IPL 2021: ರಾಹುಲ್ ಹಾಫ್ ಸೆಂಚುರಿ, ಶಾರುಖ್ ಭರ್ಜರಿ ಸಿಕ್ಸರ್‌ನಿಂದ ಪಂಜಾಬ್‌ಗೆ 5 ವಿಕೆಟ್ ಗೆಲುವು

Published : Oct 01, 2021, 11:39 PM IST
IPL 2021: ರಾಹುಲ್ ಹಾಫ್ ಸೆಂಚುರಿ, ಶಾರುಖ್ ಭರ್ಜರಿ ಸಿಕ್ಸರ್‌ನಿಂದ ಪಂಜಾಬ್‌ಗೆ 5 ವಿಕೆಟ್ ಗೆಲುವು

ಸಾರಾಂಶ

ಸಿಕ್ಸರ್ ಸಿಡಿಸಿ ಪಂದ್ಯ ಫಿನೀಶ್ ಮಾಡಿದ ಶಾರುಖ್ ರಾಹುಲ್ ಆಟಕ್ಕೆ ಸೋಲೊಪ್ಪಿಕೊಂಡ ಕೆಕೆಆರ್ ಪಂಜಾಬ್ ಕಿಂಗ್ಸ್‌ಗೆ 5 ವಿಕೆಟ್ ಗೆಲುವು ಕೋಲ್ಕತಾ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಹೋರಾಟ

ದುಬೈ(ಅ.01): IPL 2021ರ ಎರಡನೇ ಭಾಗದಲ್ಲಿ ನಿರಾಸೆಗಳಿಂದಲೇ ಪಂದ್ಯ ಮುಗಿಸಿದ್ದ ಪಂಜಾಬ್ ಕಿಂಗ್ಸ್(Punjab Kings) ಇದೀಗ ಭರ್ಜರಿ ಕಮ್‌ಬ್ಯಾಕ್ ಮಾಡಿದೆ. ಕೋಲ್ಕತಾ ನೈಟ್ ರೈಡರ್ಸ್(Kolkata Knight Riders) ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 5 ವಿಕೆಟ್ ಗೆಲುವು ಕಂಡಿದೆ. ಕೆಎಲ್ ರಾಹುಲ್(KL Rahul) ಜವಾಬ್ದಾರಿಯುತ ಬ್ಯಾಟಿಂಗ್‌ನಿಂದ ಕೆಕೆಆರ್ ತಂಡ ಸೋಲಿಗೆ ಶರಣಾಗಿದೆ. 

IPL 2021 ಧೋನಿ ಒಮ್ಮೆ ತುಂಬಾ ಸಿಟ್ಟಾಗಿದ್ದರು, ಅಶ್ವಿನ್‌ ಬಾಯಿ ಮುಚ್ಚಿಸಿದ್ದರು: ವಿರೇಂದ್ರ ಸೆಹ್ವಾಗ್‌..!

ಪಂಜಾಬ್ ಕಿಂಗ್ಸ್ ಗೆಲುವುಗೆ 166 ರನ್ ಟಾರ್ಗೆಟ್ ಪಡೆದಿತ್ತು. ಟಿ20 ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್ ಹೊಂದಿರುವ ಪಂಜಾಬ್ ತಂಡಕ್ಕೆ ಕಠಿಣ ಸವಾಲು ಆಗಿರಲಿಲ್ಲ. ಆದರೆ ಸದ್ಯದ ಫಾರ್ಮ್ ನೋಡಿದರೆ ಪಂಜಾಬ್‌ಗೆ ಇದು ಬೃಹತ್ ಮೊತ್ತವಾಗಿತ್ತು. ಚೇಸಿಂಗ್ ಇಳಿದ ಪಂಜಾಬ್ ತಂಡ, ಕೆಕೆಆರ್ ಲೆಕ್ಕಾಚಾರ ಉಲ್ಟಾ ಮಾಡಿತು. ನಾಯಕ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಉತ್ತಮ ಆರಂಭ ನೀಡಿದರು. ವಿಕೆಟ್ ಕಬಳಿಸುವ ಯತ್ನದಲ್ಲಿದ್ದ ಕೆಕೆಆರ್ ಹೆಚ್ಚು ರನ್ ಹರಿದುಹೋಗದಂತೆ ನೋಡಿಕೊಳ್ಳಲು ಮುಂದಾಯಿತು.

