
ದುಬೈ(ಸೆ.27): ಜೇಸನ್ ರಾಯ್ ಸ್ಪೋಟಕ ಬ್ಯಾಟಿಂಗ್, ನಾಯಕ ಕೇನ್ ವಿಲಿಯಮ್ಸನ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನದಿಂದ ಸನ್‌ರೈಸರ್ಸ್ ಹೈದರಾಬಾದ್ ಕೊನೆಗೂ ಗೆಲುವಿನ ಸಿಹಿ ಕಂಡಿದೆ. ರಾಜಸ್ಥಾನ ರಾಯಲ್ಸ್ ವಿರುದ್ಧ ಪಂದ್ಯದಲ್ಲಿ ಹೈದರಾಬಾದ್ 7 ವಿಕೆಟ್ ಗೆಲುವು ದಾಖಲಿಸಿದೆ. ಈ ಮೂಲಕ IPL 2021ರ ಟೂರ್ನಿಯಲ್ಲಿ ಹೈದರಾಬಾದ್ ದಾಖಲಿಸಿದ 2ನೇ ಗೆಲುವು ಇದಾಗಿದೆ.
ಅಥಿಯಾ ಶೆಟ್ಟಿ- ಸಾರಾ ತೆಂಡುಲ್ಕರ್ : ಕ್ರಿಕೆಟ್ ಸ್ಟಾರ್ಸ್‌ನ ಗರ್ಲ್‌ಫ್ರೆಂಡ್ಸ್
165 ರನ್ ಟಾರ್ಗೆಟ್ ಪಡೆದ ಸನ್‌ರೈಸರ್ಸ್ ಹೈದರಾಬಾದ್(Sunrisers Hyderabad) ಉತ್ತಮ ಆರಂಭ ಪಡೆಯಿತು. ಕಳೆದ ಪಂದ್ಯದಲ್ಲಿ ಸತತ ವೈಫಲ್ಯ ಅನುಭವಿಸಿದ್ದ ಸನ್‌ರೈಸರ್ಸ್ ಹೈದರಾಬಾದ್ ಬ್ಯಾಟಿಂಗ್ ಚೇತರಿಸಿಕೊಂಡಿದೆ. ಜೇಸನ್ ರಾಯ್ ಹಾಗೂ ವೃದ್ಧಿಮಾನ ಸಾಹ 50 ರನ್ ಜೊತೆಯಾಟ ನೀಡಿದರು. ದಿಟ್ಟ ಹೋರಾಟ ನೀಡುತ್ತಿದ್ದ ಈ ಜೊತೆಯಾಟವನ್ನು ಮಹಿಪಾಲ್ ಲೊಮ್ರೊರ್ ಬ್ರೇಕ್ ಮಾಡಿದರು.
ವೃದ್ಧಿಮಾನ್ ಸಾಹ 18 ರನ್ ಸಿಡಿಸಿ ಔಟಾದರು. ನಾಯಕ ಕೇನ್ ವಿಲಿಯಮ್ಸನ್(Kane Williamson) ಜೊತೆ ಜೇಸನ್ ರಾಯ್ ಬ್ಯಾಟಿಂಗ್ ಮುಂದುವರಿಸಿದರು. ತಂಡದಲ್ಲಿ ಮಾಡಿದ ಮಹತ್ವದ ಬದಲಾವಣೆ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ನೆರವಾಯಿತು. ಜೇಸನ್ ರಾಯ್ ಅರ್ಧಶತಕ ಸಿಡಿಸಿ ಮಿಂಚಿದರು.
ಶಿಖರ್ ಧವನ್ - ದಿನೇಶ್ ಕಾರ್ತಿಕ್: ವಿಚ್ಛೇದಿತ IPL ಕ್ರಿಕೆಟಿಗರು !
ರಾಯ್‌ಗೆ , ಕೇನ್ ವಿಲಿಯಮ್ಸನ್ ಉತ್ತಮ ಸಾಥ್ ನೀಡಿದರು. ಟಾರ್ಗೆಟ್ ಚೇಸಿಂಗ್ ಮಾಡಲು ದಿಟ್ಟ ಹೋರಾಟ ನೀಡಿದ ಜೇಸನ್ ರಾಯ್ ಆರ್ಭಟಕ್ಕೆ ಚೇತನ್ ಸಕಾರಿಯಾ ಶಾಕ್ ನೀಡಿದರು. ರಾಯ್ 42 ಎಸೆತದಲ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 60 ರನ್ ಸಿಡಿಸಿ ಔಟಾದರು.
ಜೇಸನ್ ರಾಯ್ ಬೆನ್ನಲ್ಲೇ ಪ್ರಿಯಂ ಗರ್ಗ್ ವಿಕೆಟ್ ಕೈಚೆಲ್ಲಿದರು. ಮುಸ್ತಫಿಜುರ್ ರಹಮಾನ್ ಎಸೆತದಲ್ಲಿ ಗರ್ಗ್ ಶೂನ್ಯಕ್ಕೆ ಔಟಾದರು. 119 ರನ್‌ಗಳಿಗೆ ಸನ್‌ರೈಸರ್ಸ್ ಹೈದರಾಬಾದ್ 3ನೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಗೆಲುವಿನತ್ತ ದಾಪುಗಾಲಿಡುತ್ತಿದ್ದ ಸನ್‌ರೈಸರ್ಸ್ ತಂಡದ ಓಟಕ್ಕೆ ನಿಧಾನವಾಗತೊಡಗಿತು.
