IPL 2021: ಪಂಜಾಬ್ ಕಿಂಗ್ಸ್ ವಿರುದ್ಧ ಟಾಸ್ ಗೆದ್ದ ಮುಂಬೈ, ತಂಡದಲ್ಲಿ 2 ಬದಲಾವಣೆ!

Published : Sep 28, 2021, 07:08 PM IST
IPL 2021: ಪಂಜಾಬ್ ಕಿಂಗ್ಸ್ ವಿರುದ್ಧ ಟಾಸ್ ಗೆದ್ದ ಮುಂಬೈ, ತಂಡದಲ್ಲಿ 2 ಬದಲಾವಣೆ!

ಸಾರಾಂಶ

ಮುಂಬೈ ಹಾಗೂ ಪಂಜಾಬ್ ತಂಡಕ್ಕೆ ಮಹತ್ವದ ಪಂದ್ಯ ಸೋತು ಕಂಗೆಟ್ಟಿರುವ ಉಭಯ ತಂಡಕ್ಕೆ ಗೆಲುವು ಅನಿವಾರ್ಯ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ  

ಅಬು ಧಾಬಿ(ಸೆ.28): IPL 2021ರ 42ನೇ ಲೀಗ್ ಪಂದ್ಯ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಮುಂಬೈ ಇಂಡಿಯನ್ಸ್(Mumbai Indians) ಹಾಗೂ ಪಂಜಾಬ್ ಕಿಂಗ್ಸ್(Punjab Kings) ಎರಡೂ ತಂಡಕ್ಕೂ ಗೆಲುವು ಅನಿವಾರ್ಯವಾಗಿದೆ. ಈ ಮಹತ್ವದ ಪಂದ್ಯದಲ್ಲಿ ಟಾಸ್(Toss) ಗೆದ್ದಿರುವ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಧೋನಿ - ಹೆಟ್ಮೇಯರ್: ಟ್ರೆಂಡ್‌ ಆಗುತ್ತಿರುವ IPLಸ್ಟಾರ್ಸ್ ಹೊಸ ಹೇರ್‌ಸ್ಟೈಲ್‌!

ಮುಂಬೈ ಇಂಡಿಯನ್ಸ್ ತಂಡದಲ್ಲಿ 2 ಬದಲಾವಣೆ ಮಾಡಲಾಗಿದೆ. ಇಶಾನ್ ಕಿಶನ್ ಬದಲು ಸೌರಬ್ ತಿವಾರಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮಿಲ್ನೆ ಬದಲು ನಥನ್ ಕೌಲ್ಟರ್ ನೈಲ್ ಸ್ಥಾನ ಪಡೆದಿದ್ದಾರೆ. 

ಮುಂಬೈ ಇಂಡಿಯನ್ಸ್ ತಂಡ:
ರೋಹಿತ್ ಶರ್ಮಾ, ಕ್ವಿಂಟನ್ ಡಿಕಾಕ್, ಸೂರ್ಯಕುಮಾರ್ ಯಾದವ್, ಸೌರವ್ ತಿವಾರಿ, ಕ್ರುನಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್. ನಥನ್ ಕೌಲ್ಟರ್ ನೈಲ್, ರಾಹುಲ್ ಚಹಾರ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್

ಪಂಜಾಬ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಮಯಾಂಕ್ ಅಗರ್ವಾಲ್ ಬದಲು ಮನ್ದೀಪ್ ಸಿಂಗ್ ತಂಡ ಸೇರಿಕೊಂಡಿದ್ದಾರೆ.

ಪಂಜಾಬ್ ತಂಡ:
ಕೆಎಲ್ ರಾಹುಲ್, ಮನ್ದೀಪ್ ಸಿಂಗ್, ಕ್ರಿಸ್ ಗೇಲ್ , ಆ್ಯಡಿನ್ ಮರ್ಕ್ರಾಮ್, ನಿಕೋಲಸ್ ಪೂರನ್, ದೀಪಕ್ ಹೂಡ, ಹರ್ಪ್ರೀತ್ ಬ್ರಾರ್, ನಥನ್ ಎಲ್ಲಿಸ್, ಮೊಹಮ್ಮದ್ ಶಮಿ, ರವಿ ಬಿಶ್ನೋಯ್, ಅರ್ಶದೀಪ್ ಸಿಂಗ್

ಉಭಯ ತಂಡಗಳಿಗೆ ಈ ಪಂದ್ಯದ ಗೆಲುವು ಅತೀ ಮುಖ್ಯವಾಗಿದೆ. ಪಂಜಾಬ್ ಅಂಕಪಟ್ಟಿಯಲ್ಲಿ(Points Table) 5ನೇ ಸ್ಥಾನದಲ್ಲಿದೆ. ಇತ್ತ ಮುಂಬೈ ಇಂಡಿಯನ್ಸ್ 7ನೇ ಸ್ಥಾನದಲ್ಲಿದೆ. ಉಭಯ ತಂಡಗಳು ತಲಾ 8 ಅಂಕ ಸಂಪಾದಿಸಿದೆ ಆದರೆ ಪಂಜಾಬ್ ಕಿಂಗ್ಸ್ ನೆಟ್ ರನ್‌ರೇಟ್ ಆಧಾರದಲ್ಲಿ 5ನೇ ಸ್ಥಾನ ಅಲಂಕರಿಸಿದೆ. ಪ್ಲೇ ಆಫ್(playoff) ಕನಸು ನನಸಾಗಿಸಲು ಉಭಯ ತಂಡಗಳು ಎಲ್ಲಾ ಪಂದ್ಯ ಗೆಲ್ಲಲೇಬೇಕು. ಹೀಗಾಗಿ ಇಂದಿನ ಹೋರಾಟದಲ್ಲಿ ತೀವ್ರ ಪೈಪೋಟಿ ಎರ್ಪಡಲಿದೆ. 

