IPL 2021; ಕೆಕೆಆರ್ ಗೆ ಸುಲಭ ಟಾರ್ಗೆಟ್ ನೀಡಿದ ಡೆಲ್ಲಿ.. ಸ್ಲೋ ಪಿಚ್!

By Suvarna NewsFirst Published Oct 13, 2021, 9:32 PM IST
Highlights

*ಫೈನಲ್ ಗೆ ಏರಲು ಡೆಲ್ಲಿ ಮತ್ತು ಕೋಲ್ಕತ್ತಾ ಹಣಾಹಣಿ 
* ಕೆಕೆಆರ್ ಗೆ 136 ರನ್ ಟಾರ್ಗೆಟ್
* ಇಲ್ಲಿ ಗೆದ್ದವರು ಫೈನಲ್  ನಲ್ಲಿ ಸಿಎಸ್‌ ಕೆ ವಿರುದ್ಧ ಸೆಣೆಸಲಿದ್ದಾರೆ
* ಅಂತಿಮ ಘಟಕ್ಕೆ ಐಪಿಎಲ್ ಪಂದ್ಯಾವಳಿ

ಶಾರ್ಜ್(ಅ. 13)  IPL 2021 ಫೈನಲ್ ಗೆ ಏರಲು ಡೆಲ್ಲಿ ಕ್ಯಾಪಿಟಲ್ಸ್ (Delhi Capitals)ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್(Kolkata Knight Riders) ಹಣಾಹಣಿಯಲ್ಲಿವೆ. ಟಾಸ್ ಗೆದ್ದ ಕೋಲ್ಕತ್ತಾ ಡೆಲ್ಲಿಗೆ ಮೊದಲು ಬ್ಯಾಟಿಂಗ್ ಬಿಟ್ಟಿಕೊಟ್ಟಿತ್ತು. ಶಾರ್ಜಾದ ಸ್ಲೋ ಪಿಚ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕೋಲ್ಕತ್ತಾಗೆ  136 ರನ್ ಟಾರ್ಗೆಟ್ ನೀಡಿದೆ.

ಮಾರ್ಗನ್ ನೇತೃತ್ವದ ತಂಡ ಬಿಗಿ ಬೌಲಿಂಗ್ ದಾಳಿ ಸಂಘಟಿಸಿತು. ಡೆಲ್ಲಿಯ ಯಾವ ಬ್ಯಾಟ್ಸ್ ಮನ್ ಗಳಿಗೂ ಅಬ್ಬರಿಸಲು ಬಿಡಲಿಲ್ಲ.  ಹೆಟ್ಮಾಯರ್ ಔಟ್ ಎಂದು ಕ್ರೀಡಾಂಗಣದ ಹೊರಕ್ಕೆ ಹೋಗಿದ್ದರು. ಆದರೆ ನೋ ಬಾಲ್ ಆದ ಕಾರಣ ಅವರಿಗೆ ಮತ್ತೆ ಬ್ಯಾಟಿಂಗ್ ಮಾಡಲು ಅವಕಾಶ ಮಾಡಿಕೊಡಲಾಯಿತು. ಬಂದ ನಂತರ ಎರಡು ಸಿಕ್ಸರ್ ಬಾರಿಸಿ ತಂಡದ ಮೊತ್ತ ಏರಿಸುವ ಕೆಲಸ ಮಾಡಿದರು.

ಕ್ರಿಶ್ಚಿಯನ್ ಪತ್ನಿಯನ್ನು ಟೀಕಿಸಿದವರ ಮೇಲೆ ಮ್ಯಾಕ್ಸ್ ವೆಲ್ ಕೆಂಡ

ಆರಂಭಿಕ ಶಿಖರ್ ಧವನ್ ಇನಿಂಗ್ಸ್ ಕಾಯ್ದುಕೊಂಡರು. ಧವನ್, 36, ಪೃಥ್ವಿ ಶಾ ಮತ್ತು ಸ್ಟೋನಿಸ್18,  ಹೆಟ್ಮಾಯರ್  19  ರನ್ ಗಳಿಸಿದರು.  ವರುಣ್ ಚಕ್ರವರ್ತಿ ಎರಡು ವಿಕೆಟ್ ಪಡೆದುಕೊಂಡರೆ ಆರ್ ಸಿಬಿ ವಿರುದ್ಧ ಮ್ಯಾಜಿಕ್ ಮಾಡಿದ್ದ ನರೈನ್ ಗೆ ವಿಕೆಟ್ ಇಲ್ಲ. ಕೊನೆ ಹಂತದವರೆಗೂ ಕೋಲ್ಕತ್ತಾ ಬಿಗಿ ಬೌಲಿಂಗ್ ದಾಳಿಯನ್ನೇ ಸಂಘಟನೆ ಮಾಡಿತ್ತು.

ಈ ಪಂದ್ಯದಲ್ಲಿ ಗೆದ್ದವರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಪ್ ಗಾಗಿ ಸೆಣೆಸಲಿದೆ.  ಈಗಾಗಲೇ ಫೈನಲ್ ತಲುಪಿರುವ ಸಿಎಸ್‌ಕೆ  ತನ್ನ ಎದುರಾಳಿ ಯಾರಾಗಲಿದ್ದಾರೆ ಎಂದು ನೋಡುತ್ತಿದೆ. 

ಸ್ಪಿನ್ ಬೌಲಿಂಗ್ ಎದುರು ರನ್ ಗಳಿಸುವುದು ಕಷ್ಟಸಾಧ್ಯವಾಗಿದ್ದು  ಡೆಲ್ಲಿ ಪರ ಅಕ್ಷರ್ ಪಟೇಲ್ ಮತ್ತು ಅಶ್ವಿನ್ ಇದ್ದು ಮ್ಯಾಜಿಕ್ ಮಾಡುತ್ತಾರೆಯೇ  ಎಂಬುದನ್ನು ಕಾದು ನೋಡಬೇಕಿದೆ. 

 

 

click me!