ಐಪಿಎಲ್‌ ಹೊಸ ತಂಡಗಳ 3,500 ಕೋಟಿ ರುಪಾಯಿ ಬಿಕರಿ?

By Suvarna NewsFirst Published Oct 6, 2021, 6:04 PM IST
Highlights

* 15ನೇ ಆವೃತ್ತಿಯ ಐಪಿಎಲ್‌ನಲ್ಲಿ 2 ಹೊಸ ತಂಡಗಳ ಸೇರ್ಪಡೆ

* ಇದೇ ಡಿಸೆಂಬರ್‌ನಲ್ಲಿ ಆಟಗಾರರ ಮೆಗಾ ಹರಾಜು ನಡೆಯಲಿದೆ

*  2 ಹೊಸ ತಂಡಗಳು 3,500 ಕೋಟಿ ರುಪಾಯಿಗೆ ಬಿಕರಿಯಾಗುವ ನಿರೀಕ್ಷೆ

ನವದೆಹಲಿ(ಅ.06): 15ನೇ ಆವೃತ್ತಿಯ ಐಪಿಎಲ್‌ (IPL)ಗೆ ಸೇರ್ಪಡೆಯಾಗುವ 2 ಹೊಸ ತಂಡಗಳು ಅಂದಾಜು 3,000 ಕೋಟಿ ರುಪಾಯಿಯಿಂದ 3,500 ಕೋಟಿ ರುಪಾಯಿಗೆ ಬಿಕರಿಯಾಗುವ ನಿರೀಕ್ಷೆ ಇದೆ. 

ಐಪಿಎಲ್ ತಂಡಗಳನ್ನು ಖರೀದಿಸಲು ಮೂಲ ಬೆಲೆ 2,000 ಕೋಟಿ ರುಪಾಯಿ ಆಗಿದ್ದು, ಕನಿಷ್ಠ ಶೇ.50ರಿಂದ ಶೇ.75ರಷ್ಟು ಹೆಚ್ಚಿಗೆ ಮೊತ್ತಕ್ಕೆ ಬಿಡ್‌ ಆಗಲಿದೆ ಎಂದು ಪಂಜಾಬ್‌ ಕಿಂಗ್ಸ್‌ (Punjab Kings) ನ ಸಹ ಮಾಲಿಕ ನೆಸ್‌ ವಾಡಿಯಾ ಭವಿಷ್ಯ ನುಡಿದಿದ್ದಾರೆ. ‘ಮೂಲಬೆಲೆ 2,000 ಕೋಟಿ ರು. ಆಗಿದ್ದರೂ ಅದು ಬಹಳ ಕಡಿಮೆ ಎನಿಸುತ್ತದೆ. ಐಪಿಎಲ್‌ ವಿಶ್ವದ ಶ್ರೇಷ್ಠ ಟಿ20 ಲೀಗ್‌. 2 ಹೊಸ ತಂಡಗಳ ಸೇರ್ಪಡೆ ಟೂರ್ನಿಗೆ ಮತ್ತಷ್ಟು ಲಾಭ ತರಲಿದೆ’ ಎಂದು ವಾಡಿಯಾ ಹೇಳಿದ್ದಾರೆ.

Punjab Kings Co-owner Ness Wadia to TOI:

"Two new teams in IPL are likely to be sold for 3000 cr to 3,500 cr, Mega auction likely to be in just 2 months (on December-21)".

— VIVO IPL 2021 : Sep-Oct-21 | Wear a Mask 😷 (@IPL14_)

ಅಕ್ಟೋಬರ್ 17ಕ್ಕೆ ಹೊಸ 2 ಐಪಿಎಲ್‌ ತಂಡಗಳಿಗೆ ಆನ್‌ಲೈನ್‌ ಬಿಡ್ಡಿಂಗ್‌..!

