ರುತುರಾಜ್ ಬ್ಯಾಟಿಂಗ್, ಧೋನಿ ನಾಯಕತ್ವ; ಮುಂಬೈ ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್!

By Suvarna NewsFirst Published Sep 19, 2021, 11:23 PM IST
Highlights
  • ಸಿಎಸ್‌ಕೆ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯ
  • ಐಪಿಎಲ್ 2021ರ ಎರಡನೇ ಭಾಗದ ಲೀಗ್ ಹೋರಾಟ
  • ಚೆನ್ನೈ ಸೂಪರ್ ಕಿಂಗ್ಸ್ ರೋಚಕ ಗೆಲುವು
  • ಸೌರವ್ ತಿವಾರಿ ಹೋರಾಟ ವ್ಯರ್ಥ, ಮುಂಬೈಗೆ ಸೋಲು

ದುಬೈ(ಸೆ.19); ಐಪಿಎಲ್ 2021ರ 2ನೇ ಭಾಗ ಅದ್ಧೂರಿಯಾಗಿ ಆರಂಭಗೊಂಡಿದೆ. ಮೊದಲ ಪಂದ್ಯವೇ ಅತ್ಯಂತ ರೋಚಕ ಹೋರಾಟದೊಂದಿದೆ ಅಭಿಮಾನಿಗಳಿಗೆ ಫುಲ್ ಎಂಟರ್ಟೆನ್ಮೆಂಟ್ ನೀಡಿದೆ.  ಮುಂಬೈ ಇಂಡಿಯನ್ಸ್ ವಿರುದ್ಧ ಆರಂಭದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಸೋಲಿನ ಸುಳಿಗೆ ಸಿಲುಕಿದ್ದ ಚೆನ್ನೈ, ದಿಟ್ಟ ಪ್ರದರ್ಶನದ ಮೂಲಕ ಗೆಲವು ಸಾಧಿಸಿದೆ. ರುತುರಾಜ್ ಗಾಯಕ್ವಾಡ್ ಬ್ಯಾಟಿಂಗ್ ಹಾಗೂ ಧೋನಿ ಚಾಣಾಕ್ಷ ನಾಯಕತ್ವದಿಂದ ಚೆನ್ನೈ 20 ರನ್ ಗೆಲವು ಕಂಡಿದೆ. ಈ ಗೆಲುವಿನೊಂದಿಗೆ ಚೆನ್ನೈ ಅಂಕಪಟ್ಟಿಯಲ್ಲಿ ಮತ್ತೆ ಮೊದಲ ಸ್ಥಾನಕ್ಕೇರಿದೆ.

ವಿರಾಟ್ ಕೊಹ್ಲಿ ಬಳಿಕ RCB ನಾಯಕರಾಗೋರು ಯಾರು..? ಇಲ್ಲಿವೆ 5 ಉತ್ತಮ ಆಯ್ಕೆಗಳು..!

ರುತುರಾತ್ ಗಾಯಕ್ವಾಡ್ ಅಜೇಯ 88 ರನ್ ದಿಟ್ಟ ಹೋರಾಟದಿಂದ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ 157 ರನ್ ಟಾರ್ಗೆಟ್ ನೀಡಿತ್ತು. ಈ ಗುರಿ ಚೇಸ್ ಮಾಡಲು ಕಣಕ್ಕಿಳಿದ ಮುಂಬೈ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಕ್ವಿಂಟನ್ ಡಿಕಾಕ್ 17 ರನ್ ಸಿಡಿಸಿ ಔಟಾದರು. ಇತ್ತ ರೋಹಿತ್ ಶರ್ಮಾ ಬದಲು ಸ್ಥಾನ ಪಡೆದ ಅನ್ಮೋಲ್‌ಪ್ರೀತ್ ಸಿಂಗ್ 16 ರನ್ ಸಿಡಿಸಿ ಔಟಾದರು.

