* ಫೈನಲ್ ಗೆ ಏರಲು ಡೆಲ್ಲಿ ಮತ್ತು ಕೋಲ್ಕತ್ತಾ ಹಣಾಹಣಿ
* ಸಿಎಸ್‌ಕೆ ವಿರುದ್ಧ ಸೆಣೆಸಲಿದೆ ಕೆಕೆಆರ್
* ವಿರೋಚಿತ ಹೋರಾಟ ನೀಡಿದ ಡೆಲ್ಲಿ ಕ್ಯಾಪಿಟಲ್ಸ್
* ಅಂತಿಮ ಘಟಕ್ಕೆ ಐಪಿಎಲ್ ಪಂದ್ಯಾವಳಿ
ಶಾರ್ಜಾ(ಅ. 13) IPL 2021 ಫೈನಲ್ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್(Kolkata Knight Riders) ನಡುವೆ ನಡೆಯಲಿದೆ. ರೋಚಕ ಹಣಾಹಣಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಮಣಿಸಿದ ಕೆಕೆಆರ್ ಫೈನಲ್ ಗೆ ಏರಿದೆ.
ಡೆಲ್ಲಿ ನೀಡಿದ್ದ 136 ರನ್ ಟಾರ್ಗೆಟ್ ಬೆನ್ನು ಹತ್ತಿದ ಕೆಕೆಆರ್ ಗೆ ಆರಂಭಿಕ ಜೋಡಿ 96 ರನ್ ಜತೆಯಾಟ ನೀಡಿತು. ಆದರೆ ಕೊನೆ ಹಂತದಲ್ಲಿ ತೀವ್ರ ಕುಸಿತ ಕಂಡ ಕೆಕೆಆರ್ ಸೋಲಿನ ಸುಳಿಗೆ ಸಿಲುಕುವ ಸ್ಥಿತಿಗೆ ಬಂದಿತ್ತು. ಕೊನೆಯ ಎರಡು ಎಸೆತದಲ್ಲಿಆರು ರನ್ ಅಗತ್ಯ ಇತ್ತು. ಈ ವೇಳೆ ಸಿಕ್ಸರ್ ಸಿಡಿಸಿದ ತ್ರಿಪಾಠಿ ಹೀರೋ ಆಗಿ ಹೊರಹೊಮ್ಮಿದರು.
ಕಳೆದ ಬಾರಿ ಫೈನಲ್ ಪ್ರವೇಶ ಮಾಡಿದ್ದ ಡೆಲ್ಲಿಗೆ ಈ ಸಾರಿ ನಿರಾಸೆಯಾಗಿದೆ. ಮೂರು ವಿಕೆಟ್ ಗಳ ಜಯ ಸಂಪಾದನೆಯೊಂದಿಗೆ ಕೆಕೆಆರ್ ಫೈನಲ್ ಪ್ರವೇಶ ಮಾಡಿದೆ. ಕೆಕೆಆರ್ ಪರ ಆರಂಭಿಕ ವೆಂಕಟೇಶ ಅಯ್ಯರ ಅರ್ಧ ಶತಕ ದಾಖಲಿಸಿದರು. ಗಿಲ್ ಸಹ ಅರ್ಧಶತದ ಸನಿಹ ಎಡವಿದರು. ಇದಾದ ಮೇಲೆ ಬಂದ ಬ್ಯಾಟ್ಸ ಮನ್ ಗಳನ್ನು ಡೆಲ್ಲಿ ಹುಡುಗರು ಕಟ್ಟಿಹಾಕಿದ್ದರು.
ಸನ್ ರೈಸರ್ಸ್ ವಿರುದ್ಧ ವಾರ್ನರ್ ಬೇಸರ
ಟಾಸ್ ಗೆದ್ದ ಕೋಲ್ಕತ್ತಾ ಡೆಲ್ಲಿಗೆ ಮೊದಲು ಬ್ಯಾಟಿಂಗ್ ಬಿಟ್ಟಿಕೊಟ್ಟಿತ್ತು. ಶಾರ್ಜಾದ ಸ್ಲೋ ಪಿಚ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕೋಲ್ಕತ್ತಾಗೆ 136 ರನ್ ಟಾರ್ಗೆಟ್ ನೀಡಿತ್ತು.
