CSK ಬ್ಯಾಟಿಂಗ್ ಅಬ್ಬರ, ಮುಂಬೈ ಇಂಡಿಯನ್ಸ್‌ಗೆ ಬೃಹತ್ ಟಾರ್ಗೆಟ್!

By Suvarna NewsFirst Published May 1, 2021, 9:26 PM IST
Highlights

ಅಂಬಾಟಿ ರಾಯಡು ಸ್ಫೋಟಕ ಬ್ಯಾಟಿಂಗ್, ಡುಪ್ಲೆಸಿಸ್, ಆಲಿ, ಜಡೇಜಾ ಸೇರಿ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ಅಬ್ಬರದಿಂದ ಬೃಹತ್ ಮೊತ್ತ ದಾಖಲಿಸಿದೆ.

ದೆಹಲಿ(ಮೇ.01):  ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಹಳೇ ಖದರ್‌ಗೆ ಮರಳಿದ. ಪರಿಣಾಮ ಮುಂಬೈ ಇಂಡಿಯನ್ಸ್ ವಿರುದ್ಧ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಈ ಮೂಲಕ  4 ವಿಕೆಟ್ ನಷ್ಟಕ್ಕೆ 218 ರನ್ ಸಿಡಿಸಿತು.

ರುತು ರಾಜ್ ಗಾಯಕ್ವಾಡ್ ಬಹುಬೇಗನೆ ವಿಕೆಟ್ ಕೈಚೆಲ್ಲಿದರು. ಆದರೆ ಫಾಫ್ ಡುಪ್ಲೆಸಿಸ್ ಹಾಗೂ ಮೊಯಿನ್ ಆಲಿ ಜೊತೆಯಾಟ ಚೆನ್ನೈ ತಂಡಕ್ಕೆ ಚೇತರಿಕೆ ನೀಡಿತು. ಡುಪ್ಲೆಸಿಸ್ ಹಾಗೂ ಮೊಯಿನ್ ಆಲಿ ಹಾಫ್ ಸೆಂಚುರಿ ಸಿಡಿಸಿದರು. ಡುಪ್ಲೆಸಿಸ್ 28 ಎಸೆತದಲ್ಲಿ 50 ರನ್ ಸಿಡಿಸಿದರೆ, ಆಲಿ 36 ಎಸೆತದಲ್ಲಿ 58 ರನ್ ಸಿಡಿಸಿದರು.

ಸುರೇಶ್ ರೈನಾ ಕೇವಲ 2 ರನ್ ಸಿಡಿಸಿ ನಿರಾಸೆ ಅನುಭವಿಸಿದರು. ಆದರೆ ಅಂಬಾಟಿ ರಾಯುಡು ಅಬ್ಬರಕ್ಕೆ ಮುಂಬೈ ಬೆಚ್ಚಿ ಬಿದ್ದಿತು. ಕೇವಲ 27 ಎಸೆತದಲ್ಲಿ 4 ಬೌಂಡರಿ ಹಾಗೂ 7 ಸಿಕ್ಸರ್ ಸಿಡಿಸಿದರು. ಈ ಮೂಲಕ ಅಜೇಯ 72 ರನ್ ಸಿಡಿದರು. ಇತ್ತ ರವೀಂದ್ರ ಜಡೇಜಾ ಅಜೇಯ 22 ರನ್ ಸಿಡಿಸಿದರು. 

ಚೆನ್ನೈ ಸೂಪರ್ ಕಿಂಗ್ಸ್ 4 ವಿಕೆಟ್ ಕಳೆದುಕೊಂಡು 218 ರನ್ ಸಿಡಿಸಿತು.  ಇದೀಗ ಮುಂಬೈ ತಂಡ ಗೆಲುವಿಗಾಗಿ 219 ರನ್ ಚೇಸ್ ಮಾಡಬೇಕಿದೆ.

click me!