IPL 2021: ಈ ಆಟಗಾರನ ಪತ್ನಿ ಜತೆ ಪಾರ್ಟಿ ಎಂಜಾಯ್ ಮಾಡಿದ ಚಹಲ್ ಪತ್ನಿ ಧನಶ್ರೀ ವರ್ಮಾ..!
ದಿಢೀರ್ ವಿಕೆಟ್ ಪತನಗೊಂಡ ಕಾರಣ ಕೇನ್ ವಿಲಿಯಮ್ಸನ್ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶನಕ್ಕೆ ಮುಂದಾದರು. ವಿಲಿಯಮ್ಸನ್ ಹಾಗೂ ಅಭಿಷೇಕ್ ಶರ್ಮಾ ಜೊತೆಯಾಟ ಸನ್‌ರೈಸರ್ಸ್ ಹೈದರಾಬಾದ್ ತಂಡದ ಆತ್ಮವಿಶ್ವಾಸ ಹೆಚ್ಚಿಸಿತು. ಆದರೆ ರಾಜಸ್ಥಾನ ರಾಯಲ್ಸ್ ತಂಡದ ಗೆಲುವಿನ ಹಾದಿ ಕಠಿಣವಾಗತೊಡಗಿತು.
ಸನ್‌ರೈಸರ್ಸ್ ಹೈದರಾಬಾದ್ ತಂಡದ ಗೆಲುವಿಗೆ ಅಂತಿಮ 18 ಎಸೆತದಲ್ಲಿ 22 ರನ್ ಅವಶ್ಯಕತೆ ಇತ್ತು. ಅಭಿಷೇಕ್ ಶರ್ಮಾ ಸಿಡಿಸಿದ ಸಿಕ್ಸರ್ ರಾಜಸ್ಥಾನ ತಂಡದ ಚಿಂತೆ ಹೆಚ್ಚಿಸಿತು. ಇತ್ತ ವಿಲಿಯಮ್ಸನ್ ಬೌಂಡರಿ ಸಿಡಿಸಿ ಹೈದರಾಬಾದ್ ಗೆಲುವಿನ ಹಾದಿ ಸುಗಮಗೊಳಿಸಿದರು. ಗೆಲುವಿಗೆ ಇನ್ನೇನು 2 ರನ್ ಬೇಕಿತ್ತು. ವಿಲಿಯಮ್ಸನ್ ಬೌಂಡರಿ ಸಿಡಿಸಿ ಹೈದರಾಬಾದ್ ತಂಡಕ್ಕೆ 7 ವಿಕೆಟ್ ಗೆಲುವು ತಂದುಕೊಟ್ಟರು. ಇತ್ತ ವಿಲಿಯಮ್ಸನ್ ಆಕರ್ಷಕ ಅರ್ಧಶತಕ ಪೂರೈಸಿದರು.
ಸನ್‌ರೈಸರ್ಸ್ ಹೈದರಾಬಾದ್ ತಂಡ 18.3 ಓವರ್‌ಗಳಲ್ಲಿ ಗುರಿ ತಲುಪಿತು. ಕೇನ್ ವಿಲಿಯಮ್ಸನ್ ಅಜೇಯ 51 ಹಾಗೂ ಅಭಿಷೇಕ್ ಶರ್ಮಾ ಅಜೇಯ 21 ರನ್ ಸಿಡಿಸಿ ಮಿಂಚಿದರು. ದಿಟ್ಟ ಹೋರಾಟ ನೀಡಿದ ಹೈದರಾಬಾದ್ ಗೆಲುವಿನ ಸಂಭ್ರಮ ಆಚರಿಸಿತು. ಆದರೆ ಪ್ಲೇ ಆಫ್ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದ ರಾಜಸ್ಥಾನ ತೀವ್ರ ನಿರಾಸೆ ಅನುವಿಸಿತು.
ಅಂಕಪಟ್ಟಿ:
ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಸನ್‌ರೈಸರ್ಸ್ ಹೈದರಾಬಾದ್ ಈ ಗೆಲುವಿನಿಂದ 4 ಅಂಕ ಸಂಪಾದಿಸಿತು. ಆದರೆ ಸ್ಥಾನದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಪಂದ್ಯದ ಬಳಿಕವೂ ಕೊನೆಯ ಸ್ಥಾನದಲ್ಲೇ ಉಳಿದುಕೊಂಡಿದೆ. ಇತ್ತ 6ನೇ ಸ್ಥಾನದಲ್ಲಿದ್ದ ರಾಜಸ್ಥಾನ ರಾಯಲ್ಸ್ ಈ ಸೋಲಿನೊಂದಿಗೆ ಸ್ಥಾನದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೆ ನೆಟ್‌ರನ್‌ರೇಟ್ ಮೈನಸ್ 369ಕ್ಕೆ ಕುಸಿದಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.