IPL 2021ರ ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಚೆನ್ನೈ ಸೂಪರ್ ಕಿಂಗ್ಸ್ ಇದೀಗ ಕಮ್‌ಬ್ಯಾಕ್‌ನತ್ತ ಚಿಂತಿಸುತ್ತಿದೆ. ಕಳೆದ ಆವತ್ತಿಯಲ್ಲಿ ಧೋನಿ ನೇತೃತ್ವದ ಸಿಎಸ್‌ಕೆ ಕಳಪೆ ಪ್ರದರ್ಶನ ನೀಡಿ ಟೂರ್ನಿಯಿಂದ ಹೊರಬಿದ್ದಿತ್ತು. ಇದೀಗ ಮೊದಲ ಪಂದ್ಯದ ಸೋಲಿನ ಬೆನ್ನಲ್ಲೇ ಚೆನ್ನೈ ನಾಯಕ ಧೋನಿಗೆ ದುಬಾರಿ ದಂಡ ವಿಧಿಸಲಾಗಿದೆ.
ಚೆನ್ನೈ(ಏ.11): ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿ ಮೊದಲ ಹೋರಾಟದಲ್ಲಿ ಮುಗ್ಗರಿಸಿ ನಿರಾಸೆ ಅನುಭವಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ಅಬ್ಬರದ ಮುಂದೆ ಚೆನ್ನೈ ಮಂಕಾಯಿತು. ಈ ಸೋಲಿಗೆ ನಾಯಕ ಎಂ.ಎಸ್.ಧೋನಿ ಬೌಲರ್ಸ್ ಕಾರಣ ಎಂದಿದ್ದರು. ಹೌದು, ಚೆನ್ನೈ ಬೌಲರ್‌ಗಳು ಸರಾಗವಾಗಿ ರನ್ ಬಿಟ್ಟುಕೊಟ್ಟ ಕಾರಣ ಡೆಲ್ಲಿಗೆ ಸುಲಭ ಗೆಲುವು ಸಿಕ್ಕಿದೆ. ಆದರೆ ಧೋನಿ ಹತಾಶೆ ಹಿಂದೆ ಮತ್ತೊಂದು ಕಾರಣವಿದೆ. ಇದು ಬಿಸಿಸಿಐ ಹಾಕಿದ 12 ಲಕ್ಷ ರೂಪಾಯಿ ದಂಡ.
IPL 2021 ಪಂದ್ಯ ವೀಕ್ಷಿಸಿಲು ಅಭಿಮಾನಿಗಳಿಗೆ ಅವಕಾಶ; ಒಂದು ಕಂಡೀಷನ್!
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಿಧಾನಗತಿಯ ಬೌಲಿಂಗ್ ಮಾಡಿದ ಕಾರಣಕ್ಕೆ ಸಿಎಸ್‌ಕೆ ನಾಯಕ ಧೋನಿಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ನಿಗಧಿತ ಸಮಯದೊಳಗೆ ಪಂದ್ಯ ಮುಗಿಸಿದ ಸಿಎಸ್‌ಕೆ ವಿರುದ್ಧ ಮ್ಯಾಚ್‌ರೆಫ್ರಿ ಗರಂ ಆಗಿದ್ದಾರೆ. ಐಪಿಎಲ್ ಕೋಡ್ ಆಫ್ ಕಂಡಕ್ಟ್ ಪ್ರಕಾರ ಸ್ಲೋ ಓವರ್ ರೇಟ್ ಮಾಡಿದ ತಂಡದ ನಾಯಕ ಧೋನಿಗೆ 12 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 188 ರನ್ ಸಿಡಿಸಿತ್ತು. ಆದರೆ ಶಿಖರ್ ಧವನ್, ಪೃಥ್ವಿ ಶಾ ಅಬ್ಬರಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸೋಲು ಖಚಿತಗೊಂಡಿತು. ಡೆಲ್ಲಿ 7 ವಿಕೆಟ್ ಗೆಲುವು ದಾಖಲಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು.