ದುಬೈ(ಅ.15): IPL 2021 ಫೈನಲ್ ಪಂದ್ಯದ ರೋಚಕತೆ ಹೆಚ್ಚಾಗಿದೆ. ಟಾಸ್ ಸೋತು ಬ್ಯಾಟಿಂಗ್ ಇಳಿದಿರುವ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ದಿಟ್ಟ ಹೋರಾಟ ನೀಡುತ್ತಿದೆ. ಇತ್ತ ಕೆಕೆಆರ್(KKR) ಮೇಲುಗೈ ಸಾಧಿಸಲು ಹವಣಿಸುತ್ತಿದೆ. ಇದರ ನಡುವೆ ಚೆನ್ನೈ ತಂಡದ ಯುವ ಹಾಗೂ ಸ್ಟಾರ್ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್(Ruturaj Gaikwad) ಹೊಸ ದಾಖಲೆ ಬರೆದಿದ್ದಾರೆ.
IPL 2021 ಫೈನಲ್; CSK ವಿರುದ್ಧ ಟಾಸ್ ಗೆದ್ದ KKR, ಉಭಯ ತಂಡದ ವಿವರ ಇಲ್ಲಿದೆ?
undefined
ಐಪಿಎಲ್ 2021ರ ಟೂರ್ನಿಯಲ್ಲಿ ರುತುರಾಜ್ ಗಾಯಕ್ವಾಡ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಪ್ರತಿ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಸರೆಯಾಗಿದ್ದಾರೆ. ಫೈನಲ್ ಪಂದ್ಯದಲ್ಲೂ ರುತುರಾಜ್ ಹೋರಾಟದಿಂದ ಐಪಿಎಲ್ 2021ರಲ್ಲಿ ಗರಿಷ್ಠ ರನ್ ಸಿಡಿಸಿದ ಬ್ಯಾಟರ್ ಅನ್ನೋ ದಾಖಲೆ ಬರೆದಿದ್ದಾರೆ.
ಕೋಲ್ಕತಾ ನೈಟ್ ರೈಡರ್ಸ್ ವಿರುದ್ದದ ಫೈನಲ್ ಪಂದ್ಯದಲ್ಲಿ ರುತುರಾಜ್ 25 ರನ್ ಪೂರೈಸುತ್ತಿದ್ದಂತೆ IPL 2021ರಲ್ಲಿ ರುತುರಾಜ್ ಗರಿಷ್ಠ ರನ್ ಸಿಡಿಸಿದ ದಾಖಲೆ ಬರೆದಿದ್ದಾರೆ. ಈ ಮೂಲಕ ಮೊದಲ ಸ್ಥಾನದಲ್ಲಿದ್ದ ಪಂಜಾಬ್ ಕಿಂಗ್ಸ್ ನಾಯಕ ಕೆಎಎಲ್ ರಾಹುಲ್(KL Rahul) ಹಿಂದಿಕ್ಕಿದ್ದಾರೆ.
IPL 2021: KKR ತಂಡದ ಆಟಗಾರರ ಗ್ಲಾಮರ್ಸ್ ಪತ್ನಿಯರು ಮತ್ತು ಗರ್ಲ್‌ಫ್ರೆಂಡ್ಸ್!
ಲೀಗ್ ಹಂತದಿಂದ ಹೊರಬಿದ್ದ ಕೆಎಲ್ ರಾಹುಲ್ 14 ಪಂದ್ಯಗಳ 626 ರನ್ ಸಿಡಿಸಿ ಮೊದಲ ಸ್ಥಾನ ಅಲಂಕರಿಸಿದ್ದರು. ಈ ಮೂಲಕ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದರು. ಆದರೆ ಇದೀಗ ರುತುರಾಜ್ ಗಾಯಕ್ವಾಡ್ ಆರೇಂಜ್ ಕ್ಯಾಪ್ ಪಡೆಯಲು ಸಜ್ಜಾಗಿದ್ದಾರೆ. ರುತುರಾಜ್ ರಾಹುಲ್ ಹಿಂದಿಕ್ಕಿ ಮುಂದೆ ಸಾಗಿದ್ದರೆ, ಈ ಆವೃತ್ತಿಯಲ್ಲಿ ಗರಿಷ್ಠ ರನ್ ಸಿಡಿಸಿದ ಬ್ಯಾಟರ್ ವಿವರ ಈ ಕೆಳಗಿನಂತಿದೆ.
ನಿಮಗೆ ಗೊತ್ತಾ ಗೌತಮ್ ಗಂಭೀರ್ ಹಾಗೂ ನತಾಶಾ ಜೈನ್ ಇಂಟ್ರೆಸ್ಟಿಂಗ್ ಲವ್‌ಸ್ಟೋರಿ?
ಐಪಿಎಲ್ 2021 ಆವೃತ್ತಿಯೊಂದರಲ್ಲಿ ಗರಿಷ್ಠ ರನ್
634 ರುತುರಾಜ್ ಗಾಯಕ್ವಾಡ್
626 ಕೆಎಲ್ ರಾಹುಲ್
587 ಶಿಖರ್ ಧವನ್
557 ಫಾಫ್ ಡುಪ್ಲೆಸಿಸ್
513 ಗ್ಲೆನ್ ಮ್ಯಾಕ್ಸ್‌ವೆಲ್
ಕೆಕೆಆರ್ ವಿರುದ್ಧ ರುತುರಾಜ್ ಗಾಯಕ್ವಾಡ್ 27 ಎಸೆತದಲ್ಲಿ 32 ರನ್ ಸಿಡಿಸಿ ಔಟಾಗಿದ್ದಾರೆ. 3 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದ್ದಾರೆ. ಈ ಮೂಲಕ ಮೊದಲ ವಿಕೆಟ್‌ಗೆ ರುತುರಾಜ್ ಹಾಗೂ ಫಾಫ್ ಡುಪ್ಲೆಸಿಸ್ 61 ರನ್ ಜೊತೆಯಾಟ ನೀಡಿದ್ದಾರೆ.
ಐಪಿಎಲ್ ಆವೃತ್ತಿಯೊಂದರಲ್ಲಿ ಗರಿಷ್ಠ ಜೊತೆಯಾಟ ನೀಡಿದ ಜೋಡಿ
939 ಕೊಹ್ಲಿ - ಎಬಿಡಿ (2016)
791 ವಾರ್ನರ್ - ಬೈರ್‌ಸ್ಟೋ (2019)
756 ರುತುರಾಜ್ - ಡುಪ್ಲೆಸಿಸ್ (2021) *
744 ಧವನ್ - ಪೃಥ್ವಿ (2021)
731 ಧವನ್ -ವಾರ್ನರ್ (2016)
24ರ ಹರೆಯದ ರುತುರಾಜ್ ಗಾಯಕ್ವಾಡ್ 2021ರಲ್ಲಿ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ್ದಾರೆ. ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ್ದಾರೆ. ಆದರೆ 2 ಪಂದ್ಯಗಳಿಂದ ರುತುರಾಜ್ 35 ರನ್ ಸಿಡಿಸಿ ನಿರಾಸೆ ಅನುಭವಿಸಿದ್ದಾರೆ. ಈ ಬಾರಿಯ ಐಪಿಎಲ್ ಟೂರ್ನಿ ರುತುರಾಜ್ ಗಾಯಕ್ವಾಡ್‌ಗೆ ಕರಿಯರ್‌ಗೆ ಹೊಸ ಆಯಾಮ ನೀಡಲಿದೆ