2022ನೇ ಸಾಲಿನ ಐಪಿಎಲ್‌ನಲ್ಲಿ ಈಗಿರುವ 8 ತಂಡಗಳ ಜತೆಗೆ ಮತ್ತೆರಡು ತಂಡಗಳು ಸೇರ್ಪಡೆಯಾಗಲಿವೆ. ಹೊಸ ಎರಡು ತಂಡಗಳ ಸೇರ್ಪಡೆಯನ್ನು ನೆಸ್‌ ವಾಡಿಯಾ (Ness Wadia) ಸ್ವಾಗತಿಸಿದ್ದಾರೆ. ನಾನು ಹೊಸ ಎರಡು ತಂಡಗಳ ಸೇರ್ಪಡೆಯನ್ನು ಉತ್ಸಾಹದಿಂದ ಎದುರು ನೋಡುತ್ತಿದ್ದೇನೆ. ಏಕೆಂದರೆ ಇನ್ನೆರಡು ತಂಡಗಳು ಸೇರ್ಪಡೆಯಿಂದ ಐಪಿಎಲ್‌ ಮತ್ತೊಂದು ಸ್ತರಕ್ಕೇರಲಿದೆ. ವೀಕ್ಷಣೆಯ ದೃಷ್ಠಿಯಿಂದ ಮತ್ತಷ್ಟು ವಿಸ್ತಾರವಾಗಲಿದೆ. ಈಗಾಗಲೇ ವಿಶ್ವದ ಅತ್ಯಂತ ಶ್ರೇಷ್ಠ ಟಿ20 ಲೀಗ್ ಎನಿಸಿಕೊಂಡಿರುವ ಐಪಿಎಲ್‌ ಮತ್ತಷ್ಟು ಬಲಗೊಳ್ಳಲಿದೆ. ಇನ್ನಷ್ಟು ಆಟಗಾರರು, ಕೋಚ್‌ಗಳ ಆದಾಯ ಹೆಚ್ಚಾಗಲಿದೆ. ಪಂದ್ಯಗಳ ಸಂಖ್ಯೆಯೂ ಹೆಚ್ಚಾಗುವುದರಿಂದ ಅಭಿಮಾನಿಗಳಿಗೆ ಮತ್ತಷ್ಟು ಐಪಿಎಲ್‌ ಪಂದ್ಯಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ ಎಂದು ನೆಸ್ ವಾಡಿಯ ಅಭಿಪ್ರಾಯಪಟ್ಟಿದ್ದಾರೆ. 

IPL 2021: ಸನ್‌ರೈಸರ್ಸ್‌ ಎದುರಿನ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ತಂಡ ಪ್ರಕಟ

ಐಪಿಎಲ್‌ನ ಹೊಸ ತಂಡಗಳನ್ನು ಖರೀದಿಸಲು ಅದಾನಿ ಗ್ರೂಪ್‌, ಗೋಯೆಂಕಾ ಗ್ರೂಪ್‌ ಹೆಚ್ಚಿನ ಒಲವು ತೋರಿವೆ ಎಂದು ವರದಿಯಾಗಿದೆ. ಬಿಸಿಸಿಐ ಅಕ್ಟೋಬರ್ 25ರಂದು ಹೊಸ ತಂಡಗಳನ್ನು ಘೋಷಣೆ ಮಾಡಲಿದೆ. ಇನ್ನು 15ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಡಿಸೆಂಬರ್ ವೇಳೆಗೆ ಮೆಗಾ ಹರಾಜು ನಡೆಯುವ ಸಾಧ್ಯತೆಯಿದೆ. ಆದರೆ ಐಪಿಎಲ್ ಆಡಳಿತ ಮಂಡಳಿಯು ಈಗಿರುವ ಫ್ರಾಂಚೈಸಿಗಳಿಗೆ ಎಷ್ಟು ಆಟಗಾರರನ್ನು ರೀಟೈನ್‌ ಮಾಡಿಕೊಳ್ಳಲು ಅವಕಾಶ ನೀಡಲಿದೆ ಎನ್ನುವ ಕುತೂಹಲ ಜೋರಾಗಿದೆ. 

click me!