* 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಹೋರಾಟ ಅಂತ್ಯ
* ಎಲಿಮಿನೇಟರ್ ಪಂದ್ಯದಲ್ಲಿ ಕೆಕೆಆರ್‌ಗೆ ಶರಣಾದ ಆರ್‌ಸಿಬಿ
* ಆರ್‌ಸಿಬಿ ಕ್ರಿಕೆಟಿಗರಾದ ಮ್ಯಾಕ್ಸ್‌ವೆಲ್, ಡೇನಿಯಲ್ ಕ್ರಿಶ್ಚಿಯನ್ ಮೇಲೆ ಟೀಕಾ ಪ್ರಹಾರ
ಶಾರ್ಜಾ(ಅ.13): ಎಲಿಮಿನೇಟರ್ ಪಂದ್ಯದಲ್ಲಿ ಸೋತು 14ನೇ ಆವೃತ್ತಿಯ ಐಪಿಎಲ್ (IPL 2021) ಟೂರ್ನಿಯಿಂದ ಆರ್‌ಸಿಬಿ ಹೊರಬೀಳುತ್ತಿದ್ದಂತೆ ಸಾಮಾಜಿಕ ತಾಣಗಳಲ್ಲಿ ತಂಡದ ಕೆಲ ಅಭಿಮಾನಿಗಳು ಆಲ್ರೌಂಡರ್‌ಗಳಾದ ಡ್ಯಾನ್ ಕ್ರಿಶ್ಚಿಯನ್ (Dan Christian) ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್‌ರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.
ತಮ್ಮ ಗರ್ಭಿಣಿ ಪತ್ನಿಯ ಬಗೆಯೂ ಕೀಳು ಪದಗಳನ್ನು ಬಳಕೆ ಮಾಡಿರುವುದಕ್ಕೆ ಡೇನಿಯಲ್ ಕ್ರಿಶ್ಚಿಯನ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ‘ನಾನು ಸರಿಯಾಗಿ ಆಡಲಿಲ್ಲ, ನಿಜ. ಆದರೆ ನನ್ನ ಪತ್ನಿಯನ್ನೇಕೆ ದೂಷಿಸುತ್ತಿದ್ದೀರಿ’ ಎಂದು ಇನ್‌ಸ್ಟಾಗ್ರಾಂನಲ್ಲಿ ಕ್ರಿಶ್ಚಿಯನ್ ಪ್ರಶ್ನಿಸಿದ್ದಾರೆ.
IPL 2021 ಸೋತರೂ, ಗೆದ್ದರೂ ಎಂದೆಂದಿಗೂ ಬೆಂಗಳೂರು-ವಿರಾಟ್‌ಗೆ ನಮ್ಮ ಸಪೋರ್ಟ್ ಎಂದ RCB ಫ್ಯಾನ್ಸ್..!
‘ನಾವೂ ಮನುಷ್ಯರೇ. ಪ್ರತಿ ದಿನ ನಮ್ಮ ಆಟದ ಗುಣಮಟ್ಟವನ್ನು ಹೆಚ್ಚಿಸಿಕೊಂಡು ತಂಡಕ್ಕಾಗಿ ಆಡುತ್ತೇವೆ. ಈ ರೀತಿ ಅವಾಚ್ಯ ಪದ ಬಳಕೆ ಬೇಡ. ಒಳ್ಳೆಯ ಮನುಷ್ಯರಾಗಿ’ ಎಂದು ಮ್ಯಾಕ್ಸ್‌ವೆಲ್ ಟ್ವೀಟರ್‌ನಲ್ಲಿ ಬರೆದುಕೊಂಡಿದ್ದಾರೆ.
14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನದ ಮೂಲಕ ವಿರಾಟ್ ಕೊಹ್ಲಿ (Virat Kohli) ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಮೂರನೇ ತಂಡವಾಗಿ ಪ್ಲೇ ಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿತ್ತು. ಅಕ್ಟೋಬರ್ 11ರಂದು ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆದ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಕೆಕೆಆರ್ ಎದುರು 4 ವಿಕೆಟ್‌ಗಳ ಅಂತರದ ರೋಚಕ ಸೋಲು ಅನುಭವಿಸಿತ್ತು.
