IPL 2021 ಫೈನಲ್; CSK ವಿರುದ್ಧ ಟಾಸ್ ಗೆದ್ದ KKR, ಉಭಯ ತಂಡದ ವಿವರ ಇಲ್ಲಿದೆ?

By Suvarna News  |  First Published Oct 15, 2021, 7:04 PM IST
  • ಚೆನ್ನೈ ಸೂಪರ್ ಕಿಂಗ್ಸ್ vs ಕೋಲ್ಕತಾ ನೈಟ್ ರೈಡರ್ಸ್
  • ಟಾಸ್ ಗೆದ್ದ ಕೋಲ್ಕತಾ ನೈಟ್ ರೈಡರ್ಸ್ ಬೌಲಿಂಗ್ ಆಯ್ಕೆ
  • ಯಾರಿಗೆ IPL 2021ರ ಚಾಂಪಿಯನ್ ಕಿರೀಟ?

ದುಬೈ(ಅ.15):  IPL 2021 ಟೂರ್ನಿ ಇಂದಿನ ಫೈನಲ್(IPL Final) ಪಂದ್ಯದೊಂದಿಗೆ ಅಂತ್ಯಗೊಳ್ಳಲಿದೆ. ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ಹಾಗೂ ಕೋಲ್ಕತಾ ನೈಟ್ ರೈಡರ್ಸ್(Kolkata Knight Riders) ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ. ಈ ಮಹತ್ವದ ಪಂದ್ಯದಲ್ಲಿ ಟಾಸ್(Toss) ಗದ್ದ ಕೋಲ್ಕತಾ ನೈಟ್ ರೈಡರ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಉಭಯ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. 

 

Final. Chennai Super Kings XI: F du Plessis, R Gaikwad, M Ali, A Rayudu, R Uthappa, MS Dhoni, R Jadeja, DJ Bravo, S Thakur, D Chahar, J Hazlewood https://t.co/vQTOi1d2kG

— IndianPremierLeague (@IPL)

Final. Kolkata Knight Riders XI: S Gill, V Iyer, R Tripathi, N Rana, E Morgan, D Karthik, S Al Hasan, S Narine, L Ferguson, V Chakaravarthy, S Mavi https://t.co/vQTOi1d2kG

— IndianPremierLeague (@IPL)

Latest Videos

undefined

IPL 2021: KKR ತಂಡದ ಆಟಗಾರರ ಗ್ಲಾಮರ್ಸ್‌ ಪತ್ನಿಯರು ಮತ್ತು ಗರ್ಲ್‌ಫ್ರೆಂಡ್ಸ್‌!

ದುಬೈ(Dubai) ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ತಂಡ ಹೆಚ್ಚು ಯಶಸ್ಸು ಸಾಧಿಸಿದೆ. ದುಬೈ ಕ್ರೀಡಾಂಗಣದಲ್ಲಿ ನಡೆದ12 ಪಂದ್ಯಗಳ ಪೈಕಿ 9  ಪಂದ್ಯದಲ್ಲಿ ಚೇಸಿಂಗ್ ಮಾಡಿದ ತಂಡ ಗೆಲುವು ಸಾಧಿಸಿದೆ. ಇಷ್ಟೇ ಅಲ್ಲ ಯುಎಇನಲ್ಲಿ ಆಡಿದ 6 ಪಂದ್ಯದಲ್ಲಿ ಕೆಕೆಆರ್ ಚೇಸಿಂಗ್ ಮಾಡಿ ಪಂದ್ಯ ಗೆದ್ದುಕೊಂಡಿದೆ. ಇತ್ತ ಚೆನ್ನೈ ಸೂಪರ್ ಕಿಂಗ್ಸ್(CSK) 5 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಸೋಲು ಕಂಡಿದೆ. 

ಎಂ.ಎಸ್.ಧೋನಿ(MS Dhoni) ಹಾಗೂ ಇಯಾನ್ ಮಾರ್ಗನ್(Eion Morgan) ಅತ್ಯುನ್ನತ್ತ ನಾಯಕರು. ಆದರೆ ಪಂದ್ಯದ ಗತಿಯನ್ನು ಅಷ್ಟೇ ವೇಗದಲ್ಲಿ ಅರ್ಥ ಮಾಡಿಕೊಂಡು ಗೇಮ್ ಪ್ಲಾನ್ ಬದಲಿಸುವ ತಂತ್ರದಲ್ಲಿ ಧೋನಿ ಮುಂಚೂಣಿಯಲ್ಲಿದ್ದಾರೆ. 

