IPL 2021: ಕೆಕೆಆರ್ ವಿರುದ್ದ ಮುಗ್ಗರಿಸಿದ ಕೊಹ್ಲಿ ಸೈನ್ಯದ ನೆಟ್ ರನ್‌ರೇಟ್ ಕುಸಿತ!

Published : Sep 20, 2021, 10:39 PM IST
IPL 2021: ಕೆಕೆಆರ್ ವಿರುದ್ದ ಮುಗ್ಗರಿಸಿದ ಕೊಹ್ಲಿ ಸೈನ್ಯದ ನೆಟ್ ರನ್‌ರೇಟ್ ಕುಸಿತ!

ಸಾರಾಂಶ

ಐಪಿಎಲ್ 2021 ಎರಡನೇ ಭಾಗದಲ್ಲಿ ಆರ್‌ಸಿಬಿ ಸೋಲಿನೊಂದಿಗೆ ಆರಂಭ ಕೆಕೆಆರ್ ವಿರುದ್ಧ ಕೊಹ್ಲಿ ಸೈನ್ಯಕ್ಕೆ ಸೋಲು ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಜಿಗಿದ ಕೆಕೆಆರ್

ಅಬು ಧಾಬಿ(ಸೆ.20): ಐಪಿಎಲ್ 2021(IPL 2021)ಟೂರ್ನಿ ಎರಡನೇ ಭಾಗದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(royal challengers bangalore)ತಂಡ ಜರ್ನಿ ಸೋಲಿನೊಂದಿಗೆ ಆರಂಭಗೊಂಡಿದೆ. ಕೋಲ್ಕತಾ ನೈಟ್ ರೈಡರ್ಸ್( kolkata knight riders)ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಹೀನಾಯ ಸೋಲಿಗೆ ಗುರಿಯಾಗಿದೆ.

 

IPL 2021: ಬ್ಯಾಟಿಂಗ್‌ನಲ್ಲಿ ಮುಗ್ಗರಿಸಿದರೂ ಹೊಸ ಮೈಲಿಗಲ್ಲು ನಿರ್ಮಿಸಿದ ನಾಯಕ ವಿರಾಟ್!

93 ರನ್ ಟಾರ್ಗೆಟ್ ಬೆನ್ನಟ್ಟಿದ ಕೆಕೆಆರ್(KKR)ಯಾವುದೇ ಹಂತದಲ್ಲಿ ಆತಂಕ ಎದುರಿಸಲಿಲ್ಲ.  ಆರಂಭಿಕರಾದ ಶುಭಮನ್ ಗಿಲ್ ಹಾಗೂ ವೆಂಕಟೇಶ್ ಅಯ್ಯರ್ ಉತ್ತಮ ಒಪನಿಂಗ್ ಕೆಕೆಆರ್ ತಂಡದ ಸುಲಭ ಗೆಲುವನ್ನು ಖಚಿತಪಡಿಸಿತು. ಮೊದಲ ವಿಕೆಟ್‌ಗೆ ಈ ದೋಡಿ 82 ರನ್ ಜೊತೆಯಾಟ ನೀಡಿತು

 

ವಿರಾಟ್ ಕೊಹ್ಲಿ ಬಳಿಕ RCB ನಾಯಕರಾಗೋರು ಯಾರು..? ಇಲ್ಲಿವೆ 5 ಉತ್ತಮ ಆಯ್ಕೆಗಳು..!

ವೆಂಕಟೇಶ್ ಅಯ್ಯರ್ 41 ರನ್ ಸಿಡಿಸಿ ಔಟಾದರು. ಮೊದಲ ವಿಕೆಟ್ ಕಳೆದುಕೊಂಡ ಕೆಕೆಆರ್ ತಂಡದಲ್ಲಿ ಯಾವುದೇ ಆತಂಕ ಎದುರಾಗಲಿಲ್ಲ. ಕಾರಣ ಅಷ್ಟರಲ್ಲಾಗಲೇ ಕೆಕೆಆರ್ ಗೆಲುವಿನ ಹೊಸ್ತಿಲಲ್ಲಿತ್ತು. ಗಿಲ್ ಅಜೇಯ 48 ರನ್  ಸಿಡಿಸಿದರು ಈ ಮೂಲಕ ಕೋಲ್ಕತಾ ನೈಟ್ ರೈಡರ್ಸ್ 10 ಓವರ್‌ಗಳಲ್ಲಿ 9 ವಿಕೆಟ್ ಭರ್ಜರಿ ಗೆಲುವು ಕಂಡಿತು.

 

IPL 2021: ಆರ್‌ಸಿಬಿ ಕುರಿತಂತೆ ಮುತ್ತಿನಂಥ ಮಾತನಾಡಿದ ಕಿಂಗ್‌ ಕೊಹ್ಲಿ..!

ಭರ್ಜರಿ ಗೆಲುವಿನೊಂದಿಗೆ ಕೆಕೆಆರ್ ತಂಡ ಅಂಕಪಟ್ಟಿಯಲ್ಲಿ 7ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಜಿಗಿದಿದೆ. ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಆದರೆ ನೆಟ್ ರನ್‌ರೇಟ್ ಪ್ಲಸ್‌ನಿಂದ ಮೈನಸ್ ಆಗಿದೆ.

BREAKING: ಐಪಿಎಲ್ 2021ರ ಬಳಿಕ RCB ನಾಯಕತ್ವಕ್ಕೆ ಕೊಹ್ಲಿ ಗುಡ್‌ಬೈ!

ಐಪಿಎಲ್‌ನಲ್ಲಿ ಹೆಚ್ಚಿನ ಎಸೆತಗಳು ಬಾಕಿ ಇರುವಾಗ ಗೆಲುವು ಸಾಧಿಸಿದ ತಂಡ:
87 ಮುಂಬೈ v ಕೆಕೆಆರ್, ಮುಂಬೈ, 2008
76 ಕೊಚ್ಚಿ ಟಸ್ಕರ್ಸ್ v ರಾಜಸ್ಥಾನ, ಇಂದೋರ್, 2011
73 ಪಂಜಾಬ್ v ದೆಹಲಿ, ಮೊಹಾಲಿ,  2017
71 ಬೆಂಗಳೂರು v ಪಂಜಾಬ್, ಇಂದೋರ್,2018
60 ಕೆಕೆಆರ್ v ಆರ್‌ಸಿಬಿ, ಅಬುಧಾಬಿ,2021 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Mock Auction: 30.5 ಕೋಟಿ ರೂಪಾಯಿ ದಾಖಲೆ ಮೊತ್ತಕ್ಕೆ ಕೆಕೆಆರ್‌ಗೆ ಕ್ಯಾಮರೂನ್‌ ಗ್ರೀನ್‌!
ಐಪಿಎಲ್ ಹರಾಜು ಇತಿಹಾಸದಲ್ಲೇ ಟಾಪ್ 6 ದುಬಾರಿ ಆಟಗಾರರಿವರು!