ಪಂಜಾಬ್ ಕಿಂಗ್ಸ್ ಬಹುತೇಕ ಪಂದ್ಯದಲ್ಲಿ ಉತ್ತಮ ಆರಂಭ, ಬೃಹತ್ ಜೊತೆಯಾಟ ನೀಡಿ ಕೊನೆಗೆ ಪಂದ್ಯ ಸೋತ ಉದಾಹರಣೆಗಳು ಹಲವಿದೆ. ಇತ್ತ ರಾಹುಲ್ ಹಾಗೂ ಮಯಾಂಕ್ ಮೊದಲ ವಿಕೆಟ್‌ಗೆ 70  ರನ್ ಜೊತೆಯಾ ನೀಡಿದರು. 27 ಎಸೆತದಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್ ಸಿಡಿಸಿದ ಮಯಾಂಗ್ 40 ರನ್ ಸಿಡಿಸಿ ಔಟಾದರು.

IPL 2021 : ಗಂಡನನ್ನು ದುಬೈನಲ್ಲಿ ಬಿಟ್ಟು ಮುಂಬೈಗೆ ಮರಳಿದ ಅನುಷ್ಕಾ!

ನಿಕೋಲಸ್ ಪೂರನ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್. ವರುಣ್ ಚಕ್ರವರ್ತಿ ಮೋಡಿಗೆ ಪೂರನ್ 12 ರನ್ ಸಿಡಿಸಿ ನಿರ್ಗಮಿಸಿದರು. ನಾಯಕ ಕೆಎಲ್ ರಾಹುಲ್ ಹೋರಾಟ ಮುಂದುವರಿಸಿದರು. ಆ್ಯಡಿನ್ ಮರ್ಕ್ರಾಮ್ ಜೊತೆ ಸೇರಿದ ರಾಹುಲ್ ದಿಟ್ಟ ಹೋರಾಟ ನೀಡಿದರು. ಆ್ಯಡಿನ್ ಹೋರಾಟ 18 ರನ್‌ಗೆ ಅಂತ್ಯವಾಯಿತು. 

ಗೆಲುವಿನ ಸನಿಹದಲ್ಲಿ ಎಡವುದು ಪಂಜಾಬ್ ಕಿಂಗ್ಸ್ ಸಾಮಾನ್ಯವಾಗಿದೆ. 3ನೇ ವಿಕೆಟ್ ಪತನ ಪಂಜಾಬ್ ಅಭಿಮಾನಿಗಳಲ್ಲಿ ಇದೇ ಆತಂಕ ಕಾಡಿತ್ತು.  ಇದರ ಬೆನ್ನಲ್ಲೇ ದೀಪಕ್ ಹೂಡ 3 ರನ್ ಸಿಡಿಸಿ ಪೆವಿಲಿಯನ್ ಸೇರಿದಾಗ ಆತಂಕ ಹೆಚ್ಚಾಯಿತು. ನಿರಾಯಾಸವಾಗಿ ಗೆಲ್ಲು ಪಂದ್ಯೆ ಮತ್ತೆ ಕೈಚೆಲುತ್ತಾ ಪಂಜಾಬ್ ಅನ್ನೋ ಚರ್ಚೆ ಕೂಡ ಆರಂಭಗೊಂಡಿತು.