ಮಾರ್ಗನ್ ನೇತೃತ್ವದ ತಂಡ ಬಿಗಿ ಬೌಲಿಂಗ್ ದಾಳಿ ಸಂಘಟಿಸಿತು. ಡೆಲ್ಲಿಯ ಯಾವ ಬ್ಯಾಟ್ಸ್ ಮನ್ ಗಳಿಗೂ ಅಬ್ಬರಿಸಲು ಬಿಡಲಿಲ್ಲ. ಹೆಟ್ಮಾಯರ್ ಔಟ್ ಎಂದು ಕ್ರೀಡಾಂಗಣದ ಹೊರಕ್ಕೆ ಹೋಗಿದ್ದರು. ಆದರೆ ನೋ ಬಾಲ್ ಆದ ಕಾರಣ ಅವರಿಗೆ ಮತ್ತೆ ಬ್ಯಾಟಿಂಗ್ ಮಾಡಲು ಅವಕಾಶ ಮಾಡಿಕೊಡಲಾಯಿತು. ಬಂದ ನಂತರ ಎರಡು ಸಿಕ್ಸರ್ ಬಾರಿಸಿ ತಂಡದ ಮೊತ್ತ ಏರಿಸುವ ಕೆಲಸ ಮಾಡಿದ್ದರು.
ಆರಂಭಿಕ ಶಿಖರ್ ಧವನ್ ಇನಿಂಗ್ಸ್ ಕಾಯ್ದುಕೊಂಡರು. ಧವನ್, 36, ಪೃಥ್ವಿ ಶಾ ಮತ್ತು ಸ್ಟೋನಿಸ್18, ಹೆಟ್ಮಾಯರ್ 19 ರನ್ ಗಳಿಸಿದರು. ವರುಣ್ ಚಕ್ರವರ್ತಿ ಎರಡು ವಿಕೆಟ್ ಪಡೆದುಕೊಂಡರೆ ಆರ್ ಸಿಬಿ ವಿರುದ್ಧ ಮ್ಯಾಜಿಕ್ ಮಾಡಿದ್ದ ನರೈನ್ ಗೆ ವಿಕೆಟ್ ಇಲ್ಲ. ಕೊನೆ ಹಂತದವರೆಗೂ ಕೋಲ್ಕತ್ತಾ ಬಿಗಿ ಬೌಲಿಂಗ್ ದಾಳಿಯನ್ನೇ ಸಂಘಟನೆ ಮಾಡಿತ್ತು.
ಕೊನೆಯ ಓವರ್ ನಲ್ಲಿ ಏಳು ರನ್ ಬೇಕಿದ್ದು ಅಶ್ವಿನ್ ಬಳಿ ಚೆಂಢಿತ್ತು. ಎರಡು ವಿಕೆಟ್ ಗಳನ್ನು ಅವರು ಪಡೆದುಕೊಂಡರು. ಆದರೆ ಸಿಕ್ಸರ್ ಸಿಡಿಸಿದ ತ್ರಿಪಾಠಿ ಕೆಕೆಆರ್ ಗೆ ಗೆಲುವು ತಂದುಕೊಟ್ಟರು. ಮಿಸ್ ಫಿಲ್ಡಿಂಗ್ ಮತ್ತು ಕೆಲವು ಕ್ಯಾಚ್ ಕೈಚೆಲ್ಲಿದ್ದು ಡೆಲ್ಲಿಗೆ ಮಾರಕವಾಯಿತು.
https://kannada.asianetnews.com/cricket-sports/ipl-2021-was-not-explained-why-i-was-dropped-as-captain-says-david-warner-kvn-r0wpn8