ಭಾರತೀಯ ಮೂಲದ ಹುಡುಗಿಯೊಂದಿಗೆ ಎಂಗೇಜ್‌ ಆಗಿರುವ RCBಯ ಫಾರಿನ್‌ ಆಟಗಾರ!

ಪಿಚ್ ರಿಪೋರ್ಟ್:
ಇಂದಿನ ಪಂದ್ಯಕ್ಕೆ ಸಜ್ಜುಗೊಳಿಸಿರುವ ಅಬು ಧಾಬಿ(Abu dhabi) ಪಿಚ್ ಫ್ಲ್ಯಾಟ್ ಟ್ರಾಕ್ ಆಗಿದೆ. ಈ ಪಿಚ್‌ನಲ್ಲಿ ಬ್ಯಾಟ್ಸ್‌ಮನ್ ಹೆಚ್ಚು ಯಶಸ್ಸುಗಳಿಸಲಿದ್ದಾರೆ. ವೇಗಿಗಳು ಹಾಗೂ ಸ್ಪಿನ್ನರ್ ವಿಕೆಚ್ ಕಬಳಿಸಲು ಹೆಚ್ಚಿನ ತಾಳ್ಮೆ ಅಗತ್ಯವಿದೆ. ಹೀಗಾಗಿ ಇಂದಿನ ಪಂದ್ಯ ಬಿಗ್ ಸ್ಕೋರ್ ಗೇಮ್ ಆಗುವ ಸಾಧ್ಯತೆ ಹೆಚ್ಚಿದೆ.

ಮುಂಬೈ-ಪಂಜಾಬ್ ಮುಖಾಮುಖಿ:
ಮುಂಬೈ ಹಾಗೂ ಪಂಜಾಬ್ ತಂಡ ಸಮಬಲ ಹೋರಾಟ ನಡೆಸಿದೆ. ಮುಂಬೈ 14 ಪಂದ್ಯದಲ್ಲಿ ಗೆಲುವು ದಾಖಲಿಸಿದ್ದರೆ, ಪಂಜಾಬ್ ಕಿಂಗ್ಸ್ 13 ಗೆಲುವು ಕಂಡಿದೆ.

ಪಂಜಾಬ್ ಕಿಂಗ್ಸ್ ಮೊದಲು ಬ್ಯಾಟಿಂಗ್ ಮಾಡಿ ಕಡಿಮೆ ಮೊತ್ತ ದಾಖಲಿಸಿದ ಅಪಖ್ಯಾತಿಗೆ ಗುರಿಯಾಗಿದೆ. ಕಾರಣ ಈ ಆವೃತ್ತಿಯಲ್ಲಿ 5 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಕಡಿಮೆ ಮೊತ್ತ ದಾಖಲಿಸಿದೆ. ಹೀಗಾಗಿ ಈ ಅಡೆತಡೆಯನ್ನು ಪಂಜಾಬ್ ನಿವಾರಿಸಬೇಕಿದೆ. 

ಅನುಷ್ಕಾ ಶರ್ಮಾ- ಧನಶ್ರೀ ವರ್ಮಾ:IPL ಆಟಗಾರರ ಪತ್ನಿಯರು ಎಷ್ಷು ಓದಿದ್ದಾರೆ ನೋಡಿ!

ಮುಂಬೈ ಇಂಡಿಯನ್ಸ್ ಸತತ 3 ಪಂದ್ಯದಲ್ಲಿ ಸೋಲು ಕಂಡಿದೆ. 2015ರಲ್ಲಿ ಮುಂಬೈ ಇಂಡಿಯನ್ಸ್ ಸತತ 4 ಪಂದ್ಯ ಸೋತು ಬಳಿಕ ಚಾಂಪಿಯನ್ ಆಗಿದೆ. ಹೀಗಾಗಿ ಮುಂಬೈಗೆ ಸೋಲು ಕೂಡ ವರದಾನವಾಗಿದೆ. ಆದರೆ ಈ ಬಾರಿ ಇನ್ನೊಂದು ಪಂದ್ಯ ಸೋತರೂ ಪ್ಲೇ ಆಫ್ ಹಂತಕ್ಕೇರುವುದೇ ಅನುಮಾನವಾಗಲಿದೆ.

ದುಬೈ ಐಪಿಎಲ್ ಅವತರಣಿಕೆಯಲ್ಲಿ ಪಂಜಾಬ್ ಕಿಂಗ್ಸ್ ಮೊದಲ ಪಂದ್ಯವನ್ನು ರಾಜಸ್ಥಾನ ರಾಯಲ್ಸ್ ವಿರುದ್ಧ ವಿರೋಚಿತ ಸೋಲು ಕಂಡಿತ್ತು. ಎರಡನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ 5 ರನ್ ಗೆಲುವು ಕಂಡಿತ್ತು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತಲೆಗೆ 20 ಹೊಲಿಗೆ, ಭುಜಕ್ಕೆ ಬಲವಾದ ಪೆಟ್ಟು! ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡದ್ದಕ್ಕೆ ಕೋಚ್‌ ಮೇಲೆ ಆಟಗಾರರ ಮಾರಣಾಂತಿಕ ಹಲ್ಲೆ!
ಆ ಒಂದು ಫೋಟೋ: ಪಾಪರಾಜಿಗಳ ಮೇಲೆ ಹಾರ್ದಿಕ್ ಪಾಂಡ್ಯ ಕೆಂಡಾಮಂಡಲ!