಸ್ಥೆ ಮಾಡುತ್ತಿದೆ