IPL 2021 ಹೀಗಿತ್ತು ನೋಡಿ ಚೆನ್ನೈ ಸೂಪರ್ ಕಿಂಗ್ಸ್‌ ಫೈನಲ್‌ವರೆಗಿನ ಹಾದಿ..!

ಪ್ಲೇ ಆಫ್ ಸುತ್ತಿನಲ್ಲಿ ಧೋನಿ ಹಳೇ ಖದರ್ ತೋರಿಸಿದ್ದಾರೆ. ಸ್ಫೋಟಕ ಬ್ಯಾಟಿಂಗ್ ಮೂಲಕ ಪಂದ್ಯ ಫಿನೀಶ್ ಮಾಡಿದ್ದಾರೆ. ಇದು ಚೆನ್ನೈ ತಂಡದ ಆತ್ಮವಿಶ್ವಾಸ ಡಬಲ್ ಮಾಡಿದೆ. ಇಷ್ಟೇ ಅಲ್ಲ ಧೋನಿ ಕ್ರೀಸ್‌ನಲ್ಲಿದ್ದರೆ, ಎದುರಾಳಿ ಕೆಕೆಆರ್ ತಂಡದ ಆತ್ಮವಿಶ್ವಾಸಕ್ಕೆ ದೊಡ್ಡ ಹೊಡೆತ ನೀಡಲಿದೆ.

ದುಬೈನ ಕ್ರೀಡಾಂಗಣದಲ್ಲಿ ಫೈನಲ್ ಫೈಟ್ ನಡೆಯಲಿದೆ. ಚೆನ್ನೈ ಸೂಪರ್ ಕಿಂಗ್ಸ್ ಅಧಿಕಾರಯುತವಾಗಿ ಫೈನಲ್ ಪ್ರವೇಶಿಸಿದರೆ, ಕೆಕೆಆರ್ ತಂಡಕ್ಕೆ ಅದೃಷ್ಠ ಕೂಡ ಕೈಹಿಡಿದಿದೆ. ಆದರೆ ಇಂದಿನ ಪಂದ್ಯದಲ್ಲಿ ದಿಟ್ಟ ಹೋರಾಟ ನೀಡುವ ತಂಡಕ್ಕೆ ಗೆಲುವಿನ ಅದೃಷ್ಠ ಒಲಿಯಲಿದೆ.

ಪ್ಲೇ ಆಫ್ ಸುತ್ತಿನ ಹೋರಾಟದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ದಿಟ್ಟ ಹೋರಾಟ ನೀಡಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿ ನೇರವಾಗಿ ಫೈನಲ್ ಪ್ರವೇಶಿಸಿತ್ತು. 

ನಿಮಗೆ ಗೊತ್ತಾ ಗೌತಮ್‌ ಗಂಭೀರ್‌ ಹಾಗೂ ನತಾಶಾ ಜೈನ್‌ ಇಂಟ್ರೆಸ್ಟಿಂಗ್ ಲವ್‌ಸ್ಟೋರಿ?

ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ದ ಹೋರಾಟ ನಡಸಿತ್ತು. ಈ ಪಂದ್ಯದಲ್ಲಿ ಆರ್‌ಸಿಬಿ ಮಣಿಸಿದ ಕೆಕೆಆರ್ 2ನೇ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆಯಿತು. 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ, ಡೆಲ್ಲಿ ಕ್ಯಾಪಿಟಲ್ಸ್ ಮಣಿಸಿ ಫೈನಲ್ ಪ್ರವೇಶಿಸಿದೆ. 

ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ 24 ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ 16 ಬಾರಿ ಕೆಕೆಆರ್ ತಂಡವನ್ನು ಧೋನಿ ಸೈನ್ಯ ಮಣಿಸಿದೆ. ಕಳೆದ 6 ಪಂದ್ಯದಲ್ಲಿ 5 ಬಾರಿ ಕೆಕೆಆರ್ ತಂಡವನ್ನು ಸಿಎಸ್‌ಕೆ ಮಣಿಸಿದೆ. ಆದರೆ ಈ ಅಂಕಿ ಅಂಶ ಇಂದಿನ ಪಂದ್ಯಕ್ಕೆ ನೆರವಾಗುವುದಿಲ್ಲ. ಇಂದು ಕಠಿಣ ಹೋರಾಟ ನೀಡುವ ತಂಡಕ್ಕೆ ಗೆಲುವು ಸಿಗಲಿದೆ.

click me!