ಅಂತಿಮ 12 ಎಸೆತದಲ್ಲಿ ಪಂಜಾಬ್ ಗೆಲುವಿಗೆ 15 ರನ್ ಅವಶ್ಯಕತೆ ಇತ್ತು. ರಾಹುಲ್ ಜೊತೆ ಶಾರುಖ್ ಖಾನ್ ಉತ್ತಮ ಹೋರಾಟ ನೀಡಿದರು.  ರಾಹುಲ್,  ಶಿವಂ ಮಾವಿ ಎಸೆತದಲ್ಲಿ ತ್ರಿಪಾಠಿಗೆ ಕ್ಯಾಚ್ ನೀಡಿದರು. ಆದರೆ ಕ್ಯಾಚ್ ಹಿಡಿದ ರಭಸಕ್ಕೆ ಬಾಲ್ ಗ್ರೌಂಡ್‌ಗೆ ತಾಗಿತ್ತು. ಹೀಗಾಗಿ ರಾಹುಲ್ ಕ್ರೀಸ್‌ನಲ್ಲೇ ಉಳಿದುಕೊಂಡರು. ಅಂತಿಮ 6 ಎಸೆತದಲ್ಲಿ ಪಂಜಾಬ್ ಗೆಲುವಿಗೆ ಕೇವಲ 5 ರನ್ ಬೇಕಿತ್ತು.

IPL 2021 -RCB ಪ್ಲೇಯರ್ಸ್‌ನ ಪೂಲ್‌ ಪಾರ್ಟಿ ಫೋಟೋ ವೈರಲ್‌!

ಇನ್ನೇನು ಪಂಜಾಬ್ ಗೆದ್ದೇ ಬಿಡ್ತು ಅನ್ನೋ ಲೆಕ್ಕಾಚಾರ ಆರಂಭಗೊಂಡಿತು. ಆದರೆ ಹಾವು ಏಣಿ ಆಟ ಮುಗಿದಿರಲಿಲ್ಲಯ 19.2 ಎಸೆತದಲ್ಲಿ ರಾಹುಲ್ ವಿಕೆಟ್ ಪತನಗೊಂಡಿತು. 67 ರನ್ ಸಿಡಿಸಿ ಔಟಾದರು. ರಾಹುಲ್ ನಿರ್ಗಮಿಸಿದ ಬಳಿಕ ಪಂಜಾಬ್ ಗೆಲುವಿಗೆ ಅಂತಿಮ 4 ಎಸೆತದಲ್ಲಿ 4 ರನ್ ಬೇಕಿತ್ತು. ಶಾರುಖ್ ಖಾನ್ ಭರ್ಜರಿ ಸಿಕ್ಸರ್ ಸಿಡಿಸಿ ಪಂಜಾಬ್‌ಗೆ 5 ವಿಕೆಟ್ ರೋಚಕ ಗೆಲುವು ತಂದುಕೊಟ್ಟರು.  ಇನ್ನು 3 ಎಸೆತ ಬಾಕಿ ಇರುವಂತೆ ಪಂಜಾಬ್ ಗೆಲುವಿನ ಕೇಕೆ ಹಾಕಿತು.

ಅಂಕಪಟ್ಟಿ: 
KKR ಹಾಗೂ PBKS ನಡುವಿನ ಪಂದ್ಯಕ್ಕೂ ಮೊದಲು ಕೋಲ್ಕತಾ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದರೆ, ಪಂಜಾಬ್ 6ನೇ ಸ್ಥಾನದಲ್ಲಿತ್ತು.  ಆದರೆ ಪಂಜಾಬ್ ಗೆಲುವಿನ ಬಳಿಕ ಒಟ್ಟು 10 ಅಂಕಗಳೊಂದಿಗೆ 5ನೇ ಸ್ಥಾನಕ್ಕೇರಿತು. 5ನೇ ಸ್ಥಾನದಲ್ಲಿದ್ದ ಮುಂಬೈ ಇಂಡಿಯನ್ಸ್ 6ನೇ ಸ್ಥಾನಕ್ಕೆ ಕುಸಿಯಿತು. ಇತ್ತ 10 ಅಂಕ ಸಂಪಾದಿಸಿರುವ ಕೋಲ್ಕತಾ ನೈಟ್ ರೈಡರ್ಸ್ 4ನೇ ಸ್ಥಾನದಲ್ಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?