ಟೂರ್ನಿಯುದ್ದಕ್ಕೂ ಆರ್‌ಸಿಬಿ ಪರ ಅದ್ಭುತ ಪ್ರದರ್ಶನ ತೋರಿದ್ದ ಆರ್‌ಸಿಬಿ ತಂಡದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell), ಕೆಕೆಆರ್ ಎದುರಿನ ಎಲಿಮಿನೇಟರ್ ಪಂದ್ಯದಲ್ಲಿ 18 ಎಸೆತಗಳನ್ನು ಎದುರಿಸಿ ಕೇವಲ 15 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದರು. ಇನ್ನು ಬೌಲಿಂಗ್‌ನಲ್ಲಿ ಡೇನಿಯಲ್ ಕ್ರಿಶ್ಚಿಯನ್ ಒಂದೇ ಓವರ್‌ನಲ್ಲಿ ನರೈನ್‌ಗೆ 3 ಸಿಕ್ಸರ್ ಚಚ್ಚಿಸಿಕೊಂಡಿದ್ದರು. ಇದು ಪಂದ್ಯ ಕೆಕೆಆರ್ ಪರ ವಾಲುವಂತೆ ಮಾಡಿತ್ತು. ಹೀಗಾಗಿ ಕೆಲ ವಿಕೃತ ಅಭಿಮಾನಿಗಳು ಅಸಭ್ಯ ಪದ ಬಳಕೆಯ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಸೇರಿದಂತೆ, ಕೆಕೆಆರ್ ಹಾಗೂ ಕೆಕೆಆರ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಕೂಡಾ ಡೇನಿಯಲ್ ಕ್ರಿಶ್ಚಿಯನ್ ಅವರ ಬೆಂಬಲಕ್ಕೆ ನಿಂತಿದ್ದು, ಆಟದಲ್ಲಿ ಸೋಲು ಗೆಲುವು ಸಾಮಾನ್ಯ. ಹಾಗಂತ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಅಸಭ್ಯ ಟೀಕೆಗಳನ್ನು ಸಹಿಸಲು ಸಾಧ್ಯವಿಲ್ಲ. ನಿಮ್ಮ ಜತೆ ನಾವಿದ್ದೇವೆ ಎಂದು ಟ್ವೀಟ್ ಮಾಡುವ ಮೂಲಕ ನೈತಿಕ ಬೆಂಬಲ ನೀಡಿದ್ದಾರೆ.
We’re 100% with you and we will not tolerate online abuse towards players and especially towards their families and loved ones. pic.twitter.com/w2UvpyJ6aD
— Royal Challengers Bangalore (@RCBTweets)Say NO to hate-mongering.
Cricketers are subjected to online-abuse way too often. It's high time we take a strong stand against it.
Victories and Losses are a part of any sport. We stand by you . We've been there too 💜❤️ pic.twitter.com/eCUGroEbyI
ವಿರಾಟ್ ಕೊಹ್ಲಿ ಹಲವರ ಬದುಕು ಬದಲಿಸಿದ್ದಾರೆ: ಎಬಿ ಡಿವಿಲಿಯರ್ಸ್
ದುಬೈ: ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ ಸೋತು ಐಪಿಎಲ್ 14ನೇ ಆವೃತ್ತಿಯಿಂದ ಹೊರಬೀಳುತ್ತಿದ್ದಂತೆ, ತಂಡದ ನಾಯಕನ ಸ್ಥಾನದಿಂದ ವಿರಾಟ್ ಕೊಹ್ಲಿ ಅಧಿಕೃತವಾಗಿ ಕೆಳಗಿಳಿದರು. ಬಳಿಕ ಡ್ರೆಸ್ಸಿಂಗ್ ಕೋಣೆಯಲ್ಲಿ ಕೊಹ್ಲಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಎಬಿ ಡಿ ವಿಲಿಯರ್ಸ್ (Ab de Villiers), ‘ನಾಯಕ ಕೊಹ್ಲಿ ಜೊತೆಯಲ್ಲಿ ಇಷ್ಟು ವರ್ಷಗಳ ಕಾಲ ಆಡಿದ್ದೇನೆ. ‘‘ಕೃತಜ್ಞ ’’ ಎನ್ನುವ ಒಂದೇ ಒಂದು ಪದಕ ನನ್ನ ಮನಸಿಗೆ ತೋಚುತ್ತದೆ. ಅವರ ನಾಯಕತ್ವದಲ್ಲಿ ಆಡಿದ್ದು ನಮ್ಮ ಅದೃಷ್ಟ’’ ಎಂದಿದ್ದಾರೆ.
IPL 2021: ಆರ್‌ಸಿಬಿ ನಾಯಕತ್ವಕ್ಕೆ ಭಾವನಾತ್ಮಕವಾಗಿ ವಿದಾಯ ಹೇಳಿದ ವಿರಾಟ್ ಕೊಹ್ಲಿ
‘ವಿರಾಟ್ ನಿಮಗೇ ತಿಳಿಯದೆ ನೀವು ಅನೇಕರ ಜೀವನವನ್ನು ಬದಲಿಸಿದ್ದೀರಿ. ನೀವು ಬಹಳಷ್ಟು ಆಟಗಾರರಿಗೆ ಸ್ಫೂರ್ತಿ’ ಎಂದು ಎಬಿಡಿ ಭಾವನಾತ್ಮಕವಾಗಿ ಹೇಳಿದರು. ಇದೇ ವೇಳೆ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದಿದ್ದರಿಂದ ಇನ್ಮುಂದೆ ಅಂಪೈರಗಳು ನೆಮ್ಮದಿಯಿಂದ ನಿದ್ರಿಸಬಹುದು ಎಂದು ತಮಾಷೆ ಮಾಡಿದರು.