
ನವದೆಹಲಿ(ಮೇ.06): ಕೋವಿಡ್ ಕಾರಣದಿಂದ ಮುಂದೂಡಿಕೆಯಾದ ಐಪಿಎಲ್‌ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದ ಕ್ಲೀನರ್ ಒಬ್ಬನ ಸಹಾಯ ಪಡೆದು ಬುಕ್ಕಿಗಳು ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು ಎನ್ನುವುದು ಬೆಳಕಿಗೆ ಬಂದಿದೆ.
ಈ ವಿಚಾರವನ್ನು ಬಿಸಿಸಿಐ ಭದ್ರತಾ ದಳದ ಮುಖ್ಯಸ್ಥ ಶಬ್ದೀರ್ ಹುಸ್ಸೇನ್ ಬಹಿರಂಗಪಡಿಸಿದ್ದಾರೆ. ಡೆಲ್ಲಿ ಕ್ರಿಕೆಟ್ ಸಂಸ್ಥೆಯಿಂದ ಮಾನ್ಯತೆ ಪಡೆದ ಕ್ಲೀನರ್ ಒಬ್ಬ ಕ್ರೀಡಾಂಗಣದಲ್ಲಿದ್ದುಕೊಂಡು ಪಂದ್ಯದ ಮಾಹಿತಿಯನ್ನು ಬುಕ್ಕಿಗಳೊಂದಿಗೆ ಹಂಚಿಕೊಳ್ಳುತ್ತಿದ್ದ. ಪಂದ್ಯದ ಪ್ರತಿ ಎಸೆತ ಹಾಗೂ ಟೀವಿಯಲ್ಲಿ ಅದರ ನೇರ ಪ್ರಸಾರದ ಮಧ್ಯೆ 7ರಿಂದ 8 ಸೆಕೆಂಡ್‌ಗಳ ಸಮಯವಿರುತ್ತದೆ. ಈ ಸಮಯದಲ್ಲಿ ಕ್ಲೀನರ್ ಬುಕ್ಕಿಗಳಿಗೆ ಮಾಹಿತಿ ರವಾನಿಸಿ, ಬಾಲ್ ಟು ಬಾಲ್ ಬೆಟ್ಟಿಂಗ್ ಗೆ ನೆರವು ನೀಡುತ್ತಿದ್ದ.
ನಕಲಿ ಐಡಿ ಕಾರ್ಡ್‌ನೊಂದಿಗೆ ಸ್ಟೇಡಿಯಂಗೆ ಬಂದು ಸಿಕ್ಕಿಬಿದ್ದ ಇಬ್ಬರು ಬುಕ್ಕಿಗಳು..!
ಬಿಸಿಸಿಐ ಭದ್ರತಾ ಅಧಿಕಾರಿಯೊಬ್ಬರು ಆ ವ್ಯಕ್ತಿಯನ್ನು ಅನುಮಾನಿಸಿ, ಮೊಬೈಲ್ ಕಿತ್ತುಕೊಂಡು ಪರಿಶೀಲನೆ ನಡೆಸುವ ವೇಳೆ ಆ ಕ್ಲೀನರ್ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಮುಂಬೈನಲ್ಲಿ ಸನ್‌ರೈಸರ್ಸ್ ತಂಡ ಉಳಿದುಕೊಂಡಿದ್ದ ಹೋಟೆಲ್‌ನಲ್ಲೇ 3 ಬುಕ್ಕಿಗಳು ವಾಸ್ತವ್ಯ ಹೂಡಿದ್ದರು. ಆದರೆ ಬಯೋ ಬಬಲ್‌ನೊಳಗೆ ಪ್ರವೇಶಿಸಿ ಆಟಗಾರರ ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂದು ಶಬ್ಬೀರ್ ತಿಳಿಸಿದ್ದಾರೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.