 

𝐁ey𝐎𝐍𝐃 the Game! 🦁💛 pic.twitter.com/Hll69XY6GS

— Chennai Super Kings - Mask P😷du Whistle P🥳du! (@ChennaiIPL)

ಸೂರ್ಯಕುಮಾರ್ ಯಾದವ್ 3, ಇಶಾನ್ ಕಿಶನ್ 11 ರನ್ ಸಿಡಿಸಿ ಔಟಾದರು. ಆದರೆ ಸೌರಬ್ ತಿವಾರಿ ಏಕಾಂಗಿ ಹೋರಾಟ ಆರಂಭಗೊಂಡಿತು. ಇತ್ತ ನಾಯಕ ಕೀರನ್ ಪೊಲಾರ್ಡ್ ಕೇವಲ 15 ರನ್ ಸಿಡಿಸಿ ಔಟಾದರು. ಇತ್ತ ದುಬಾರಿ ಬೌಲಿಂಗ್ ಹಣೆ ಪಟ್ಟಿ ಹೊತ್ತುಕೊಂಡ ಕ್ರುನಾಲ್ ಪಾಂಡ್ಯ ಬ್ಯಾಟಿಂಗ್‌ನಲ್ಲೂ ಮಿಂಚಲಿಲ್ಲ. ಕ್ರುನಾಲ್ 4 ರನ್ ಸಿಡಿಸಿ ರನೌಟ್ ಆದರು.

IPL 2021 ಮುಂಬೈ ಎದುರು ಚೆನ್ನೈ ದಿಗ್ವಿಜಯವನ್ನು ಕೊಂಡಾಡಿದ ಕ್ರಿಕೆಟ್ ಪಂಡಿತರು..

ಮುಂಬೈ ಗೆಲುವಿಗೆ ಅಂತಿಮ 12 ಎಸೆತದಲ್ಲಿ 39 ರನ್ ಅವಶ್ಯಕತೆ ಇತ್ತು. ಸೌರವ್ ತಿವಾರಿ ಹಾಗೂ ಆ್ಯಡಮ್ ಮಿಲ್ನೆ ಬಿರುಸಿನ ಬ್ಯಾಟಿಂಗ್ ಪ್ರದರ್ಶನಕ್ಕೆ ಮುಂದಾದರು. ಬೌಂಡರಿ, ಸಿಕ್ಸರ್ ಅಬ್ಬರ ಆರಂಭಗೊಂಡಿತು. ಹೊಡಿಬಡಿ ಆಟದಲ್ಲಿ 15 ರನ್ ಸಿಡಿಸಿ ಮಿಲ್ನೆ ವಿಕೆಟ್ ಪತನಗೊಂಡಿತು.

 

💛 WINning moment - Katipu8ra 😍 🦁 pic.twitter.com/KvmDHUcJf5

— Chennai Super Kings - Mask P😷du Whistle P🥳du! (@ChennaiIPL)

ರಾಹುಲ್ ಚಹಾರ್ ವಿಕೆಟ್ ಪತನಗೊಂಡಿತು. ಇತ್ತ ತಿವಾರಿ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಅಷ್ಟರಲ್ಲಿ ಓವರ್ ಮುಕ್ತಾಯಗೊಂಡಿತು. ಮುಂಬೈ 8 ವಿಕೆಟ್ ನಷ್ಟಕ್ಕೆ 136 ರನ್ ಸಿಡಿಸಿ ಸೋಲೊಪ್ಪಿಕೊಂಡಿತು. ಚೆನ್ನೈ 20 ರನ್ ಗೆಲವಿನೊಂದಿಗೆ ಐಪಿಎಲ್ 2021ರ 2ನೇ ಭಾಗವನ್ನು ಗೆಲುವಿನೊಂದಿಗೆ ಆರಂಭಿಸಿದೆ.

 

The dancing rose tale! Post match catch up with the Champ 🦁💛 pic.twitter.com/R0XpYnhY1t

— Chennai Super Kings - Mask P😷du Whistle P🥳du! (@ChennaiIPL)

🎥 Game TURner Rocket Raja's MOM moments! 🦁💛 pic.twitter.com/Hnny0FV4t3

— Chennai Super Kings - Mask P😷du Whistle P🥳du! (@ChennaiIPL)
click me!