IPL 2021: ಮುಂಬೈ ವರ್ಸಸ್‌ ಡೆಲ್ಲಿ ಪೈಟ್‌ನಲ್ಲಿ ಮುಂಬೈನದ್ದೇ ಮೇಲುಗೈ..!

By Suvarna NewsFirst Published Apr 20, 2021, 6:12 PM IST
Highlights

ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ನಡುವಿನ ಕಾದಾಟದಲ್ಲಿ ಯಾರ ಕೈ ಮೇಲಾಗಿದೆ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.

ಚೆನ್ನೈ(ಏ.20): 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ 13ನೇ ಪಂದ್ಯದಲ್ಲಿಂದು ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಹಾಗೂ ರನ್ನರ್‌ ಅಪ್‌ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಮುಖಾಮುಖಯಾಗುತ್ತಿದ್ದು, ಈ ಹೈವೋಲ್ಟೇಜ್‌ ಪಂದ್ಯಕ್ಕೆ ಇಲ್ಲಿನ ಎಂ ಎ ಚಿದಂಬರಂ ಸ್ಟೇಡಿಯಂ ಆತಿಥ್ಯವನ್ನು ವಹಿಸಿದೆ.

ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು ಒಟ್ಟು 28 ಬಾರಿ ಮುಖಾಮುಖಿಯಾಗಿದ್ದು, ಮುಂಬೈ ಇಂಡಿಯನ್ಸ್‌ 16 ಬಾರಿ ಗೆಲುವಿನ ರುಚಿ ಕಂಡಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್‌ ಕೇವಲ 12 ಬಾರಿ ಗೆಲುವಿನ ನಗೆ ಬೀರಿದೆ. ಇನ್ನು ಕಳೆದ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಫೈನಲ್ ಸೇರಿದಂತೆ 4 ಬಾರಿ ಮುಖಾಮುಖಿಯಾಗಿ ಸೆಣಸಾಡಿದ್ದವು. 4 ಪಂದ್ಯದಲ್ಲೂ ಡೆಲ್ಲಿ ಎದುರು ಮುಂಬೈ ಪ್ರಾಬಲ್ಯ ಮೆರೆದಿದೆ. ಈ ಹಿಂದಿನ 5 ಮುಖಾಮುಖಿಯಲ್ಲಿ ಡೆಲ್ಲಿ ಎದುರು ಮುಂಬೈ ಇಂಡಿಯನ್ಸ್‌ ಗೆಲುವಿನ ನಗೆ ಬೀರಿದೆ.

ಇನ್ನು ನವೆಂಬರ್‌ 10ರಂದು ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್ ಫೈನಲ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿದ ಮುಂಬೈ ಇಂಡಿಯನ್ಸ್‌ 5 ಬಾರಿಗೆ ಐಪಿಎಲ್‌ ಟ್ರೋಫಿಗೆ ಮುತ್ತಿಕ್ಕಿತ್ತು. ಇದೀಗ ಕಳೆದ ಐಪಿಎಲ್ ಫೈನಲ್‌ ಪಂದ್ಯದ ಸೋಲಿಗೆ ತಿರುಗೇಟು ನೀಡಲು ರಿಷಭ್‌ ಪಂತ್‌ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಎದುರು ನೋಡುತ್ತಿದೆ. 

ಐಪಿಎಲ್ 2021: ಡೆಲ್ಲಿ-ಮುಂಬೈ ನಡುವಿಂದು ಸೂಪರ್ ಫೈಟ್

ಒಂದು ಕಡೆ ಶಿಖರ್ ಧವನ್‌, ಪೃಥ್ವಿ ಶಾ ಹಾಗೂ ರಿಷಭ್‌ ಪಂತ್‌ ಉತ್ತಮ ಫಾರ್ಮ್‌ನಲ್ಲಿದ್ದರೆ, ಮತ್ತೊಂದೆಡೆ ಬೌಲಿಂಗ್‌ನಲ್ಲಿ ರಬಾಡ, ಆವೇಶ್‌ ಖಾನ್‌ ಡೆಲ್ಲಿ ಕ್ಯಾಪಿಟಲ್ಸ್‌ ಅಮೋಘ ವೇಗದ ಬೌಲಿಂಗ್‌ ಸಂಘಟಿಸುತ್ತಿದ್ದಾರೆ. ಇನ್ನು ಮುಂಬೈ ಇಂಡಿಯನ್ಸ್‌ ನಾಯಕ ರೋಹಿತ್ ಶರ್ಮಾ, ಡಿ ಕಾಕ್‌, ಸೂರ್ಯಕುಮಾರ್ ಯಾದವ್, ಇಶನ್‌ ಕಿಶನ್‌ ಸೇರಿದಂತೆ ಟಿ20 ಸ್ಪೆಷಲಿಸ್ಟ್‌ ಬ್ಯಾಟ್ಸ್‌ಮನ್‌ಗಳ ದಂಡೇ ಇದೆ. ಇನ್ನು ಬೌಲಿಂಗ್‌ನಲ್ಲಿ ಬೌಲ್ಟ್, ಬುಮ್ರಾ ಜತೆಗೆ ರಾಹುಲ್ ಚಹರ್ ಕೂಡಾ ಕಮಾಲ್ ಮಾಡುತ್ತಿದ್ದು ಹಾಲಿ ಚಾಂಪಿಯನ್‌ ತಂಡದ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚುವಂತೆ ಮಾಡಿದೆ.

ಸ್ಥಳ: ಚೆನ್ನೈ 
ಪಂದ್ಯ ಆರಂಭ: ಸಂಜೆ 7.30ಕ್ಕೆ 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

click me!