ಪೋಲಾರ್ಡ್ ಸಿಡಿಲಬ್ಬರದ ಬ್ಯಾಟಿಂಗ್; ಮುಂಬೈಗೆ 4 ವಿಕೆಟ್ ರೋಚಕ ಗೆಲುವು

By Suvarna NewsFirst Published May 1, 2021, 11:36 PM IST
Highlights

ವಿಕೆಟ್ ಕಳೆದುಕೊಂಡ ಮುಂಬೈ ಇಂಡಿಯನ್ಸ್ ತಂಡಕ್ಕೆ ಒಂದು ಹಂತದಲ್ಲಿ ಚೇಸಿಂಗ್ ಅಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಕೀರನ್ ಪೊಲಾರ್ಡ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನಕ್ಕೆ ಚೆನ್ನೈ ಬೃಹತ್ ಮೊತ್ತ ಧೂಳೀಪಟವಾಗಿದೆ.

ದೆಹಲಿ(ಮೇ.01): ಐಪಿಎಲ್ 2021ರ ಟೂರ್ನಿಯಲ್ಲಿ ಅತೀ ದೊಡ್ಡ ಯಶಸ್ವಿ ಚೇಸಿಂಗ್. 219 ರನ್ ಚೇಸ್ ಮಾಡಿದ ಮುಂಬೈ ಇಂಡಿಯನ್ಸ್ ಅಂತಿಮ ಎಸತದಲ್ಲಿ ಪಂದ್ಯ ಗೆದ್ದಿಕೊಂಡಿದೆ. ಕೀರನ್ ಪೊಲಾರ್ಡ್ ಹೋರಾಡದಿಂದ ಮುಂಬೈ 4 ವಿಕೆಟ್ ರೋಚಕ ಗೆಲುವು ದಾಖಲಿಸಿದೆ. 

ಗೆಲುವಿಗೆ ಬರೋಬ್ಬರಿ 219 ರನ್ ಟಾರ್ಗೆಟ್. ಮುಂಬೈ ಇಂಡಿಯನ್ಸ್ ಬಲಿಷ್ಠ ಬ್ಯಾಟ್ಸ್‌ಮನ್ ಪಟ್ಟಿ ನೋಡಿದರೆ ಈ ಸ್ಕೋರ್ ಅಸಾಧ್ಯವೇನಲ್ಲ. ಇದಕ್ಕೆ ತಕ್ಕಂತೆ ಮುಂಬೈ ಇಂಡಿಯನ್ಸ್ ಉತ್ತಮ ಆರಂಭ ಪಡೆಯಿತು. ನಾಯಕ ರೋಹಿತ್ ಶರ್ಮಾ ಹಾಗೂ ಕ್ವಿಂಟನ್ ಡಿಕಾಕ್ 71 ರನ್ ಜೊತೆಯಾಟ ನೀಡಿದರು.

ರೋಹಿತ್ ಶರ್ಮಾ 35 ರನ್ ಸಿಡಿಸಿ ಔಟಾದರೆ, ಡಿಕಾಕ್ 38 ರನ್ ಸಿಡಿಸಿ ನಿರ್ಗಮಿಸಿದರು. ಸೂರ್ಯಕುಮಾರ್ ಯಾದವ್ 3 ರನ್ ಸಿಡಿಸಿ ಔಟಾದರು. ಕ್ರುನಾಲ್ ಪಾಂಡ್ಯ ಹಾಗೂ ಕೀರನ್ ಪೊಲಾರ್ಡ್ ಜೊತೆಯಾಟ ಮುಂಬೈ ಇಂಡಿಯನ್ಸ್ ತಂಡದಲ್ಲಿ ಗೆಲುವಿನ ಆಸೆ ಚಿಗುರಿಸಿತು.

ಪೋಲಾರ್ಡ್ ಅಬ್ಬರಿಸಿದ್ರೆ, ಕ್ರುನಾಲ್ ಉತ್ತಮ ಸಾಥ್ ನೀಡಿದರು. ಆದರೆ ಕ್ರುನಾಲ್ 32 ರನ್ ಸಿಡಿಸಿ ಔಟಾದರು. ಪೊಲಾರ್ಡ್ ಅದ್ಬುತ ಬ್ಯಾಟಿಂಗ್ ಪ್ರದರ್ಶನದಿಂದ ಮುಂಬೈ ಗೆಲುವಿಗ ಅಂತಿಮ 18 ಎಸೆತದಲ್ಲಿ 48 ರನ್‌ಗಳ ಅವಶ್ಯಕತೆ ಇತ್ತು.

ಹಾರ್ದಿಕ್ ಪಾಂಡ್ಯ 2 ಸಿಕ್ಸರ್ ಸಿಡಿಸಿ ಅಬ್ಬರಿಸಿದರೂ 16 ರನ್‌ಗೆ ಆಟ ಅಂತ್ಯವಾಯಿತು. ಜೇಮ್ಸ್ ನೀಶಮ್ ವಿಕೆಟ್ ಕೂಡ ಪತನಗೊಂಡಿತು.  ಅಂತಿಮ 6 ಎಸೆತದಲ್ಲಿ ಮುಂಬೈಗೆ 16 ರನ ಬೇಕಿತ್ತು. ಅಂತಿಮ ಓವರ್‌ನಲ್ಲಿ ಪೋಲಾರ್ಡ್ ಸತತ 2 ಬೌಂಡರಿ ಸಿಡಿಸಿದರು. 5ನೇ ಎಸೆತದಲ್ಲಿ ಸಿಕ್ಸ್ ಸಿಡಿಸಿದರೆ, ಅಂತಿಮ ಎಸೆತದಲ್ಲಿ 2 ರನ್ ಸಿಡಿಸಿದ ಪೋಲಾರ್ಡ್ ಮುಂಬೈಗೆ 4 ವಿಕೆಟ್ ಗೆಲುವು ತಂದುಕೊಟ್ಟರು. 

ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ ಪೊಲಾರ್ಡ್ 34 ಎಸೆತದಲ್ಲಿ ಅಜೇಯ 87 ರನ್ ಸಿಡಿಸಿದರು. ಈ ಮೂಲಕ ಚೆನ್ನೈ ಬೃಹತ್ ಮೊತ್ತವನ್ನು ಪುಡಿ ಪುಡಿ ಮಾಡಿದರು. 

click me!