IPL 2021: ಡೆಲ್ಲಿ ವರ್ಸಸ್‌ ಪಂಜಾಬ್‌ ಸೂಪರ್‌ ಸೆಣಸಾಟ

Kannadaprabha News   | Asianet News
Published : Apr 18, 2021, 09:41 AM IST
IPL 2021: ಡೆಲ್ಲಿ ವರ್ಸಸ್‌ ಪಂಜಾಬ್‌ ಸೂಪರ್‌ ಸೆಣಸಾಟ

ಸಾರಾಂಶ

ಸೂಪರ್‌ ಸಂಡೆಯ ಡಬಲ್‌ ಹೆಡ್ಡರ್ ಪಂದ್ಯದ ಎರಡನೇ  ಸೆಣಸಾಟದಲ್ಲಿ ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಪಂಜಾಬ್‌ ಕಿಂಗ್ಸ್‌ ತಂಡಗಳು ಕಾದಾಡಲಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಮುಂಬೈ(ಏ.18): ಆಡಿರುವ ತಲಾ 2 ಪಂದ್ಯಗಳಲ್ಲಿ ಒಂದೊಂದರಲ್ಲಿ ಗೆಲುವು ಸಾಧಿಸಿರುವ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಪಂಜಾಬ್‌ ಕಿಂಗ್ಸ್‌ ಭಾನುವಾರ ಮುಖಾಮುಖಿ ಆಗಲಿದ್ದು, ಇಂದಿನ ಪಂದ್ಯದಲ್ಲಿ ಜಯಿಸುವ ಮೂಲಕ ಗೆಲುವಿನ ಹಾದಿಗೆ ಮರಳುವ ವಿಶ್ವಾಸದಲ್ಲಿದ್ದಾರೆ.

ಕಿಂಗ್ಸ್‌ಗೆ ಹೋಲಿಕೆ ಮಾಡಿದರೆ ಡೆಲ್ಲಿ ತಂಡ ಬಲಿಷ್ಠವಾಗಿದ್ದು, ಧವನ್‌, ಪಂತ್‌, ಹೆಟ್ಮೆಯರ್‌, ಸ್ಮಿತ್‌ರಂತಹ ಘಟಾನುಘಟಿ ಬ್ಯಾಟ್ಸ್‌ಮನ್‌ಗಳ ದಂಡೇ ಇದೆ. ವೋಕ್ಸ್‌, ಅಶ್ವಿನ್‌, ರಬಾಡ, ಅಮಿತ್‌ ಮಿಶ್ರಾ ಹೀಗೆ ಸಾಕಷ್ಟು ಬೌಲರ್‌ಗಳೇ ಡೆಲ್ಲಿ ತಂಡದ ಬೆನ್ನಿಗಿದೆ.

ಪಂಜಾಬ್‌ ಕಿಂಗ್ಸ್‌ ಸಹ ಬಲಾಢ್ಯವಾಗಿದ್ದು, ಕೆ.ಎಲ್‌.ರಾಹುಲ್‌, ಗೇಲ್‌, ಡೇವಿಡ್‌ ಮಲಾನ್‌ ಟ್ರಂಪ್‌ ಕಾರ್ಡ್‌ಗಳಾಗಿದ್ದಾರೆ. ಶಮಿ ಬೌಲಿಂಗ್‌ ವಿಭಾಗವನ್ನು ಮುನ್ನಡೆಸಲಿದ್ದಾರೆ. ಆದರೆ, ಸಿಎಸ್‌ಕೆ ವಿರುದ್ಧದ ಸೋಲು ಕಿಂಗ್ಸ್‌ಗೆ ಆಘಾತವನ್ನುಂಟು ಮಾಡಿದ್ದು, ಇದರಿಂದ ಚೇತರಿಸಿಕೊಳ್ಳಲು ಗೆಲುವಿನ ಅವಶ್ಯವಿದೆ.

IPL 2021: ಹ್ಯಾಟ್ರಿಕ್‌ ಜಯದ ತವಕದಲ್ಲಿ ಆರ್‌ಸಿಬಿ

ಪಿಚ್‌ ರಿಪೋರ್ಟ್‌: ವಾಂಖೇಡೆ ಅಂಗಳದ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದ್ದು, ರನ್‌ ಹೊಳೆ ನಿರೀಕ್ಷೆ ಮಾಡಲಾಗಿದೆ. ಚೇಸ್‌ ಮಾಡುವ ತಂಡಕ್ಕೆ ಹೆಚ್ಚಿನ ಲಾಭವಿದೆ. ಮೊದಲು ಬ್ಯಾಟ್‌ ಮಾಡುವ ತಂಡ 200ಕ್ಕಿಂತ ಹೆಚ್ಚು ರನ್‌ ದಾಖಲಿಸಿದರೆ, ಜಯ ಸ್ವಲ್ಪ ಸುಲಭವಾಗಲಿದೆ.

ಸಂಭವನೀಯ ಆಟಗಾರರ ಪಟ್ಟಿ

ಡೆಲ್ಲಿ: ಶಿಖರ್‌ ಧವನ್‌, ಪೃಥ್ವಿ ಶಾ, ರಹಾನೆ, ರಿಷಭ್‌ ಪಂತ್‌(ನಾಯಕ), ಸ್ಟೋಯ್ನಿಸ್‌/ಹೆಟ್ಮೆಯರ್‌/ಸ್ಟೀವ್‌ ಸ್ಮಿತ್‌, ಲಲಿತ್‌, ಕರ್ರನ್‌/ನೋಕಿಯ, ವೋಕ್ಸ್‌, ಅಶ್ವಿನ್‌, ರಬಾಡ, ಅವೀಶ್‌ ಖಾನ್‌

ಪಂಜಾಬ್‌: ರಾಹುಲ್‌(ನಾಯಕ), ಮಯಾಂಕ್‌, ಗೇಲ್‌, ದೀಪಕ್‌ ಹೂಡಾ, ನಿಕೋಲಸ್‌/ ಡೇವಿಡ್‌ ಮಲಾನ್‌, ಶಾರುಖ್‌ ಖಾನ್‌, ರಿಚರ್ಡ್‌ಸನ್‌, ರವಿ ಬಿಶ್ನೊಯಿ, ಶಮಿ, ಜೋರ್ಡಾನ್‌, ಆಷ್‌ರ್‍ದೀಪ್‌ ಸಿಂಗ್‌

ಸ್ಥಳ: ಮುಂಬೈ 
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತಲೆಗೆ 20 ಹೊಲಿಗೆ, ಭುಜಕ್ಕೆ ಬಲವಾದ ಪೆಟ್ಟು! ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡದ್ದಕ್ಕೆ ಕೋಚ್‌ ಮೇಲೆ ಆಟಗಾರರ ಮಾರಣಾಂತಿಕ ಹಲ್ಲೆ!
ಆ ಒಂದು ಫೋಟೋ: ಪಾಪರಾಜಿಗಳ ಮೇಲೆ ಹಾರ್ದಿಕ್ ಪಾಂಡ್ಯ ಕೆಂಡಾಮಂಡಲ!